ಬೆಂಗಳೂರು: ಕೆಂಗೇರಿ ಕಲಾ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ನಿಮಿತ್ತ ಕೆಂಪೇಗೌಡರ ಸೊಸೆ ಸಿರಿದೇವಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ 9 ಸೋಮವಾರ ಸಂಜೆ 5:00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಆರು ಮೂವತ್ತಕ್ಕೆ ನಾಟಕ ಆರಂಭಗೊಳ್ಳಲಿದೆ. ಐತಿಹಾಸಿಕ ಕೆಂಪೇಗೌಡರ ಜೊತೆ ಸಿರಿದೇವಿ ನಾಟಕವನ್ನು ನ. ಲಿ. ನಾಗರಾಜ್ ರಚಿಸಿದ್ದು, ದಿವಾಕರ್ ಅವರ ಸಾರಥ್ಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ನಿರ್ದೇಶನ ಹಾಗೂ ರಂಗ ಸಜ್ಜಿಕೆ ಹಳ್ಳಿಕಾರ್ ನಾಗರಾಜ್, ಸಹ ನಿರ್ದೇಶನ ವಿಜಯಲಕ್ಷ್ಮಿ, ಸಂಗೀತ ಹರೀಶ್, ವಸ್ತ್ರಲಂಕಾರ ರವಿಕುಮಾರ್ ಮಾಡಲಿದ್ದಾರೆ. ನಿರೂಪಣೆಯನ್ನು ಹೆಚ್ಚು ಆಶಾ ಸುರೇಶ್ ಶಿಕ್ಷಕರು ನಾನು ಬೋಧನೆ ಪ್ರೌಢಶಾಲೆಯ ನಡೆಸಿಕೊಡಲಿದ್ದಾರೆ ಇದರ ನಿರ್ದೇಶನವನ್ನು ಹಾಗೂ ರಂಗಸಚಿಕೆಯನ್ನು ಹಳ್ಳಿಕಾರ್ ನಾಗರಾಜ್ ವಹಿಸಿದ್ದು ಸಹ ನಿರ್ದೇಶನವನ್ನು ವಿಜಯಲಕ್ಷ್ಮಿ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಅಮ್ಮಜಿ ಸೇವಾಶ್ರಮದ ಪ್ರಮೋದ್ ಗುರೂಜಿ, ಖ್ಯಾತ ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡರು, ನಮ್ಮ ಕನ್ನಡಿಗರ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್. ವಿಜಯಕುಮಾರ್, ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ ಬಸವರಾಜ್ ಏ ತೇರಿ, ಕೆಂಗೇರಿ ವೃತ ನಿರೀಕ್ಷಕ ಸಂಜೀವ್ ಗೌಡ, ಸ್ವಾಭಿಮಾನಿ ಮಹಿಳಾ ಟ್ರಸ್ಟ್ ಸಂಸ್ಥಾಪಕರು ಡಾ. ಅನುಪಮಾ ಪಂಚಾಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅನಿಲ್ ಚಳಗೇರಿ, ರಾಜ್ಯ ಒಕ್ಕಲಿಗರ ಸಂಘ ಮತ್ತು ಮಂಡಲ ನಿಕಟ ಪೂರ್ವ ಅಧ್ಯಕ್ಷ ಸಿಎಂ ಮಾದೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಅಂಜನಪ್ಪ, ನಿವೃತ್ತ ನ್ಯಾಯಾಧೀಶ ಮುದ್ದುಮಲ್ಲಯ್ಯ, ಕೆಂಗೇರಿ ಬಿಬಿಎಂಪಿ ಸದಸ್ಯ ಸತ್ಯನಾರಾಯಣ, ಬಿಜೆಪಿ ಮುಖಂಡ ದೀಪಕ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಬೇದಾರ್ ಮೇಜರ್ ಜಿಕೆ ಕುಮಾರ್ ಸ್ವಾಮಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಬಸವರಾಜ್, ಹಿರಿಯ ವೈದ್ಯಾಧಿಕಾರಿ ರೇಷ್ಮಾ ಮುಂತಾದವರು ಭಾಗವಹಿಸಲಿದ್ದಾರೆ.