ನವದೆಹಲಿ : ದೇಶದ ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಕ್ರಮೇಣ ಸುಧಾರಣೆ ಕಾಣುತ್ತಿದೆ. ಮುಂದಿನ 1-2 ದಿನಗಳಲ್ಲಿ ಅವರನ್ನ ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಅವರನ್ನ ಡಿಸೆಂಬರ್ 12ರಂದು ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಸಮಸ್ಯೆ ಏನು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಅಂದ್ಹಾಗೆ, ಮಂಗಳವಾರ ಸಂಜೆ ಆಸ್ಪತ್ರೆಯು ಎಲ್ ಕೆ ಅಡ್ವಾಣಿ ಅವರ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದೆ.
ಅದರಲ್ಲಿ, ‘ಬಿಜೆಪಿಯ ಹಿರಿಯ ನಾಯಕ ಮತ್ತು ಭಾರತದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಡಿಸೆಂಬರ್ 12 ರಿಂದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಡಾ. ವಿನೀತ್ ಸೂರಿ ಅವರ ಆರೈಕೆಯಲ್ಲಿದ್ದಾರೆ. ಅವರ ವೈದ್ಯಕೀಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಅವರ ಆರೋಗ್ಯದ ಪ್ರಗತಿಯನ್ನು ಆಧರಿಸಿ, ಮುಂದಿನ 1-2 ದಿನಗಳಲ್ಲಿ ಅವರನ್ನ ಐಸಿಯುನಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ” ಎಂದಿದೆ.
‘ಮ್ಯೂಚುವಲ್ ಫಂಡ್’ ನಿಯಮಗಳಿಗೆ ತಿದ್ದುಪಡಿ ; ಕನಿಷ್ಠ ಹೂಡಿಕೆ 10 ಲಕ್ಷ ರೂ.ಗೆ ನಿಗದಿ
BIG NEWS: ‘ಟಿ.ಬಿ.ಜಯಚಂದ್ರ’ಗೆ ಸಿಎಂ ಸಿದ್ಧರಾಮಯ್ಯ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಪ್ರದಾನ
Good News : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ‘DA’ ಹೆಚ್ಚಳದ ಹೊರತಾಗಿಯೂ ‘ಗ್ರಾಚ್ಯುಟಿ ಮಿತಿ’ ಹೆಚ್ಚಳ