ಬೆಳಗಾವಿ : ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಕೇಸ್ ನಲ್ಲಿ ಇದೀಗ ಮೊದಲ ತಲೆದಂಡವಾಗಿದ್ದು, ಖಾನಾಪುರದ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಮಂಜುನಾಥ್ ನಾಯಕ್ ಅಮಾನತುಗೊಂಡಿರುವ ಖಾನಾಪುರ ಸಿಪಿಐ. ಕರ್ತವ್ಯ ಲೋಪ ಆರೋಪದಲ್ಲಿ ಸಿಪಿಐ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬಿಜೆಪಿ ನಾಯಕರನ್ನು ಖಾನಾಪುರ ಠಾಣೆಯೊಳಗೆ ಬಿಟ್ಟು, ಬಿಜೆಪಿ ನಾಯಕರು ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಖಾನಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯ್ಕ್ ಅವರನ್ನು ಐಜಿಪಿ ವಿಕಾಸ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.