ಉತ್ತರ ಕನ್ನಡ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಅಮಾನವೀಯ ಕೃತ್ಯ ಎನ್ನುವಂತೆ ನೂರಾರು ನಾಯಿಗಳಿಗೆ ವಿಷಪ್ರಾಶನ ಮಾಡಿ ಮಾರಣಹೋಮ ಮಾಡಿರುವಂತ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ತೂಕದಬೈಲ್ ಬಳಿಯ ಹೆದ್ದಾರಿಯಲ್ಲಿ ನಾಯಿಗಳ ಮಾರಣಹೋಮವನ್ನೇ ಮಾಡಲಾಗಿದೆ. ಟ್ರಕ್ ನಲ್ಲಿ ನೂರಾರು ನಾಯಿಗಳನ್ನು ಹಿಡಿದು ತಂದು ವಿಷಪ್ರಾಶನ ಮಾಡಿರುವುದಾಗಿ ಹೇಳಲಾಗುತ್ತಿದೆ.
ನಲವತ್ತಕ್ಕೂ ಹೆಚ್ಚು ನಾಯಿಗಳಿಗೆ ವಿಷಪ್ರಾಶನವನ್ನು ದುರುಳರು ಮಾಡಿದ್ದಾರೆ. ಇನ್ನೂ ರೋಗ ಮತ್ತು ಗಾಯಗಳಿಂದ ಕೆಲವು ನಾಯಗಳು ನರಳಾಡುತ್ತಿರುವುದನ್ನು ಕಂಡರೇ ಇವರೆಂಥ ಅಮಾನವೀಯರು ಎನ್ನುವುದು ತಿಳಿದು ಬರುವಂತಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
BIG NEWS: ದೇವಸ್ಥಾನ ಹಾಗೂ ರೈತರ ಜಮೀನು ‘ವಕ್ಫ್’ಗೆ ಸೇರ್ಪಡೆ ಇಲ್ಲ: ಸಚಿವ ಜಮೀರ್ ಅಹಮದ್ ಸ್ಪಷ್ಟನೆ