ನವದೆಹಲಿ: ಸಿರಿಯಾದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಿದೆ.
ಅಲ್ಲದೆ, ಅಲ್ಲಿಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. “ಸಿರಿಯಾದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಭಾರತೀಯ ಪ್ರಜೆಗಳಿಗೆ ಸಿರಿಯಾಕ್ಕೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಸಿರಿಯಾದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಡಮಾಸ್ಕಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿ ಸಂಖ್ಯೆ +963993385793 ಅನ್ನು ಸಂಪರ್ಕಿಸಬಹುದು. ಅದೇ ಸಂಖ್ಯೆ ವಾಟ್ಸಾಪ್ ನಲ್ಲಿಯೂ ಲಭ್ಯವಿದೆ. ಈ ಸಂಖ್ಯೆಯಿಂದ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತಿದೆ. ನೀವು hoc.damascus@mea.gov.in ಇಮೇಲ್ ಸಹ ಮಾಡಬಹುದು. ಇದೀಗ ಸಿರಿಯಾದಲ್ಲಿರುವವರು ಆದಷ್ಟು ಬೇಗ ಮರಳಲು ಪ್ರಯತ್ನಿಸಬೇಕು ಮತ್ತು ಇದು ಆಗುವವರೆಗೆ ಅವರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಅಂತ ತಿಳಿಸಿದೆ.
ಇಸ್ಲಾಮಿಕ್ ನೇತೃತ್ವದ ಬಂಡುಕೋರರು ಸಿರಿಯಾದಲ್ಲಿ ನಿಯಂತ್ರಣ ಸಾಧಿಸುತ್ತಿದ್ದಂತೆ, ದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಭಾರತ ಶುಕ್ರವಾರ ಹೇಳಿದೆ. ಬಂಡುಕೋರರು ದೇಶದ ಅತಿದೊಡ್ಡ ನಗರವಾದ ಅಲೆಪ್ಪೊದ ಹೆಚ್ಚಿನ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಗುರುವಾರ ಮಧ್ಯ ಸಿರಿಯಾದ ನಗರ ಹೋಮ್ಸ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಸಾವಿರಾರು ಜನರು ಹೋಮ್ಸ್ ತೊರೆಯಬೇಕಾಯಿತು.
ಸಿರಿಯಾದಲ್ಲಿ ಎಷ್ಟು ಭಾರತೀಯರಿದ್ದಾರೆ: “ಉತ್ತರ ಸಿರಿಯಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹೋರಾಟವನ್ನು ನಾವು ಗಮನಿಸಿದ್ದೇವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಿರಿಯಾದಲ್ಲಿ ಸರಿಸುಮಾರು 90 ಭಾರತೀಯ ಪ್ರಜೆಗಳಿದ್ದಾರೆ, ಅವರಲ್ಲಿ 14 ಮಂದಿ ವಿವಿಧ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು, “ನಮ್ಮ ಮಿಷನ್ ನಮ್ಮ ಪ್ರಜೆಗಳೊಂದಿಗೆ ಅವರ ಸುರಕ್ಷತೆಗಾಗಿ ನಿರಂತರ ಸಂಪರ್ಕದಲ್ಲಿದೆ” ಎಂದು ಹೇಳಿದ್ದಾರೆ.