ಇಸ್ತಾಂಬುಲ್: ವಾಯುವ್ಯ ಟರ್ಕಿಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಬಲಿಕೆಸಿರ್ ಪ್ರಾಂತ್ಯದಲ್ಲಿರುವ ಕಾರ್ಖಾನೆಯ ಕ್ಯಾಪ್ಸುಲ್ ಉತ್ಪಾದನಾ ಸೌಲಭ್ಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಏಜೆನ್ಸಿ ತಿಳಿಸಿದೆ.
#WATCH | 12 people killed in ammunition factory blast in Northwest Turkey#TurkeyBlast #AmmunitionFactoryBlast #TurkeyTragedy #TurkeyDisaster pic.twitter.com/9CGpux6cxK
— CLR.CUT (@clr_cut) December 24, 2024
ಸ್ಫೋಟದಿಂದ ಕ್ಯಾಪ್ಸೂಲ್ ಉತ್ಪಾದನಾ ಕಟ್ಟಡ ಕುಸಿದಿದೆ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೆ ಸಣ್ಣ ಹಾನಿಯಾಗಿದೆ ಎಂದು ಬಲಿಕೆಸಿರ್ ಗವರ್ನರ್ ಇಸ್ಮಾಯಿಲ್ ಉಸ್ತಾಗ್ಲು ಹೇಳಿದ್ದಾರೆ.
ಮದ್ದುಗುಂಡು ಕಾರ್ಖಾನೆಯಲ್ಲಿನ ಸ್ಪೋಟದ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದು ಬ್ರೇಕಿಂಗ್ ನ್ಯೂಸ್ ಆಗಿದ್ದು, ಹೆಚ್ಚಿನ ವಿವರಗಳನ್ನು ಸೇರಿಸಲಾಗುವುದು.
ವಿವಸ್ತ್ರಗೊಳಿಸಿ, ಥಳಿಸಿ, ಮೂತ್ರ ವಿಸರ್ಜನೆ: ದಲಿತ ಯುವಕ ಆತ್ಮಹತ್ಯೆ | Dalit Teen