ಬೆಂಗಳೂರು: ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯಿಂದ ಈ ರೈಲುಗಳಿಗೆ ತಾತ್ಕಾಲಿಕವಾಗಿ ಎಸಿ ಬೋಗಿ ಜೋಡಣೆ ಮಾಡಲಾಗಿದೆ.
ಈ ಕೆಳಗಿನ ರೈಲುಗಳಿಗೆ ತಲಾ ಒಂದು ಫಸ್ಟ್ ಕಮ್ ಸೆಕೆಂಡ್ ಎಸಿ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲಾಗುತ್ತಿದೆ, ಈ ಕೆಳಗಿನ ದಿನಾಂಕಗಳಿಂದ ಜಾರಿಗೆ ಬರಲಿದೆ:
1. ಜನವರಿ 4 ರಿಂದ ಮೇ 3, 2025 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್.
2. ಜನವರಿ 1 ರಿಂದ ಏಪ್ರಿಲ್ 30, 2025 ರವರೆಗೆ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್.
3. ಜನವರಿ 2 ರಿಂದ ಮೇ 1, 2025 ರವರೆಗೆ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಡೈಲಿ ಎಕ್ಸ್ ಪ್ರೆಸ್.
4. ಜನವರಿ 3 ರಿಂದ ಮೇ 2, 2025 ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್ ಪ್ರೆಸ್.