ಬೆಂಗಳೂರು: ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವಂತ ಫ್ಲಾಟ್, ಮನೆಗಳನ್ನು ಹಂಚಿಕೆ ಮಾಡುವ ಸಂಬಂಧ ಫ್ಲಾಟ್ ಮೇಳವನ್ನು ಆಯೋಜಿಸಿದೆ. ಈ ಮೂಲಕ ಮನೆ, ಫ್ಲಾಟ್ ಕೊಳ್ಳುವ ನಿರೀಕ್ಷೆಯಲ್ಲಿದ್ದಂತ ಬೆಂಗಳೂರಿಗರಿಗೆ ಸುವರ್ಣಾವಕಾಶವನ್ನು ಬಿಡಿಎ ಒದಗಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವಂತ ಬಿಡಿಎ, ಫ್ಲಾಟ್ ಗಳ ಹಂಚಿಕೆಗೆ ಸಂಬಂಧಿಸಿದಂತೆ ದಿನಾಂಕ 14-12-2024ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಣಿಮಿಣಿಕೆ ವಸತಿ ಸಮುಚ್ಛಯದ ಬಳಿ ಫ್ಲಾಟ್ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದಿದೆ.
ಫ್ಲಾಟ್ ಗಳನ್ನು ಖರೀದಿಸಲು ಆಸಕ್ತ ಸಾರ್ವಜನಿಕರು ಈ ಮೇಳದಲ್ಲಿ ಪಾಲ್ಗೊಂಡು, ಆಯಾ ಫ್ಲಾಟ್ ಗಳ ಪ್ರಾರಂಭಿಕ ಠೇವಣಿ ಮೊತ್ತವನ್ನು ಡಿಡಿ, ಆನ್ ಲೈನ್ ಮೂಲಕ ಪಾವತಿಸಿದಲ್ಲಿ, ಸ್ಥಳದಲ್ಲಿಯೇ ತಾತ್ಕಾಲಿಕ ಹಂಚಿಕೆ ಪತ್ರವನ್ನು ನೀಡುವುದಾಗಿ ತಿಳಿಸಿದೆ.
ಈ ಸಂಬಂಧ ಕಣಿಮಣಿಕೆ 2ಬಿಹೆಚ್ ಕೆ ಮತ್ತು 3 ಬಿಹೆಚ್ ಕೆ ಫ್ಲಾಟ್ ಗಳ ಮಾಹಿತಿಗಾಗಿ 6362512234, 8747877469ಗೆ ಸಂಪರ್ಕಿಸಿ. ತಿಪ್ಪಸಂದ್ರದ ಬಳಿಯ 1 ಬಿಹೆಚ್ ಕೆ ಫ್ಲಾಟ್ ಗಳ ಮಾಹಿತಿಗಾಗಿ 7795869883 ನಂಬರ್ ಗೆ ಸಂಪರ್ಕಿಸುವಂತೆ ಬಿಡಿಎ ಹೇಳಿದೆ.
BIG NEWS: ವಿವಾಹಿತ ಮಹಿಳೆಯರು ಕ್ರೌರ್ಯ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಸುಪ್ರೀಂ ಕೋರ್ಟ್ ಕಳವಳ
ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್: ಎಕ್ಸ್ ಖಾತೆ ಲಾಕ್ ಮಾಡಿದ ಅಕ್ಸೆಂಚರ್ | Techie Atul Subash