ಬೆಳಗಾವಿ: ಹೆರಿಗೆಗಾಗಿ ದಾಖಲಾಗಿದ್ದಂತ ಬಾಣಂತಿಯೋರ್ವಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವಂತ ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ಮುಂದುವರೆದಿವೆ.
ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ಹುಕ್ಕೇರಿ ತಾಲ್ಲೂಕಿ ಗೌಡವಾಡ ಗ್ರಾಮ ವೈಶಾಲಿ ಬಾಳಪ್ಪ ಎಂಬುವರನ್ನು ದಾಖಲಿಸಲಾಗಿತ್ತು. ಇಂದು ದಿಢೀರ್ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬಾಣಂತಿ ವೈಶಾಲಿ ಬಾಳಪ್ಪ ಸಾವು ವೈದ್ಯರ ನಿರ್ಲಕ್ಷ್ಯದಿಂದ ಆಗಿರುವಂತದ್ದು. ಅವರಿಗೆ ಯಾವ ಮೆಡಿಸಿನ್ ಕೊಟ್ಟಿದ್ದಾರೋ ಗೊತ್ತಿಲ್ಲ. ಇದಂತೂ ವೈದ್ಯರ ನಿರ್ಲಕ್ಷ್ಯದಿಂದ ಆಗಿರುವಂತದ್ದು ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಣಂತಿ ವೈಶಾಲಿ ಬಾಳಪ್ಪ ಮರಣೋತ್ತರ ಪರೀಕ್ಷೆಗೆ ಬಿಡುವುದಿಲ್ಲ. ಬಾಣಂತಿ ಸಾವಿಗೆ ನ್ಯಾಯ ಸಿಗೋವರೆಗೂ ಬಿಡುವುದಿಲ್ಲ ಅಂತ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
BREAKING: ವಿವಾದದ ನಡುವೆಯೂ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ: ಪೊಲೀಸರಿಂದ ಸೀಜ್
‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ: ದಿಗ್ವಿಜಯ್ ಸಿಂಗ್
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ