ಬೆಂಗಳೂರು: ಪಿತ್ತಕಲ್ಲು ಮತ್ತು ಸೋಂಕಿತ ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಸುಧಾರಿತ ರೋಬೋಟ್ ನೆರವಿನ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು.
ಫೋರ್ಟಿಸ್ ಆಸ್ಪತ್ರೆಯ ಮಿನಿಮಲ್ ಆಕ್ಸೆಸ್ ಮತ್ತು ರೊಬೊಟಿಕ್ ಜನರಲ್ ಸರ್ಜರಿ ನಿರ್ದೇಶಕ ಡಾ. ಶ್ರೀಧರ ವಿ ಮಾತನಾಡಿ, 93 ವರ್ಷದ ಸೋಮೇಶ್ (ಹೆಸರು ಬದಲಾಯಿಸಲಾಗಿದೆ) ಎಂಬ ರೋಗಿಯು 4-6 ದಿನಗಳಿಂದ ತೀವ್ರ ಹೊಟ್ಟೆ ನೋವು ಅನುಭವಿಸುತ್ತಿದ್ದರು. ಸಾಕಷ್ಟು ಕಡೆ ತೋರಿಸಿದರೂ ಸೂಕ್ತ ಕಾರಣ ತಿಳಿದಿರಲಿಲ್ಲ.
ಬಳಿಕ ಅವರು ಫೋರ್ಟಿಸ್‌ಗೆ ದಾಖಲಾದರು, ಅವರನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ ಬಳಿಕ ಅವರಿಗೆ ಪಿತ್ತಕಲ್ಲುಗಳೊಂದಿಗೆ ಸೋಂಕಿತ ಪಿತ್ತಕೋಶ ಇರುವುದು ಕಂಡು ಬಂತು. ಅಷ್ಟೇ ಅಲ್ಲದೆ, ರೋಗಿಯು ಈ ಮೊದಲೇ ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡದ ಇತಿಹಾಸ ಹೊಂದಿದ್ದು, ಈ ಹಿಂದೆ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಆಂಜಿಯೋಪ್ಲ್ಯಾಸ್ಟಿಗೆ ಒಳಪಟ್ಟಿದ್ದರು. ಈ ಎಲ್ಲಾ ಕಾರಣದಿಂದ ಹಾಗೂ ಅವರ ವಯಸ್ಸಿನ ಕಾರಣದಿಂದ ಅವರಿಗೆ ಓಪನ್ ಸರ್ಜರಿ ಮಾಡುವುದು ಅಸಾಧ್ಯವಾಗಿತ್ತು.
ಹೀಗಾಗಿ ಅವರಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಿದೆವು, ಇದು ಸುಧಾರಿತ ಕನಿಷ್ಠ ಆಕ್ರಮಣಶೀಲ ತಂತ್ರವಾಗಿದ್ದು, ನಿಖರವಅಗಿ ಶಸ್ತ್ರಚಿಕಿತ್ಸೆ ನಡೆಸಲು ಹಾಗೂ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಕೇವಲ 20 ರಿಂದ 30 ನಿಮಿಷಗಳಲ್ಲೇ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಯು ಅನೇಕ ವೈದ್ಯಕೀಯ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸುವಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಅತ್ಯಧುತ ವರವೆಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾಗಿ ಜೆ.ಮಂಜುನಾಥ್ ಆಯ್ಕೆ
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!