ಬೆಂಗಳೂರು : ಡಿಸೆಂಬರ್ 25 ರ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದು, ಇಂದು ಕ್ರಿಸ್ಮಸ್ ಹಿನ್ನೆಲೆಯಲ್ಲಿ ರಿಚರ್ಡ್ ಪಾರ್ಕ್ ಹತ್ತಿರ ಡೇವಿಸ್ ರಸ್ತೆಯಲ್ಲಿರುವ ಹೋಲಿ ಗೋಸ್ಟ್ ಚರ್ಚ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಕೆಳಕಂಡ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ
ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಿಂದ ಕುಕ್ಸನ್ ರಸ್ತೆ ಜಂಕ್ಷನ್ ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಹೀಗಿದೆ ಸಂಚಾರಿ ಸಲಹೆ
ಡೇವಿಸ್ ರಸ್ತೆ ಕಡೆಯಿಂದ ಹೆಚ್.ಎಂ ರಸ್ತೆ ಕಡೆಗೆ ಸಂಚರಿಸುವವರು ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಸಾಗಿ ವಿವಿಯಾನಿ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಂಚರಿಸಿ ಕುಕ್ಸನ್ ರಸ್ತೆಯಲ್ಲಿ ಎಡತಿರುವು ಪಡೆದು ಡೇವಿಸ್ ರಸ್ತೆ ತಲುಪಿ ನಂತರ ಡೇವಿಸ್ ರಸ್ತೆಯಲ್ಲಿ ಸ್ಮೃತಿರುವು ಪಡೆದು ಹೆಚ್.ಎಂ ರಸ್ತೆ ಕಡೆಗೆ ಹೋಗಬಹುದು ಎಂದು ತಿಳಿಸಲಾಗಿದೆ.
ಡೇವಿಸ್ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ವೀಲ್ಡರ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಹೇನ್ ರಸ್ತೆ ಮತ್ತು ಪ್ರಾಮಿನೇಡ್ ರಸ್ತೆಯಲ್ಲಿ ಎಲ್ಲಾ ರೀತಿ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮನಾಕ್ಷಿ ಕೋಯಿಲ್ ಸ್ಟ್ರೀಟ್ ಸೆಂಟ್ರಲ್ ಸ್ಟ್ರೀಟ್ ರಸ್ತೆ , ಸೆಂಟ್ರಲ್ ಸ್ಪೀಟ್ ರಸ್ತೆ ಮತ್ತು ನರೋನಾ ರಸ್ತೆ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣ 1ನೇ ಮತ್ತು 2ನೇ ಮಹಡಿ ಬಳಿಕ ವಾಹನ ಪಾರ್ಕಿಂಗ್ ಮಾಡಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.