ಬೆಂಗಳೂರು : ಹಿರಿಯ ಭಾಷಾ ವಿದ್ವಾಂಸ ಹಾಗೂ ಸಂಶೋಧಕ ಪ್ರೊ.ಕೆ.ವಿ.ನಾರಾಯಣ ಅವರ ‘ನುಡಿಗಳ ಅಳಿವು’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕನ್ನಡದ ಖ್ಯಾತ ವಿಮರ್ಶಕರು, ಭಾಷಾ ವಿದ್ವಾಂಸರೂ ಆಗಿರುವ ಪ್ರೊ.ಕೆ.ವಿ.ನಾರಾಯಣ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ‘ನುಡಿಗಳ ಅಳಿವು’ ವಿಮರ್ಶಾ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ನವದೆಹಲಿಯಲ್ಲಿ ಮಾರ್ಚ್ 8 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರೊ. ಕೆ.ವಿ ನಾರಾಯಣ ಅವರು ‘ಕನ್ನಡ ಜಗತ್ತು–ಅರ್ಧ ಶತಮಾನ’, ‘ಭಾಷೆಯ ಸುತ್ತಮುತ್ತ’, ಸಾಹಿತ್ಯ ತತ್ವ–ಬೇಂದ್ರೆ ದೃಷ್ಟಿ’, ‘ಧ್ವನ್ಯಾಲೋಕ–ಒಂದು ಅಧ್ಯಯನ’, ‘ನಮ್ಮೊಡನೆ ನಮ್ಮ ನುಡಿ’, ‘ಬೇರು ಕಾಂಡ ಚಿಗುರು’, ‘ಕನ್ನಡ ಶೈಲಿ ಕೈಪಿಡಿ’ ಸೇರಿದಂತೆ 22ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.