ಮುಂಬೈ : ಮುಂಬೈನಲ್ಲಿ ಬುಧವಾರ 30 ಪ್ರಯಾಣಿಕರನ್ನ ಹೊತ್ತ ದೋಣಿ ಸಮುದ್ರದಲ್ಲಿ ಮಗುಚಿದ ಪರಿಣಾಮ ಕನಿಷ್ಠ ಒರ್ವ ಸಾವನ್ನಪ್ಪಿದ್ದಾನೆ.
ಘಟನೆಯ ನಂತರ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. 20 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಅಂದ್ಹಾಗೆ, ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಬುಧವಾರ ‘ನೀಲಕಮಲ್’ ಹೆಸರಿನ ದೋಣಿ ಮಗುಚಿ ಬಿದ್ದಿದೆ. ನೌಕಾಪಡೆ, ಕೋಸ್ಟ್ ಗಾರ್ಡ್, ಯೆಲ್ಲೋಗೇಟ್ ಪೊಲೀಸ್ ಠಾಣೆ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅದರಲ್ಲಿ 30 ರಿಂದ 35 ಪ್ರಯಾಣಿಕರಿದ್ದರು. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
ದೋಣಿ ಗೇಟ್ ವೇಯಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಲೈಫ್ ಜಾಕೆಟ್ ಧರಿಸಿದ್ದ ಪ್ರಯಾಣಿಕರನ್ನು ರಕ್ಷಿಸಿ ಮತ್ತೊಂದು ದೋಣಿಗೆ ಸ್ಥಳಾಂತರಿಸಲಾಗಿದ್ದು, ಹಡಗು ನಿಧಾನವಾಗಿ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಸ್ಥಳದ ದೃಶ್ಯಗಳು ತೋರಿಸಿವೆ.
‘ಪ್ರಧಾನಿ ಮೋದಿ’ಗೆ ‘ಅಂಬೇಡ್ಕರ್’ ಮೇಲೆ ಗೌರವಿದ್ರೆ, ರಾತ್ರಿಯೊಳಗೆ ‘ಅಮಿತ್ ಶಾ’ ವಜಾಗೊಳಿಸಲಿ ; ಮಲ್ಲಿಕಾರ್ಜುನ ಖರ್ಗೆ