ಮದ್ದೂರು : ಮಹಿಳೆಯರ ಮೇಲಿನ ಅತ್ಯಾಚಾರ ಗಳಿಗೆ ಅಂತ್ಯ ಹಾಡುವಾ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ,ಅತ್ಯಾಚಾರ ಪ್ರಕರಣಗಳ ಶೀಘ್ರವಿಚಾರಣೆನಡೆಸಿ, ಗರಿಷ್ಠಪ್ರಮಾಣದ ಶಿಕ್ಷೆ ಖಾತರಿಪಡಿಸಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕ್ಕೊಂಡು ಗುಜರಾತ್ ನ ಸೂರತ್ ಬಳಿ ಪಾದಯಾತ್ರೆ ಸಾಗುವಾ ವೇಳೆ ಅಪಘಾತ ಉಂಟಾಗಿ ಈ ಅಪಘಾತದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್ ಎಚ್ ಲಿಂಗೇಗೌಡ ಹಾಗೂ ಮೂಸಾ ಷರೀಫ್ ಸಾವನ್ನಪ್ಪಿದ್ದಾರೆ.
ಮಂಗಳೂರಿನಿಂದ ದೆಹಲಿ ತಲುಪಿ ರಾಷ್ಟ್ರಪತಿಗಳು ಹಾಗು ಪ್ರಧಾನ ಮಂತ್ರಿಯವರಿಗೆ ನೇರವಾಗಿ ಮನವಿ ಸಲ್ಲಿಸಿ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಕಠಿಣ ಕಾನೂನು ರೂಪಿಸಲು ಮನವಿ ಮಾಡುವುದು ತನ್ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ನಾಂದಿಹಾಡಬೇಕು ಎಂಬುವುದು ಈ ತಂಡದ ಉದ್ದೇಶವಾಗಿತ್ತು ಆಕ್ಟೊಬರ್ ಹದಿನೇಳರಂದು ಮಂಗಳೂರಿನಲ್ಲಿ ಪಾದಯಾತ್ರೆ ಆರಂಭಿಸಿಹ ಈ ತಂಡ ನಿನ್ನೆ ಐವತ್ತೈದನೆ ದಿನ ಗುಜರಾತಿನ ಸೂರತ್ ಹಾಗು ಆಹಮದಬಾದಿನ ನಡುವೆ ಪಾದಯಾತ್ರೆಸಾಗಿತ್ತು.
ಮೂಲತಃ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ಮಂಗಳೂರಿನ ಪ್ರವೀಣ್ ನೇತೃತ್ವದಲ್ಲಿ ಮಂಗಳೂರಿನ ಮೂಸ ಷರಿಪ್ , ನೌಪುಲ್ ಅಬ್ಬಾಸ್, ಬಾಲಕೃಷ್ಣ, ಶುಕ್ರ ಆಹಮದ್, ಹಮ್ಝಾ ಅವರು ಪಾದಯಾತ್ರೆ ರೂಪಿಸಿದ್ದರು
ಎಸ್ ಎಚ್ ಲಿಂಗೇಗೌಡರು ಇವರೊಟ್ಟಿಗೆ ಸೇರಿ ಪಾದಯಾತ್ರೆ ಮಾಡುವಾ ಸಂದರ್ಭದಲ್ಲಿ ವಾಹನ ಪಾದಯಾತ್ರಿಗಳ ಮೇಲೆ ಹರಿದ ಪರಿಣಾಮ ಈ ಅವಘಡ ಸಂಭವಿಸಿ ಎಸ್ ಎಚ್ ಲಿಂಗೇಗೌಡ ಮತ್ತು ಮತ್ತೊಬ್ಬ ಪಾದಯಾತ್ರಿ ಮರಣಹೊಂದಿದ್ದಾರೆ
ಪರಿಚಯ : ಎಸ್ ಎಚ್ ಲಿಂಗೇಗೌಡ ಮಂಡ್ಯ ಜಿಲ್ಲೆ ಮದ್ದೂರು ತಾ ನ ಸೊಂಪುರ ಗ್ರಾಮದವರು. ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಬ್ರಷ್ಠಚಾರದ ವಿರುದ್ದ ದ್ವನಿ ಎತ್ತಿ ರಾಜಕೀಯಾ ಬದಲಾವಣೆ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಂಬಲದಿಂದ ಉದ್ಯೊಗ ತೊರೆದು ರಾಜಕೀಯಾ ಪ್ರವೇಶ ಮಾಡಿ ಶಾಸಕ ಹಾಗು ಸಂಸದ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಕೆ ಆರ್ ಎಸ್ ಪಕ್ಷ ಸೇರಿ ರಾಜ್ಯ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸಿ ನೂರಾರು ಪ್ರತಿಭಟನೆ ಚಳವಳಿಯಲ್ಲಿ ಭಾಗವಹಿಸಿದ್ದರು