ಉಡುಪಿ: ಮನೆ ಬಿಟ್ಟು ಹೋಗಿದ್ದಂತ ಆ ಮಗ, ಇನ್ನೂ ವಾಪಾಸು ಬರೋದೇ ಇಲ್ಲ ಎಂಬುದಾಗೇ ಕುಟುಂಬಸ್ಥರು ತಿಳಿದುಕೊಂಡಿದ್ದರು. ಇಷ್ಟು ವರ್ಷ ಸತ್ತಿದ್ದಾನೋ, ಬದುಕಿದ್ದಾನೋ ಗೊತ್ತೇ ಇಲ್ಲದ ಸ್ಥಿತಿಯಲ್ಲೂ ಮರಳಿ ಬರಲಿ ಅಂತ ಗ್ರಾಮದಲ್ಲಿನ ದೇವರಿಗೆ ಕಾರಣಿಕವನ್ನು ಕುಟುಂಬಸ್ಥರು ಮಾಡುತ್ತಿದ್ದರು. ಇದರ ಫಲವಾಗಿ 28 ವರ್ಷಗಳ ಬಳಿಕ ಮನೆ ಬಿಟ್ಟು ಹೋಗಿದ್ದಂತ ಮಗ ಮರಳಿ ಬಂದಿದ್ದಾನೆ. ಅದೆಲ್ಲಿ ಈ ಘಟನೆ ನಡೆದಿರೋದು ಅಂತ ಮುಂದೆ ಓದಿ.
ಮೂರು ದಶಕಗಳ ಹಿಂದೆ ಮನೆ ಬಿಟ್ಟು ಹೋಗಿದ್ದಂತ ಮಗ, ಮನೆಗೆ ಮರಳಿ ಬಂದಿರುವಂತ ಘಟನೆ ಉಡುಪಿಯ ಹೆಬ್ರಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಪಡಕುಡೂರು ಗ್ರಾಮದ ಸುಂದರ ಪೂಜಾರಿ ಎಂಬುವರ ಮೂವರು ಮಕ್ಕಳಲ್ಲಿ ಭೋಜ ಪೂಜಾರಿ ಒಬ್ಬನೇ ಒಬ್ಬ ಮಗನಾಗಿದ್ದನು. ಆತ ಯಾವುದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದನಂತೆ.
ಅಂದಹಾಗೇ ಪಡುಕುಡೂರಿನ ಭದ್ರಕಾಳಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗೆ ಮಗ ಮರಳಿ ಮನೆಗೆ ಬರಲಿ ಅಂತ ಚಾಕರಿಕೆಯನ್ನು ಸುಂದರ ಪೂಜಾರಿ ಸಲ್ಲಿಸುತ್ತಿದ್ದರಂತೆ. ಇದರ ಫಲವಾಗಿ ಈಗ ಬರೋಬ್ಬರಿ 28 ವರ್ಷಗಳ ಬಳಿಕ ಭೋಜ ಪೂಜಾರಿ ಮರಳಿ ಮನೆಗೆ ಬಂದಿದ್ದಾನೆ. ಆತನನ್ನು ಕಂಡಂತ ಕುಟುಂಬಸ್ಥರು, ಗ್ರಾಮಸ್ಥರು ಸಂಭ್ರಮ ಪಟ್ಟಿದ್ದಾರೆ.
ಇನ್ನೂ ಮನೆ ಬಿಟ್ಟು ಹೋಗಿದ್ದಂತ ಭೋಜ ಪೂಜಾರಿಯನ್ನು ಆತನ ಕೈಯಲ್ಲಿದ್ದಂತ ಒಂದು ಗುಳ್ಳೆಯಿಂದ ತಂದೆ ಪತ್ತೆ ಹಚ್ಚಿದ್ದಾರೆ. ಈಗ ಭೋಜ ಪೂಜಾರಿ ಮದುವೆಯಾಗಿದ್ದು, ಪತ್ನಿ, ಮಗಳ ಜೊತೆಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡು ಇರುವುದಾಗಿ ತಿಳಿಸಿದ್ದಾನೆ. ಊರಿಗೆ ಬಂದು ನೆಲೆ ಕಂಡುಕೊಳ್ಳುವ ಆಸೆಯಿಂದ ಮರಳಿ ಬಂದಿರೋದಾಗಿ ತಿಳಿಸಿದ್ದಾಗಿ ತಿಳಿದು ಬಂದಿದೆ.
BREAKING: ಇನ್ಮುಂದೆ ಡಿ.26ರಂದು ಪ್ರತಿ ವರ್ಷ ‘ಗ್ರಾ.ಪಂ ಡಾಟಾ ಆಪರೇಟರ್’ಗಳ ದಿನವಾಗಿ ಆಚರಣೆ: ಸಚಿವ ಪ್ರಿಯಾಂಕ್ ಖರ್ಗೆ