ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ತಲುಪಿದ್ದು, ಅಲ್ಲಿ ರೈಲು ಮತ್ತು ರಸ್ತೆ ಯೋಜನೆಗಳು ಸೇರಿದಂತೆ ಬಹು ನಿರೀಕ್ಷಿತ ಮಹಾಕುಂಭ 2025ರ ವಿವಿಧ ಯೋಜನೆಗಳನ್ನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2025ರ ಮಹಾ ಕುಂಭ ಮೇಳವನ್ನ ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರನ್ನ ಅಭಿನಂದಿಸಿದರು. “ಪ್ರಯಾಗ್ರಾಜ್’ನ ಈ ಭೂಮಿಯಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಲಾಗುತ್ತಿದೆ. ಮುಂದಿನ ವರ್ಷ ಮಹಾ ಕುಂಭವನ್ನು ಆಯೋಜಿಸುವುದರಿಂದ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರದಲ್ಲಿ ಸ್ಥಾಪಿಸಲಾಗುವುದು” ಎಂದು ಅವರು ಹೇಳಿದರು.
45 ದಿನಗಳ ಮಹಾಕುಂಭ ಮೇಳದ ಆಯೋಜನೆಯನ್ನು “ಮಹಾ ಅಭಿಯಾನ” (ಭವ್ಯ ಉಪಕ್ರಮ) ಎಂದು ಬಣ್ಣಿಸಿದ ಪ್ರಧಾನಿ, ಇದು ಏಕತೆಯ ಮಹಾ ಯಜ್ಞವಾಗಲಿದೆ, ಇದನ್ನು ವಿಶ್ವದಾದ್ಯಂತ ಚರ್ಚಿಸಲಾಗುವುದು ಎಂದು ಪ್ರತಿಪಾದಿಸಿದರು. “ಈ ಕಾರ್ಯಕ್ರಮದ ಭವ್ಯ ಮತ್ತು ದೈವಿಕ ಯಶಸ್ಸಿಗೆ ನಾನು ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ” ಎಂದು ಅವರು ಹೇಳಿದರು.
‘2000 ರೂ. ಪ್ಲೇಟ್ ಊಟ, ಗಿಫ್ಟ್ ಬೇಡ, ಗೂಗಲ್ ಪೇ & ಕ್ಯಾಶ್ ಮಾತ್ರ’ : ಹೀಗೊಂದು ‘ವೆಡ್ಡಿಂಗ್ ಕಾರ್ಡ್’ ವೈರಲ್
BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣ ; ನಟ ‘ದರ್ಶನ್, ಪವಿತ್ರ ಗೌಡ ಸೇರಿ 7 ಆರೋಪಿ’ಗಳಿಗೆ ಜಾಮೀನು ಮಂಜೂರು