ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್, ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‍ಟಾಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ 3 ಹಾಗೂ ಸಫಾಯಿ ಕರ್ಮಚಾರಿ ಮಕ್ಕಳಿಗೆ 2 ಲ್ಯಾಪ್‍ಟಾಪ್ ವಿತರಿಸಲು ಅವಕಾಶವಿರುತ್ತದೆ. ಬಿ.ಕಾಂ, ಬಿ.ಎಸ್ಸಿ, ಎಂ.ಕಾಂ, ಎಂ.ಎಸ್ಸಿ, ಬಿ.ಇ, ಎಂ.ಟೆಕ್ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿದಾರರು ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ನಂ.337/16ಎ-16, ಗಣೇಶ್ ಲೇಔಟ್ 1ನೇಕ್ರಾಸ್ ಪಿ.ಬಿ.ರಸ್ತೆ ದಾವಣಗೆರೆಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು ಎಂದು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಪ್ ತಂತ್ರಾಂಶದ ಮಾದರಿ ನೊಂದಣಿ ಸಮೀಕ್ಷೆ ವ್ಯವಸ್ಥೆಗೆ ತರಬೇತಿ
ದಾವಣಗೆರೆ : ಕೇಂದ್ರ ಸರ್ಕಾರದ ಜನಗಣತಿ ಇಲಾಖೆಯಿಂದ ಆಪ್ ಮೂಲಕ ಜನನ ಮತ್ತು ಮರಣ ಅಂಕಿಅಂಶಗಳನ್ನು ಸಂಗ್ರಹಿಸಲು ಅಂಶಕಾಲಿಕೆ ಗಣತಿದಾರರಿಗೆ ಮಾದರಿ ನೊಂದಣಿ ಕುರಿತಂತೆ ತರಬೇತಿಯನ್ನು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ತರಬೇತಿ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಉದ್ಘಾಟಿಸಿ ಆಪ್ ಮೂಲಕ ಮಾದರಿ ನೊಂದಣಿ ಪದ್ದತಿಯ ಅವಶ್ಯಕತೆ ಮತ್ತು ಇದರ ಗುಣಮಟ್ಟದ ಕಾರ್ಯದ ಬಗ್ಗೆ ವಿವರಿಸಿದರು. ಕೇಂದ್ರ ಸರ್ಕಾರವು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಅಂಶಕಾಲಿಕ ನೊಂದಣಿದಾರರನ್ನಾಗಿ ಮಾಡಿದ್ದು ಇವರ ಮೂಲಕ ನೇರವಾಗಿ ಜನನ ಮತ್ತು ಮರಣದ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಆಪ್ ಮೂಲಕ ಅವರು ಜನನ ಹಾಗೂ ಮರಣದ ಮಾಹಿತಿಯನ್ನು ಸಂಗ್ರಹಿಸಿ ಆಪ್ ಮೂಲಕ ಅಪ್‍ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಕೇಂದ್ರ ಜನಗಣತಿ ಇಲಾಖೆಯಿಂದ ದೈನಂದಿನ ಜನನ ಮತ್ತು ಮರಣ ಪ್ರಮಾಣವನ್ನು ಈ ನೊಂದಣಿ ಪದ್ದತಿಯ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಇದರ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಈ ತರಬೇತಿಯನ್ನು ಆಯೋಜಿಸಲಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಗಣತಿದಾರರಿಗೆ ತರಬೇತಿ ಆಯೋಜಿಸಲಾಗಿದೆ ಎಂದರು.
ಜನನ ಮತ್ತು ಮರಣದ ಅಂಕಿಅಂಶಗಳನ್ನು ನಿಖರವಾಗಿ ಸಂಗ್ರಹಿಸುವುದರಿಂದ ಸರ್ಕಾರದ ಯೋಜನೆಗಳಿಗೆ ಇದು ಬಹಳ ಉಪಯುಕ್ತವಾಗಿರುವುದರಿಂದ ನಿಖರವಾಗಿ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಗಣತಿದಾರರು ಮಾಡಬೇಕಾಗಿದೆ ಎಂದರು.
ಈ ಕಾರ್ಯಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜನಗಣತಿ ಇಲಾಖೆ ಸಾಂಖ್ಯಿಕ ಅಧಿಕಾರಿ ಕೇಶವಮೂರ್ತಿ, ಸಹಾಯಕ ನಿರ್ದೇಶಕರಾದ ಮ್ಯಾಥೀವ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Good News: ರಾಜ್ಯದ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್: ಶೀಘ್ರವೇ ಬಡ್ತಿ ಭಾಗ್ಯ – ಸಚಿವ ಮಧು ಬಂಗಾರಪ್ಪ
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut