ತುಮಕೂರು: ಸೋಡಿಯಂ ಬಳಸಿ ಕೃಷಿ ಹೊಂಡದಲ್ಲಿ ಸ್ಪೋಟಿಸಿದ್ದಂತ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಡ್ರೋನ್ ಪ್ರತಾಪ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ಉಪಕಾರಾಗೃಹದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಇರಿಸಲಾಗಿತ್ತು. ನಿನ್ನೆ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಕೋರ್ಟ್ ಜಾಮೀನಿನ ನಂತ್ರ ಜಾಮೀನು ಷರತ್ತುಗಳನ್ನು ಪೂರೈಸಿದ ನಂತ್ರ, ಇದೀಗ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೃಷಿ ಹೊಂಡದಲ್ಲಿ ರಾಸಾಯನಿಕ ಬಳಸಿ ಸ್ಪೋಟಿಸಿದ್ದಂತ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಹಂಚಿಕೊಂಡಿದ್ದರು. ಸೋಡಿಯಂ ಮೆಟಲ್ ಬಳಸಿ ಸ್ಪೋಟಗೊಳಿಸಿದ್ದಂತ ವೀಡಿಯೋ ವೈರಲ್ ಆಗಿತ್ತು. ಜೊತೆಗೆ ಕೃಷಿ ಹೊಂಡದಲ್ಲಿ ರಾಸಾಯನಿಕ ಬಳಸಿ ಸ್ಪೋಟಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ, ಡ್ರೋನ್ ಪ್ರತಾಪ್ ಬಂಧಿಸಿ ಜೈಲಿಗಟ್ಟಿದ್ದರು.
‘ನಟ ಶಿವರಾಜ್ ಕುಮಾರ್’ಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ ‘ಸಿಎಂ ಸಿದ್ಧರಾಮಯ್ಯ’
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ