ಶಿವಮೊಗ್ಗ: ಓದಿ ಉತ್ತಮ ಸಾಧನೆ ಮಾಡಿ, ತಂದೆ-ತಾಯಿಗಳಿಗೆ, ನೆರೆ ಹೊರೆಯವರಿಗೆ, ಸಮಾಜಕ್ಕೆ ಕೀರ್ತಿ ತರಬೇಕು. ಸಾಧನೆ ಮಾಡಿ ಸಮಾಜ ಸೇವೆ ಮಾಡಬೇಕು ಎನ್ನುವ ಹಂಬಲ, ತುಡಿತವಿದ್ದಂತ ಬಾಲಕಿಗೆ ಅನಾರೋಗ್ಯ ಪೀಡಿತಳಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷ ಲಕ್ಷ ಖರ್ಚು ಮಾಡಿರುವಂತ ಬಡ ಕುಟುಂಬ, ಈಗ ನಿಮ್ಮಂತ ಓದುಗರ ನೆರವು, ಸಹಕಾರ ಕೋರುತ್ತಿದೆ. ನಿಮ್ಮ ಸಹಾಯ, ನೆರವಿಗಾಗಿ ಆ ಬಾಲಕಿಯ ಸಮಸ್ಯೆ ಏನು ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮುರಿ ಬಳಿಯ ಮಾರ್ಲಗೋಡು ಗ್ರಾಮದ 9ನೇ ತರಗತಿ ಬಾಲಕಿ ಅಂಕಿತ ಓದಿನಲ್ಲಿ ಬಲು ಚುರುಕು. ಓದಿ ಉತ್ತಮ ಸಾಧನೆ ಮಾಡಿ, ಸಾಮಾಜಿಕ ಸೇವೆ ಮಾಡುವ ಹಂಬಲವಿದ್ದಂತ ಈ ಬಾಲಕಿಗೆ ಗೊತ್ತೇ ಇರದಂತೆ ಬೋನ್ಸ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ವೈದ್ಯರಿಂದ ಈ ವಿಚಾರ ತಿಳಿದಂತ ಅಂಕಿತ ತಂದೆ ಸಂತೋಷ್, ತಾಯಿ ರತ್ನಮ್ಮ ಕೂಲಿ ನಾಲಿ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ತಮ್ಮ ಮಗಳನ್ನು ಉಳಿಸಿಕೊಳ್ಳೋದಕ್ಕೆ ಈಗಾಗಲೇ ಲಕ್ಷ ಲಕ್ಷ ಖರ್ಚು ಮಾಡಿದ್ದು, ಇನ್ನೂ ಚಿಕಿತ್ಸೆಗಾಗಿ 5 ರಿಂದ 6 ಲಕ್ಷ ಬೇಕು. ಚಿಕಿತ್ಸೆ ನೀಡಿದರೇ ಸರಿಯಾಗಲಿದೆ ಎಂಬುದಾಗಿ ವೈದ್ಯರು ಹೇಳುತ್ತಿದ್ದಾರೆ. ದಯವಿಟ್ಟು ಕೊಡುಗೈ ದಾನಿಗಳು ಸಹಾಯ, ನೆರವಾಗಿ ಅಂತ ಓದುಗರಾದಂತ ನಿಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕುಮಾರಿ ಅಂಕಿತಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಚಿಕಿತ್ಸೆಗೆ ಸಹೃದಯ ದಾನಿಗಳು ನೆರವಾಗುವಂತೆ ಸಹೋದರಿ ಅನುಷಾ ಕೋರಿದ್ದಾರೆ.
ಸಹಾಯ ಮಾಡಿ, ಈ ಬಾಲಕಿ ಚಿಕಿತ್ಸೆಗೆ ನೆರವಾಗಿ
ಕುಮಾರಿ ಅಂಕಿತ ಚಿಕಿತ್ಸೆಗಾಗಿ ನೀವು ಸಹಾಯ ಮಾಡಲು ಇಚ್ಚಿಸಿದಲ್ಲಿ ಮಂಜುನಾಥ – 9481285341 ಗೆ ನಿಮ್ಮ ಕೈಲಾದಷ್ಟು ನೆರವನ್ನು ಪೋನ್ ಪೇ, ಜಿ ಪೇ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ಅಂಕಿತ ಸಹೋದರಿ ಅನುಷಾ ಮಾರಲಗೋಡು ಮೊಬೈಲ್ ಸಂಖ್ಯೆ 9481551098 ಗೆ ಕರೆ ಮಾಡಿ ಪಡೆಯಬಹುದುದು.
ಕುಮಾರಿ ಅಂಕಿತ ಸಹೋದರಿ ಅನುಷಾ ಅವರ ಈ ಕೆಳಕಂಡ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಯೂ ನೀವು ನಿಮ್ಮ ಕೈಲಾದ ಸಹಾಯವನ್ನು ಮಾಡಬಹುದಾಗಿದೆ.
ಇನ್ನೂ ಬ್ಯಾಂಕ್ ಖಾತೆಗೆ ನಿಮ್ಮ ನೆರವು ಮಾಡುವುದಾದರೇ, ಮಂಜುನಾಥ.ಡಿ, ಅಕೌಂಟ್ ನಂಬರ್ 19132200054602, IFSC CODE: CNRB0011913, ಕೆನರಾ ಬ್ಯಾಂಕ್, ಮೂರು ಕೈ ರೋಡ್, ತುಮುರಿ ಪೋಸ್ಟ್, ಸಾಗರ ತಾಲ್ಲೂಕು. ಈ ಖಾತೆಗೆ ಮಾಡುವಂತೆ ಅಂಕಿತ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಮಲೆನಾಡಲ್ಲಿ ‘ಹೊಸ ವರ್ಷ ಆಚರಣೆ’ ಆಸೆ ಇದೆಯೇ? ಇಲ್ಲಿದೆ ಸುವರ್ಣಾವಕಾಶ | Malnad Karnival New Year Celebration