ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ 2024-25 ನೇ ಸಾಲಿನಲ್ಲಿ ಪ್ರವಾಸೋದ್ಯಮ/ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಪ್ಟ್ ಇನ್ಸ್‍ಟ್ಯೂಟ್(ಎಪ್‍ಸಿಐ), ಮೈಸೂರು ಹಾಗೂ ಇನ್ಸ್‍ಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್(ಐಎಚ್‍ಎಂ) ಬೆಂಗಳೂರು ಅವರ ಮೂಲಕ ವಸತಿ ಸಹಿತ ಕಾರ್ಯಕ್ರಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಫುಡ್ ಮತ್ತು ಬೇವರೇಜ್ ಸರ್ವೀಸ್ ಸ್ಟೀವರ್ಡ್ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬೇಕು. ತರಬೇತಿ ಅವಧಿ 4 ತಿಂಗಳು, ಪ್ರತಿ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ 100 ಪ್ರತಿ ತರಬೇತಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಗುರಿ 49 ಆಗಿದೆ. ರೂಮ್ ಅಟೆಂಡೆಂಟ್ ವಿದ್ಯಾರ್ಹತೆ 5 ನೇ ತರಗತಿ ಪಾಸ್, ಅವಧಿ 4 ತಿಂಗಳು, ಪ್ರತಿ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ 30 ಪ್ರತಿ ತರಬೇತಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಗುರಿ 19 ಆಗಿದೆ.
ಪ್ರಂಟ್ ಆಫೀಸ್ ಅಸೋಷಿಯೇಟ್ ತರಬೇತಿಗೆ 12 ನೇ ತರಗತಿ ಪಾಸ್ ಆಗಿರಬೇಕು. ಅವಧಿ 4 ತಿಂಗಳು, ಪ್ರತಿ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ 15 ಪ್ರತಿ ತರಬೇತಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಗುರಿ 5 ಆಗಿದೆ. ಮಲ್ಟಿ ಕ್ಯೂಸಿನ್ ಕುಕ್ ವಿದ್ಯಾರ್ಹತೆ 8ನೇ ತರಗತಿ ಪಾಸ್, ಅವಧಿ 5 ತಿಂಗಳು, ಪ್ರತಿ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ 147, ಪ್ರತಿ ತರಬೇತಿಗೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಗುರಿ 89 ಆಗಿದೆ. ಈ ಎಲ್ಲಾ ತರಬೇತಿಗೆ 20 ರಿಂದ 45 ವರ್ಷದೊಳಗಿರಬೇಕು.
ತರಬೇತಿ ಪಡೆಯಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದ್ವಿ-ಪ್ರತಿಯಲ್ಲಿ ಡಿಸೆಂಬರ್, 28 ರ ಸಂಜೆ 5 ಗಂಟೆಯೊಳಗೆ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂ.ಸಂ.08272-200519 ಅಥವಾ ಈ-ಮೇಲ್: ddkodagutourism@gmail.com ಗೆ ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.
ಗಮನಿಸಿ: ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟ
Watch Video: ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾ: ಸ್ಥಳದಲ್ಲಿ ಬಿಗುವಿನ ವಾತಾವರಣ | Actor Allu Arjun