ಬೆಂಗಳೂರು: ರಾಜ್ಯದ ವಿಶೇಷಚೇತನರ ರಿಯಾಯಿತಿ ಬಸ್‌ಪಾಸ್ ವಿತರಿಸುವ ಸಂಬಂಧ ಕೆ ಎಸ್ ಆರ್ ಟಿಸಿಯಿಂದ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಹಂಚಿಕೊಂಡಿದ್ದು, 2025ನೇ ಸಾಲಿನ ವಿಶೇಷಚೇತನರ ರಿಯಾಯಿತಿ ಪಾಸುಗಳ ವಿತರಣೆ / ನವೀಕರಣವನ್ನು ದಿನಾಂಕ:30.12.2024ರಿಂದ ಪ್ರಾರಂಭಿಸಲಾಗುವುದು ಎಂದಿದೆ.
ಇನ್ನೂ ಫಲಾನುಭವಿಗಳು ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಿರುತ್ತದೆ. 2024ನೇ ಸಾಲಿನಲ್ಲಿ ವಿತರಿಸಿರುವ ಬಸ್‌ಪಾಸ್ ಗಳನ್ನು ದಿನಾಂಕ: 28.02.2025 ರವರೆಗೆ ಮಾನ್ಯ ಮಾಡಲಾಗುವುದು ಎಂದು ತಿಳಿಸಿದೆ.
BIG NEWS: ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ವಿರುದ್ಧ ಕಾನೂನು ಸಮರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್