ಬೆಂಗಳೂರು : ಬೆಂಗಳೂರಿಗರ ನಿದ್ದೆ ಕೆಡಿಸಿದ್ದ ಚಡ್ಡಿಗ್ಯಾಂಗ್ ಇದೀಗ ಬೆಂಗಳೂರಿನ ಹೊರವಲಯಕ್ಕೂ ಕಾಲಿಟ್ಟಿದ್ದು, ಹೊಸಕೋಟೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊರ ವಲಯದ ಹೋಸಕೋಟೆಯ ಕುವೆಂಪು ನಗರದಲ್ಲಿ ಚಡ್ಡಿಗ್ಯಾಂಗ್ ಕಾಣಿಸಿಕೊಂಡಿದ್ದು, ಕುವೆಂಪು ನಗರದ ಗೋಡೌನ್ ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಚಡ್ಡಿಗ್ಯಾಂಗ್ ಸದಸ್ಯರು ಮೈ, ಕೈಗೆಲ್ಲಾ ಗ್ರೀಸ್ ಹಚ್ಚಿ, ಸೋಂಟದಲ್ಲಿ ಚಾಕು ಸೇರಿದಂತೆ ಇತರೆ ಟೂಲ್ಸ್ ಇಟ್ಟುಕೊಂಡು ಕಳ್ಳತನಕ್ಕೆ ಇಳಿಯುತ್ತಾರೆ. ಕುವೆಂಪು ನಗರದ ಗೋಡೌನ್ ನಲ್ಲಿ ಚಡ್ಡಿಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.