ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅರಣ್ಯ ಇಲಾಖೆಯ ಎಸಿಎಫ್ ಸುರೇಶ್ ನಿವಾಸ, ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಸಿಕ್ಕಂತ ಚಿನ್ನಾಭರಣ, ಆಸ್ತಿಯನ್ನು ಕಂಡಂತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಾಗಾದ್ರೇ ಸಿಕ್ಕಿದ್ದು ಏನೇನು ಅನ್ನೋ ಬಗ್ಗೆ ಮುಂದೆ ಓದಿ.
ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಭೇಟೆಗೆ ಲೋಕಾಯುಕ್ತ ಪೊಲೀಸರು ಇಳಿದಿದ್ದರು. ಬೆಂಗಳೂರಿನ ಐದು ಕಡೆ, ಬೆಂಗಳೂರು ಗ್ರಾಮಾಂತರದ ಓರ್ವ ಅಧಿಕಾರಿಯ ಮೇಲೆ, ಗದಗ, ಕಲಬುರ್ಗಿ, ರಾಯಚೂರು, ಚಿತ್ರದುರ್ಗದಲ್ಲಿ ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಎಸಿಸ್ಟೆಂಟ್ ಕನ್ವೆರ್ಟರ್ ಆಫ್ ಫಾರೆಸ್ಟ್ ಅಧಿಕಾರಿ ಸುರೇಶ್ ನಿವಾಸದ, ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಲೋಕಾಯುಕ್ತ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಅಕ್ರಮ ಆಸ್ತಿ, ಪಾಸ್ತಿ ಪರಿಶೀಲನೆ ವೇಳೆಯಲ್ಲಿ ಸಿಕ್ಕಂತ ಚಿನ್ನಾಭರಣ, ಆಸ್ತಿಯನ್ನು ಕಂಡು ದಂಗಾಗಿದ್ದಾರೆ. ಹಿರಿಯೂರು ತಾಲ್ಲೂಕು ಎಸಿಎಫ್ ಸುರೇಶ್ ಮನೆಯಲ್ಲಿ ತನಿಖೆ ವೇಳೆ 1 ಕೆಜಿ ಚಿನ್ನಾಭರಣ, 3 ನಿವೇಶನಗಳು, 9 ಎಕರೆ ಜಮೀನು ಸೇರಿದಂತೆ 5 ಲಕ್ಷ ನಗದು ಪತ್ತೆಯಾಗಿದೆ.
ಕರ್ನಾಟಕದ ‘ಸೂಟ್-ಬೂಟ್’ ಸಿಎಂ ಎಸ್.ಎಂ ಕೃಷ್ಣ: ಇದು ಅವರ ಪ್ರಯಾಣದ ಏರಿಳಿತಗಳ ಹಾದಿ | SM Krishna Biography