ಲಕ್ನೋ : ಜನರು ಯಾವಾಗಲೂ ದೇಶವನ್ನ ಎಲ್ಲಕ್ಕಿಂತ ಮೇಲಿರಿಸಬೇಕು ಮತ್ತು ಅವರ ಕೆಲಸವು ‘ಸನಾತನ ಧರ್ಮ’ದ ಮೌಲ್ಯಗಳಿಗೆ ಅನುಗುಣವಾಗಿರಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.
“ಪ್ರತಿಯೊಂದು ಕೆಲಸವನ್ನ ದೇಶಕ್ಕಾಗಿ ಮಾಡಬೇಕು… ದೇಶ ಸುರಕ್ಷಿತವಾಗಿದ್ದರೆ ಧರ್ಮ ಸುರಕ್ಷಿತವಾಗಿರುತ್ತದೆ… ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ ಎಂದು ವಾರಣಾಸಿಯಲ್ಲಿ ವಿಹಾಂಗಮ್ ಯೋಗ ಸಂತ ಸಮಾಜದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆದಿತ್ಯನಾಥ್ ಹೇಳಿದರು.
ನಿಜವಾದ ಸಂತರು ಕಡಿಮೆ ಮಾತನಾಡುತ್ತಾರೆ ಮತ್ತು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂಬ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿದ ಸಿಎಂ, ನಿಜವಾದ ಸಂತನು ದೇಶ ಮತ್ತು ಸಮಾಜದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಅಸಡ್ಡೆಯಿಂದಿರಲು ಸಾಧ್ಯವಿಲ್ಲ ಎಂದು ಹೇಳಿದರು.
“ಸಮಾಜ ಮತ್ತು ದೇಶದಲ್ಲಿ ಏನಾದರೂ ತಪ್ಪು ನಡೆಯುತ್ತಿರುವಾಗ ನಿಜವಾದ ಸಂತ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
Good News : ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಚಿನ್ನದ ಬೆಲೆಯಲ್ಲಿ 1,437 ರೂಪಾಯಿ ಇಳಿಕೆ
ಖಾಸಗಿ ಉದ್ಯೋಗಿಗಳಿಗೆ ಮೋದಿ ಸರ್ಕಾರದ ಗಿಫ್ಟ್ ; ಈಗ ‘NPS’ನಿಂದ ಪ್ರತಿ ತಿಂಗಳು 53,516 ರೂ. ಪಿಂಚಣಿ ಲಭ್ಯ