ಬೆಳಗಾವಿ: ರಾಜ್ಯದಲ್ಲೇ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ವ್ಯಕ್ತಿಯೊಬ್ಬನನ್ನು ನಡು ರಸ್ತೆಯಲ್ಲೇ, ಹಾಡ ಹಗಲೇ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಾಡ ಹಗಲೇ, ನಡು ರಸ್ತೆಯಲ್ಲೇ ಸಾರ್ವಜನಿಕರ ಎದುರೇ ದುಷ್ಕರ್ಮಿಯೊಬ್ಬ ಅಟ್ಟಹಾಸವನ್ನು ಮರೆದಿದ್ದಾನೆ. ಹಳೆಯ ದ್ವೇಷದಿಂದ ಮುಕ್ತುಮ್ ತಟಗಾರ ಎಂಬುವರ ಮೇಲೆ ಆರೋಪಿ ಮುತ್ತು ಎಂಬಾತ ಕುಡುಗೋಲಿನಿಂದ 6ಕ್ಕೂ ಹೆಚ್ಚು ಬಾರಿ ಕೊಚ್ಚಿ ಪರಾರಿಯಾಗಿದ್ದಾನೆ.
ಹಾಡಹಗಲೇ ನಡೆದಂತ ಈ ಘಟನೆಯಿಂದ ಬೆಳಗಾವಿ ಜನರು ಬೆಚ್ಚಿ ಬಿದ್ದಿದ್ದಾರೆ. ಕುಡುಗೋಲಿನಿಂದ ಹಲ್ಲೆಗೆ ಒಳಗಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಂತ ಮುಕ್ತುಮ್ ತಟಗಾರನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಕೊಲೆಯತ್ನದ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕರ್ನಾಟಕದ ವಿರೋಧ ಪಕ್ಷದ ಜೋಡೆತ್ತುಗಳು ತಮ್ಮ ಹೇಳಿಕೆಗಳ ಮೂಲಕ ಜನತೆಗೆ ಮನರಂಜನೆ: ರಮೇಶ್ ಬಾಬು
ಜಗತ್ತಿನಲ್ಲಿ ಎಷ್ಟು ಸಾಲವಿದೆ.? ಯಾವ ದೇಶದ್ದು ಎಷ್ಟು.? ಭಾರತ ತೆಗೆದುಕೊಂಡದೆಷ್ಟು.? ಆಘಾತಕಾರಿ ವರದಿ ಬಹಿರಂಗ
ಸಿ.ಟಿ.ರವಿಗೆ ರಕ್ಷಣೆ ನೀಡಲು ರಾಜ್ಯಪಾಲರಿಗೆ ಮನವಿ, ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ