ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಂಡಿಸಲಾದಂತ ಮಸೂಧೆ ಸಂಬಂಧ ಚರ್ಚಿಸಲು ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದೆ. ಇದೀಗ ಬಿಜೆಪಿ ಸಂಸದ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ 39 ಸದಸ್ಯರ ಜೆಪಿಸಿ ಸಮಿತಿ ರಚಿಸಲಾಗಿದೆ.
ಇಂದು ರಾಜ್ಯಸಭೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಸದಸ್ಯರಾದಂತ ಪಿ.ಪಿ ಚೌಧರಿ ಅಧ್ಯಕ್ಷತೆಯಲ್ಲಿ ಸದಸ್ಯರನ್ನು ನೇಮಿಸಿ ಆದೇಶಿಸಿದ್ದಾರೆ. ಈ ಸಮಿತಿಯಲ್ಲಿ ಲೋಕಸಭೆಯ ಸದಸ್ಯರಾದಂತ ಡಾ.ಸಿಎಂ ರಮೇಶ್, ಬನ್ಸೂರಿ ಸ್ವರಾಜ್, ಪರ್ಸೋತ್ತಮಬಾಯ್ ರೂಪಲ, ಅನುರಾಗ್ ಸಿಂಗ್ ಠಾಕೋರ್, ವಿಷ್ಣು ದಯಾಳ್ ರಾಮ್, ಭಾತೃಹರಿ ಮಹತಬ್, ಸಂಬಿತ್ ಪಾತ್ರ, ಅನೀಲ್ ಬಾಲುನಿ, ವಿಷ್ಣು ದತ್ ಶರ್ಮಾ, ಬೈಜಯಂತ್ ಪಾಂಡು, ಡಾ.ಸಂಜಯ್ ಜೈಸ್ವಾಲ್, ಪ್ರಿಯಾಂಕ ಗಾಂಧಿ ವಾದ್ರ, ಮನೀಶ್ ತಿವಾರಿ, ಸುಖ್ ದೇವ್ ಭಗತ್, ಧರ್ಮೇಂದ್ರ ಯಾದವ್, ಛೋಟೆಲಾಲ್, ಕಲ್ಯಾಣ್ ಬ್ಯಾನರ್ಜಿ, ಟಿಎಂ ಸೆಲ್ವಗಣಪತಿ, ಜಿಎಂ ಹರೀಶ್ ಬಾಲಯೋಗಿ, ಅನಿಲ್ ಯಶ್ವಂತ್ ದೇಸಾಯಿ, ಸುಪ್ರೀಯ ಸೂಲೆ, ಡಾ.ಶ್ರೀಕಾಂತ್ ಏಕನಾಥ್ ಸಿಂಧೆ, ಶಾಂಭವಿ, ಕೆ.ರಾಧಾಕೃಷ್ಣನ್, ಚಂದ್ರ ಚೌವ್ಹಾಣ್, ಬಾಲಶೌರ್ಯ ವಲ್ಲಭನೇನಿ ಒಳಗೊಂಡಿದ್ದಾರೆ.
ಇನ್ನೂ ರಾಜ್ಯಸಭೆಯ ಸದಸ್ಯರಾದಂತ ಜ್ಞಾಶ್ಯಂ ತಿವಾರಿ, ಭುವನೇಶ್ವರ ಕಲಿತ, ಡಾ.ಕೆ ಲಕ್ಷ್ಮಣ್, ಕವಿತ ಪಾಟಿದಾರ್, ಸಂಜಯ್ ಕುಮಾರ್ ಜಾ, ರಣಧೀಪ್ ಸಿಂಗ್ ಸುರ್ಜೇವಾಲಾ, ಮುಖುಲ್ ಬಾಲಕೃಷ್ಣ ವೈಷ್ಣಿಕ್, ಸಂಕೇತ್ ಘೋಖಲೆ, ಪಿ ವಿಲ್ಸನ್, ಸಂಜಯ್ ಸಿಂಗ್, ಮಾನಸ ರಾಜನ್ ಮಂಗರಾಜ್ ಹಾಗೂ ವಿ ವಿಜಯಸಾಯಿ ರೆಡ್ಡಿ ಸೇರಿದ್ದಾರೆ.
27 members from Lok Sabha; 12 from Rajya Sabha in Joint Parliamentary Committee (JPC) for 'One Nation One Election'
BJP MP PP Chaudhary appointed as the Chairperson of JPC pic.twitter.com/Ab3L7bX96k
— ANI (@ANI) December 20, 2024
ಡಿ.22ರಂದು ಸಿಎಂ ಸಿದ್ಧರಾಮಯ್ಯ ‘ಕಲಬುರ್ಗಿ ಜಯದೇವ ಆಸ್ಪತ್ರೆ’ ಉದ್ಘಾಟನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ