ಬಾಗಲಕೋಟೆ: ಜಿಲ್ಲೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವಣದಲ್ಲಿ ಇದೇ ಡಿಸೆಂಬರ್.21, 22 ಹಾಗೂ 23ರಂದು ತೋಟಗಾರಿಕಾ ಮೇಳ-2024 ಆಯೋಜಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ವಿವಿಯಿಂದ ಮಾಹಿತಿ ನೀಡಲಾಗಿದ್ದು, ಆರ್ಥಿಕತೆ ಹಾಗೂ ಪೌಷ್ಠಿಕತೆಗಾಗಿ ತೋಟಗಾರಿಕೆ ಎನ್ನುವ ಶ್ಲೋಗನ್ ಅಡಿಯಲ್ಲಿ ಡಿಸೆಂಬರ್ 21, 22, 23ರಂದು ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಈ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದೆ.
ತೋಟಗಾರಿಕಾ ಮೇಳದಲ್ಲಿ ಪೌಷಿಕತೆಗಾಗಿ ತೋಟಗಾರಿಕಾ ಬೆಳೆಗಳು, ಸಸ್ಯ ಸಂರಕ್ಷಣೆಯಲ್ಲಿ ಡ್ರೋನ್ ಗಳ ಬಳಕೆ, ತೋಟಗಾರಿಕೆಯಲ್ಲಿ ನಿಖರ ಬೇಸಾಯ, ಸಂರಕ್ಷಿತ ಬೇಸಾಯ, ನೀರು ಸಂರಕ್ಷಣೆಗಾಗಿ ತಂತ್ರಜ್ಞಾನ ಸೇರಿದಂತೆ ವಿವಿಧ ವಿಶೇಷಯತೆಗಳನ್ನು ಒಳಗೊಂಡಿದೆ.
ಇದಲ್ಲದೇ ಜೇನು ಕೃಷಿ, ಮಧುವನ ಪ್ರದರ್ಶನ್, ಕೃಷಿ ಯಂತ್ರೋಪಕರಣ, ಪರಿಕರಗಳ ಪ್ರದರ್ಶನ, ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಇನ್ನೂ ರೈತರಿಗೆ ಕೃಷಿ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿ, ಕೃಷಿ ಮತ್ತು ತೋಟಗಾರಿಕಾ ಪ್ರಕಟಣೆಗಳು, ಕೃಷಿಯಲ್ಲಿ ಡಿಜಿಟಲ್ ಆಪ್ ಗಳ ಬಳಕೆ, ಸಾವಯವ ಹಾಗೂ ನೈಸರ್ಗಿಕ ಕೃಷಿಯ ಬಗ್ಗೆಯೂ ಮಾಹಿತಿ ದೊರೆಯಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9480696381, 6364064901, 9448344103, 9972159613, 9481001141 ಗೆ ಸಂಪರ್ಕಿಸಿ ಪಡೆಯುವಂತೆ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಇನ್ಮುಂದೆ ಆನ್‌ಲೈನ್ ಮೂಲಕ NEET ಪರೀಕ್ಷೆ.?: ಶೀಘ್ರ ನಿರ್ಧಾರವೆಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ | NEET exam