ಬೆಂಗಳೂರು : ರಾಜ್ಯದಲ್ಲಿ ಇ-ಖಾತಾ ಕಡ್ಡಾಯದ ಬೆನ್ನಲ್ಲೇ ಆಸ್ತಿ ನೋಂದಣಿ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದ್ದು, ಮುದ್ರಾಂಕ ಶುಲ್ಕದ ಪ್ರಮಾಣ ಸರಾಸರಿ 45 ರಿಂದ 50 ಕೋಟಿ ರೂ.ಗೆ ಇಳಿಕೆಯಾಗಿದೆ.
ರಾಜ್ಯ ಸರ್ಕಾರವು ಅ.29 ರಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದ್ದು, ಆಸ್ತಿ ನೋಂದಣಿ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡಿದೆ. ನಿತ್ಯ ಸರಾಸರಿ 90 ರಿಂದ 100 ಕೋಟಿ ರೂ. ಸಂಗ್ರಹವಾಗುತ್ತಿದ್ದ ಆದಾಯ 50 ಕೋಟಿ ರೂ.ಗೆ ಇಳಿಕೆಯಾಗಿದೆ. ಪರಿಣಾಮ ನವೆಂಬರ್ ತಿಂಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ 1,265 ಕೋಟಿ ರೂ.ಗೆ ಕುಸಿದಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಇ-ಖಾತಾ ಕಡ್ಡಾಯ ನಿಯಮವು ನಕಲು, ಅಕ್ರಮ ಆಸ್ತಿ ತೆರಿಗೆ ತಪ್ಪಿಸುವಿಕೆಯಂತಹ ಅಕ್ರಮಗಳ ತಡೆಯಲು ಸೂಕ್ತ ವ್ಯವಸ್ಥೆ, ಆದರೆ ಗ್ರಾಮೀಣಾಭಿವೃದ್ಧ ಇಲಾಖೆ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆ ತರಾತುರಿಯಲ್ಲಿ ಕಡ್ಡಾಯ ಮಾಡಿದ್ದರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.