ಬೆಂಗಳೂರು : 2024-25ನೇ ಸಾಲಿನ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೊಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 1ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ದಿನಾಂಕ:06/12/2024 ರಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು Online ನಲ್ಲಿ ಚಲನ್ ಡೌನ್‌ಲೋಡ್ ಮಾಡಿಕೊಂಡು ನಿಗದಿತ ದಾಖಲಾತಿ ಶುಲ್ಕವನ್ನು SBI ಬ್ಯಾಂಕಿನಲ್ಲಿ ಪಾವತಿಸಿ, ದಿನಾಂಕ:07/12/2024 ರಿಂದ 10/12/2024 ರೊಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಕೇಂದ್ರಕ್ಕೆ (DIET/CTE) ಸಲ್ಲಿಸಿ, ಪ್ರವೇಶಾತಿ ಪತ್ರವನ್ನು (Admission Slip) ಸ್ವೀಕರಿಸುವುದು ಹಾಗೂ ದಿನಾಂಕ:13/12/2024 ರೊಳಗಾಗಿ ಕಾಲೇಜಿಗೆ ದಾಖಲಾತಿ ಪಡೆದುಕೊಳ್ಳುವುದು.
ಶುಲ್ಕ ಪಾವತಿಸಿ, ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜುಗಳಿಗೆ ದಾಖಲಾಗದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ತಮ್ಮ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಸೀಟು ಹಂಚಿಕೆಯಾದ ಕಾಲೇಜಿಗೆ ದಾಖಲಾತಿ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ www.schooleducation.karnataka.gov.in e ఇಲಾಖಾ ವೆಬ್‌ಸೈಟ್ ಸಂಪರ್ಕಿಸುವುದು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದಿಲ್ಲ.