ಹುಬ್ಬಳ್ಳಿ: ಸುವರ್ಣ ಸೌಧದಲ್ಲಿ ಅಧಿವೇಶನದ ಕೊನೆಯ ದಿನದಂದು ನಡೆದಂತ ಘಟನೆಯಿಂದಾಗಿ ಪರಿಷತ್ ಸದಸ್ಯರ ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಸದಸ್ಯರು ದೂರು ನೀಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿರುವ ನಿವಾಸದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದಂತ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿಎಸ್ ಅರುಣ್ ಹಾಗೂ ಪರಿಷತ್ತಿನ ಶಾಸಕ ಎನ್ ರವಿ ಕುಮಾರ್ ಅವರು ದೂರು ನೀಡಿದರು.
ಬಿಜೆಪಿ ಸದಸ್ಯರು ಸಲ್ಲಿಸಿರುವಂತ ದೂರಿನಲ್ಲಿ ದಿನಾಂಕ 19/12/2024 ಗುರುವಾರದಂದು ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಕಲಾಪದ ನಂತರದ ನಡೆದ ಘಟನೆಗಳು ವಿಧಾನಪರಿಷತ್ತು ಶಾಸಕ ಸಿ.ಟಿ ರವಿ ಮತ್ತು ಭಾಜಪದ ವಿಧಾನ ಪರಿಷತ್ ಶಾಸಕರುಗಳ ಹಕ್ಕುಚ್ಯುತಿ ಆಗಿದೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶಾಸಕರಿಗೆ ಆಗಿರುವ ಹಕ್ಕುಚ್ಯುತಿಗೆ ನ್ಯಾಯ ದೊರಕಿಸಬೇಕೆಂದು ಕೋರಿದ್ದಾರೆ.
BIG NEWS: ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಬಿ.ವೈ ವಿಜಯೇಂದ್ರ, ಆರ್.ಅಶೋಕ್, ಸಿ.ಟಿ ರವಿ ಹೇಳಿದ್ದೇನು?