ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿರುವಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ಮೇಲೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾರಣಾಂತಿಕ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ರಾಜು ಎಂಬುವರೇ ಹಲ್ಲೆಗೊಳಗಾದಂತವರಾಗಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಕೊರತೆಯ ಕಾರಣದಿಂದ ಆಂತರೀಕ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ. ಈ ಕಾರಣದಿಂದಾಗಿಯೇ ವಿದ್ಯಾರ್ಥಿಗಳೊಂದಿಗೆ ಕಾಲೇಜಿಗೆ ಆಗಮಿಸಿದಂತ ಪೋಷಕರು ರಾಜು ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಇತಿಹಾಸ ಉಪನ್ಯಾಸಕ ರಾಜು ಅವರು, ಕೆಲವು ವಿದ್ಯಾರ್ಥಿಗಳು ಸರಿಯಾಗಿ ಕಾಲೇಜಿಗೆ ಬಾರುತ್ತಿರಲಿಲ್ಲ. ಸರಿಯಾಗಿ ಕಾಲೇಜಿಗೆ ಆಗಮಿಸಿ, ತರಗತಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೂ ಕಾಲೇಜಿಗೆ ಬಾರದೇ ಹಾಜರಾತಿ ಕೊರತೆ ಉಂಟಾಗಿತ್ತು. ಹೀಗಾಗಿ ಆಂತರೀಕ ಪರೀಕ್ಷೆಯನ್ನು ನೀಡಿರಲಿಲ್ಲ. ಇದರಿಂದ ಸಿಟ್ಟುಕೊಂಡು ಇಂದು ಪೋಷಕರ ಜೊತೆಗೆ ಆಗಮಿಸಿ, ತಮ್ಮ ಮೇಲೆ ವಿದ್ಯಾರ್ಥಿಗಳ ಜೊತೆ ಸೇರಿ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಆರೋಪಿಸಿದರು.
ಇನ್ನೂ ವಿದ್ಯಾರ್ಥಿಯೊಬ್ಬರ ಪೋಷಕ ವಿಜಯ್ ಕುಮಾರ್ ಎಂಬುವರು ಮಾತನಾಡಿ, ನನ್ನ ಮಗನಿಗೆ ಪರೀಕ್ಷೆ ಕೊಟ್ಟಿಲ್ಲ. ಕಾಲೇಜಿಗೆ ಬಾರದೇ ಇದ್ದರೇ ತಿಳಿಸುವಂತೆ ಮನವಿ ಮಾಡಲಾಗಿತ್ತು. ಆದರೇ ಹಾಗೆ ಮಾಡದೇ ಹಾಜರಾತಿ ಕಡಿಮೆ ಆಗಿದೆ ಎನ್ನುವ ಕಾರಣಕ್ಕೆ ಪರೀಕ್ಷೆ ನೀಡಿರಲಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ದುಂಡಾವರ್ತನೆ ತೋರಿ, ನನ್ನ ಮಗನ ಮೇಲೆ ಹಲ್ಲೆ ಮಾಡಿದರು. ಅಲ್ಲದೇ ನನ್ನನ್ನು ಏಕವಚನದಲ್ಲೇ ಸಂಬೋಧಿಸಿ, ಹೊಡೆಯಲು ಬಂದರು. ಹೀಗಾಗಿ ಜಗಳ ಉಂಟಾಗಿ ಹಲ್ಲೆ ನಡೆದಿದೆ. ಮೊದಲು ಉಪನ್ಯಾಸಕ ರಾಜು ಅವರೇ ಹೊಡೆದಿದ್ದು, ಆ ಬಗ್ಗೆ ಬೇಕಾದರೇ ಕಾಲೇಜಿನ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ ಚೆಕ್ ಮಾಡಿ. ವಿದ್ಯಾರ್ಥಿಗಳಿಗೆ ಇತಿಹಾಸ ಉಪನ್ಯಾಸಕ ರಾಜು ಸುಖಾ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಿ.ಟಿ ರವಿ ಅವಾಶ್ಯ ಶಬ್ದ ಬಳಕೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದೇನು ಗೊತ್ತಾ.?
BREAKING : ಗದಗದಲ್ಲಿ ಭೀಕರ ಮರ್ಡರ್ : ಮನೆಗೆ ನುಗ್ಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯ ಬರ್ಬರ ಹತ್ಯೆ!