ಚಿಕ್ಕಬಳ್ಳಾಪುರ: ಫೆಂಗನ್ ಚಂಡಮಾರುತದ ಕಾರಣದಿಂದ ತುಂತುರು ಮಳೆಯ ಜೊತೆಗೆ ಚಳಿಗಾಳಿ ಬೀಸುವ ಕಾರಣದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆಯನ್ನು ಘೋಷಿಸಲಾಗಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಅವರು ಆದೇಶ ಹೊರಡಿಸಿದ್ದು, ಅದರಲ್ಲಿ ನಾಳೆ ಫೆಂಗಲ್ ಚಂಡಮಾರುತದ ಕಾರಣ ತುಂತುರು ಮಳೆಯ ಜೊತೆಗೆ ಚಳಿಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಹಿನ್ನಲೆಯಲ್ಲಿ ಈ ಮುಂಚಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ನಾಳೆಯ ರಜೆಯ ದಿನದ ತರಗತಿಗಳನ್ನು ಮುಂದಿನ ಅವಧಿಯಲ್ಲಿ ಸರಿದೂಗಿಸುವಂತೆ ಸೂಚಿಸಿದ್ದಾರೆ.
BREAKING: ಹಾಸನದಲ್ಲಿ ಯುವ IPS ಅಧಿಕಾರಿ ಹರ್ಷವರ್ಧನ್ ಕಾರು ಅಪಘಾತ: ಸ್ಥಿತಿ ಗಂಭೀರ
Watch Video: ಫೆಂಗಲ್ ಚಂಡಮಾರುತ ಎಫೆಕ್ಟ್: ಲ್ಯಾಂಡ್ ಆಗಲು ಪರದಾಡಿ ಮತ್ತೆ ಹಾರಿದ ವಿಮಾನ, ವಿಡಿಯೋ ವೈರಲ್