ಮೈಸೂರು : ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅವರನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಸಿ.ಟಿ. ರವಿ ಅವರನ್ನು ಮುಗಿಸುವ ಯತ್ನ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಇಂತಹ ಕೆಲಸಗಳಿಗೆ ಅವಕಾಶ ನೀಡಬಾರದು. ಸದನದಲ್ಲಿ ನಡೆದ ಘಟನೆ ಬಗ್ಗೆ ಸಭಾಪತಿ ನಿರ್ಧಾರ ಕೈಗೊಳ್ಳಬೇಕು ಎಂದರು.
ಸದನದಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯ ಕೇಳುವುದು ತಪ್ಪಲ್ಲ. ಸದನದಲ್ಲಿ ಸಮಸ್ಯೆಗೆ ಸ್ಪೀಕರ್ ಬಳಿ ದೂರು ನೀಡಬೇಕು. ಆಣೆ ಪ್ರಮಾಣ ಬಗ್ಗೆ ಮಾತನಾಡುವುದಲ್ಲ. ಯಾರ ಯಾರ ಯೋಗ್ಯತೆ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.