ಬೆಂಗಳೂರು : ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಕುಖ್ಯಾತ ಅಂತಾರಾಜ್ಯ ಸರಗಳ್ಳರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸರು ಮೂವರು ಅಂತಾರಾಜ್ಯ ಸರಗಳರನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪ್ಪುರ, ಮೈಸೂರು, ಆಂಧ್ರಪ್ರದೇಶ ಸೇರಿದಂತೆ 33 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರು ಕೈಚಳಕ ತೋರಿದ್ದರು. ಆಂಧ್ರದಲ್ಲಿ ಕಳ್ಳತನದ ವೇಳೆ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದರು. ದೊಡ್ಡಬಳ್ಳಾಪುರದಲ್ಲಿ ಸೆ.19ರದು ಮೂರು ಕಡೆಗಳಲ್ಲಿ ಈ ಗ್ಯಾಂಗ್ ಕಳ್ಳತನ ಮಾಡಿತ್ತು. ಮೈಸೂರಿನಲ್ಲಿ ಒಂದೇ ಪ್ರದೇಶದಲ್ಲಿ ಮೂರು ಕಡೆ ಕಳ್ಳತನ ಮಾಡಿದ್ದರು.
ಪೊಲೀಸರ ಕಣ್ತಪ್ಪಿಸಿ ಆಂಧ್ರಕ್ಕೆ ಪರಾರಿಯಾಗುತ್ತಿದ್ದ ವೇಳೆ ಪಿಐ ಸಾದಿಕ್ ಪಾಷಾ ನೇತೃತ್ವದ ತಂಡ ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.