ಹುಬ್ಬಳ್ಳಿ: ರಾಜ್ಯದ ವಿವಿಧ ಠಾಣೆಯಲ್ಲಿ ರೈತರ ಮೇಲೆ ದಾಖಲಾಗಿರುವಂತ ಕೇಸ್ ಹಿಂಪಡೆಯುವ ಬಗ್ಗೆ ಸಂಪುಟ ಸಭೆಯಲ್ಲಿ ಇರಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಶೀಘ್ರವೇ ನಿರ್ಧಾರವನ್ನು ಪ್ರಕಟಿಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ನೂತನ ಪೊಲೀಸ್ ಠಾಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ರೀತಿಯಲ್ಲೇ ರೈತರ ಮೇಲಿನ ಕೇಸ್ ಹಿಂಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದರು.
2 ವರ್ಷಗಳ ಕಾಲ ಅವರು ಜೈಲಿನಲ್ಲಿದ್ದರು. ಪ್ರಕರಣ ರದ್ದು ಮಾಡುವಂತೆ ಸತತವಾಗಿ ಮನವಿಗಳು ಬಂದಿದ್ದವು. ಅದಾದ ನಂತ್ರ ಸಂಪುಟದಲ್ಲಿ ಪ್ರಕರಣ ವಾಪಾಸ್ ಪಡೆದಿದ್ದೇವೆ. ಅದೇ ರೀತಿ ರೈತರ ಮೇಲೆ ಹಾಕಿರುವ ಕೇಸ್ ಹಿಂಪಡೆಯಲು ಆಗ್ರಹಗಳು ಬರುತ್ತಿವೆ. ಈ ವಿಚಾರವನ್ನು ಸಂಪುಟದಲ್ಲಿ ಇರಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂಬುದಾಗಿ ತಿಳಿಸಿದರು.
BIG NEWS: ಬೆಂಗಳೂರಿನ ಜನರೇ ಗಮನಿಸಿ: ಇನ್ಮುಂದೆ ‘ಕಬ್ಬನ್ ಪಾರ್ಕ್’ನಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ಕಡ್ಡಾಯ
ವಿವಸ್ತ್ರಗೊಳಿಸಿ, ಥಳಿಸಿ, ಮೂತ್ರ ವಿಸರ್ಜನೆ: ದಲಿತ ಯುವಕ ಆತ್ಮಹತ್ಯೆ | Dalit Teen