Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಇಸ್ರೇಲ್‌ನಲ್ಲಿ ರಾರಾಜಿಸಲಿದ್ದಾನೆ ಶಿವಾಜಿ ಮಹಾರಾಜ: ಮಹಾನ್ ನಾಯಕನ ಪ್ರತಿಮೆ ನಿರ್ಮಿಸಲು ಸಿದ್ಧತೆ!

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : `KSRTC’ ಸಿಬ್ಬಂದಿಗೆ ಶೀಘ್ರವೇ ‌`ನಗದು ರಹಿತ ಆರೋಗ್ಯ ಸೇವೆ’ಗೆ ಚಾಲನೆ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಣೆ.!
KARNATAKA

GOOD NEWS : `KSRTC’ ಸಿಬ್ಬಂದಿಗೆ ಶೀಘ್ರವೇ ‌`ನಗದು ರಹಿತ ಆರೋಗ್ಯ ಸೇವೆ’ಗೆ ಚಾಲನೆ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಣೆ.!

By kannadanewsnow57

ಬೆಂಗಳೂರು : ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.

ಈಗಾಗಲೇ ಸಾರಿಗೆ ಸಚಿವರು ನೌಕರರ ಸಂಘಟನೆಗಳೊಂದಿಗೆ ಅವರ ಬೇಡಿಕೆಗಳಿಗೆ ಸಂಬಂಧಿಸಿ ದಂತೆ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿದೆ. ಅದರಲ್ಲಿ‌ ಪ್ರಮುಖವಾಗಿ

1. ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ದಿನಾಂಕ: 07.12 2024 ರಂದು ಸರ್ಕಾರಿ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ‌

2. ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ.

2. ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರವೇ ಗ್ಯಾರೆಂಟಿ‌ ನೀಡಿ ರೂ.2000 ಕೋಟಿ ಲೋನ್ ನೀಡಿದೆ.

ಮಾನ್ಯ ಸಚಿವರ ಆರೋಗ್ಯದ ಕಾರಣದಿಂದಾಗಿ ವೈಯಕ್ತಿಕವಾಗಿ ಸಭೆ ನಡೆಸಲು ಸಾಧ್ಯವಾಗದೆ, ಈ ಎಲ್ಲಾ ವಿಷಯಗಳನ್ನು ಕಾರ್ಮಿಕ ಸಂಘಟನೆಗಳಿಗೆ ತಿಳಿಸಲು ವ್ಯವಸ್ಥಾಪಕ ನಿರ್ದೇಶಕರು ಕೆ ಸ್ ಆರ್ ಟಿ ಸಿ ರವರಿಗೆ ಸೂಚಿಸಿದ್ದು, ಅದರಂತೆ ಅವರು ಸಭೆ ನಡೆಸಿ ಮಾಹಿತಿ ನೀಡಿರುತ್ತಾರೆ

ಮುಂದುವರೆದು, ಸಾರಿಗೆ ಸಂಸ್ಥೆ ಮತ್ತು ಬಸ್ಸುಗಳು ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ 5800 ಹೊಸ ಬಸ್ಸುಗಳ ಸೇರ್ಪಡೆ, 10000 ಹೊಸ ನೇಮಕಾತಿಗಳು ಹಾಗೂ ಹತ್ತು ಹಲವು ಕಾರ್ಮಿಕ ಕಲ್ಯಾಣ ಉಪಕ್ರಮಗಳು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಭವಿಷ್ಯನಿಧಿ, ಡೀಸೆಲ್ ಬಾಕಿ, ಉಪಧನ, ನಿವೃತ್ತ ನೌಕರರ ಬಾಕಿ ಎಲ್ಲಾ ಸೇರಿ ರೂ‌5900 ಕೋಟಿ ಸಾಲ ಬಾಕಿ ಉಳಿದಿರುವ ಕಾರಣ ಸಾರಿಗೆ ಸಂಸ್ಥೆಗಳನ್ನು ಸಹಜ ಸ್ಥಿತಿಗೆ ತರಲು ಕಾಲಾವಕಾಶದ ಅಗತ್ಯವಿದೆ

ಇವೆಲ್ಲವುಗಳ ಬಗ್ಗೆ ಕಾರ್ಮಿಕ ಮುಖಂಡರುಗಳಿಗೆ, ಸಂಘಟನೆಗಳಿಗೆ ಸಂಪೂರ್ಣ ಮಾಹಿತಿಯಿದೆ. ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ, ಹಿಂದಿನಿಂದಲೂ ಎಷ್ಟು ನಷ್ಟದಲ್ಲಿವೆ , ಬಾಕಿ ಹಣ ಎಷ್ಟು ಕೊಡಬೇಕಾಗಿದೆ ಎಂಬುದು ತಿಳಿದಿದೆ.

ಈ ಎಲ್ಲಾ ಪರಿಸ್ಥಿತಿಗಳನ್ನು ಅರಿತಿರುವ ಕಾರ್ಮಿಕ ಸಂಘಟನೆಗಳಾದ
1. ಅಖಂಡ ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಮಹಾಮಂಡಳಿ (ರಿ)
2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ)
3. ಕೆ ಎಸ್ ಆರ್ ಟಿ ಸಿ ನಿಗಮಗಳ ಎಸ್ಸಿ /ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)
4. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಸ್ಸಿ /ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಸಮನ್ವಯ ಸಮಿತಿ (ರಿ)
5. ಕೆಬಿಎನ್ಎನ್ ವರ್ಕರ್ಸ್ ಫೆಡರೇಶನ್ (ರಿ)
6. ಕೆ.ಎಸ್.ಆರ್.ಟಿ.ಸಿ/ಬಿ.ಎಂ.ಟಿ.ಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್
7. ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ

KSRTC Officers Welfare Association (KOWA) ಹಾಗೂ Supervisory staff Associations ರವರುಗಳು ಸಹ ಬೆಳಗಾವಿ ಚಲೋಗೆ ಕೈ ಜೋಡಿಸಿಲ್ಲ ಹಾಗೂ ಮುಷ್ಕರ ಕ್ಕೂ ಆಸಕ್ತಿ ತೋರುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಬೆಳಗಾವಿ ಚಲೋ ನಡೆಸಿ ಮುಷ್ಕರಕ್ಕೆ ನೋಟಿಸ್ ನೀಡುವುದು ಸೂಕ್ತವಲ್ಲ. ಕಾರ್ಮಿಕ ಸಂಘಟನೆಗಳ ಇತರೆ ಬೇಡಿಕೆಗಳ ಬಗ್ಗೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳವರ ಗಮನಕ್ಕೆ ಕೂಡ ತರಲಾಗಿದ್ದು, ಮಾನ್ಯ ಸಚಿವರ ಆರೋಗ್ಯ ಸುಧಾರಣೆ ನಂತರ ಮಾತುಕತೆ ಪುನಾರಂಭಿಸಲಾಗುವುದು ಎಂಬುದನ್ನು ತಿಳಿಸಿರುತ್ತಾರೆ.

GOOD NEWS : Cashless health service for ``KSRTC'' staff will be launched soon: Transport Minister Ramalinga Reddy announced.! GOOD NEWS : `KSRTC' ಸಿಬ್ಬಂದಿಗೆ ಶೀಘ್ರವೇ ‌ನಗದು ರಹಿತ ಆರೋಗ್ಯ ಸೇವೆಗೆ ಚಾಲನೆ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಘೋಷಣೆ.!
Share. Facebook Twitter LinkedIn WhatsApp Email

Related Posts

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

2 Mins Read

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

2 Mins Read

ಕೃಷಿ ಜಮೀನಿನಲ್ಲಿ ಮನೆ ಕಟ್ಟುವ ಮುನ್ನ ಈ ನಿಯಮ ತಿಳಿಯಲೇಬೇಕು! ತಪ್ಪಿದರೆ ಭಾರೀ ದಂಡ, ಕಾನೂನು ಸಂಕಷ್ಟ ಗ್ಯಾರಂಟಿ

2 Mins Read
Recent News

​ಇಸ್ರೇಲ್‌ನಲ್ಲಿ ರಾರಾಜಿಸಲಿದ್ದಾನೆ ಶಿವಾಜಿ ಮಹಾರಾಜ: ಮಹಾನ್ ನಾಯಕನ ಪ್ರತಿಮೆ ನಿರ್ಮಿಸಲು ಸಿದ್ಧತೆ!

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

State News
KARNATAKA

ALERT : ಕಿಡ್ನಿ ಹಾಳಾಗುವ ಮುನ್ನ ದೇಹ ನೀಡುವ ಈ 5 ಅಪಾಯಕಾರಿ ಸೂಚನೆಗಳನ್ನು ನಿರ್ಲಕ್ಷಿಸಬೇಡಿ | Kidney Failure Warning

By kannadanewsnow57 KARNATAKA 2 Mins Read

ಮೂತ್ರಪಿಂಡಗಳು (ಕಿಡ್ನಿಗಳು) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ರಕ್ತವನ್ನು ಶುದ್ಧೀಕರಿಸುವುದು ಹಾಗೂ…

BIG NEWS: ನಿಮ್ಮ ಬಳಿ ಖಾಲಿ ಜಾಗ ಅಥವಾ ಕಟ್ಟಡವಿದೆಯೇ? ಇಲ್ಲಿದೆ ತಿಂಗಳಿಗೆ ₹1 ಲಕ್ಷದವರೆಗೆ ಆದಾಯ ಗಳಿಸುವ ಅವಕಾಶ!

ಕೃಷಿ ಜಮೀನಿನಲ್ಲಿ ಮನೆ ಕಟ್ಟುವ ಮುನ್ನ ಈ ನಿಯಮ ತಿಳಿಯಲೇಬೇಕು! ತಪ್ಪಿದರೆ ಭಾರೀ ದಂಡ, ಕಾನೂನು ಸಂಕಷ್ಟ ಗ್ಯಾರಂಟಿ

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘KSRTC’ ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಕೆಗೆ ಹೊಸ ನಮೂನೆ ಬಿಡುಗಡೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.