ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೇರಳ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿಗೆ ಸೇರಿದ ಕಮಾಂಡೋ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗರ್ಭಿಣಿ ಪತ್ನಿಯ ಜೊತೆಯಲ್ಲಿರಲು ರಜೆ ಕೇಳಿದ್ದರು. ಆದ್ರೆ, ರಜೆ ನೀಡಲು ನಿರಾಕರಿಸಿದ ಕಾರಣ ಕೆಲಸದ ಒತ್ತಡವನ್ನ ತಾಳಲಾರದೆ 35 ವರ್ಷದ ವಿನೀತ್ ಭಾನುವಾರ ರಾತ್ರಿ ಮಲಪ್ಪುರಂ ಜಿಲ್ಲೆಯ ಅರೆಕೋಡ್ ಪೊಲೀಸ್ ಶಿಬಿರದಲ್ಲಿ ತನ್ನ ಸೇವಾ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ತೀವ್ರ ಕೆಲಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದ್ದು, ಅನಧಿಕೃತ ಅಂದಾಜಿನ ಪ್ರಕಾರ, ಇಲ್ಲಿಯವರೆಗೆ ಸುಮಾರು 90 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
BREAKING : ಭಾರತ-ಶ್ರೀಲಂಕಾ ಸಂಬಂಧ ಮತ್ತಷ್ಟು ಬಲಷ್ಠ ; ‘ಪ್ರಧಾನಿ ಮೋದಿ, ದಿಸ್ಸಾನಾಯಕೆ’ ಪ್ರಮುಖ ನೀತಿ ಅನಾವರಣ