ಚೆನ್ನೈ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತ ಪುದುಚೇರಿ, ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ತಮಿಳುನಾಡಿನಲ್ಲಿ ಚಂಡಮಾರುತದ ಅಬ್ಬರಕ್ಕೆ ನಾಲ್ವರು ಬಲಿಯಾಗಿದ್ದಾರೆ.
ಚೆನ್ನೈನ ಮುತ್ಯಾಲಪೇಟೆಯಲ್ಲಿ ಉತ್ತರ ಪ್ರದೇಶ ಮೂಲದ ಚಂದನ್ ಬಲಿಯಾಗಿದ್ದಾರೆ. ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಆ ವಿಜಯನಗರದಲ್ಲಿ ಪೌರಕಾರ್ಮಿಕ ಮೃತಪಟ್ಟಿದ್ದಾರೆ. ವಿದ್ಯುತ್ ಕೇಬಲ್ ತಗುಲಿ ಪೌರಕಾರ್ಮಿಕ ಶಕ್ತಿವೇಲ್ ಸಾವನ್ನಪ್ಪಿದ್ದಾರೆ. ವ್ಯಾಸರಪಾಡಿಯಲ್ಲಿ ಗುತ್ತಿಗೆ ಕಾರ್ಮಿಕ ಜಗನ್ನಾಥನ್ ಮೃತಪಟ್ಟಿದ್ದಾರೆ. ಅವರು ಮೋಟರ್ ಪಂಪ್ ಆಪರೇಟ್ ಮಾಡುವಾಗ ಅವಘಡ ಸಂಭವಿಸಿದೆ. ವ್ಯಾಸರಪಾಡಿಯ ಗಣೇಶಪುರಂನಲ್ಲಿ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಫಲವೇಶ್ವರ್ ಎಂಬಾತ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸಿಎಂ ಸ್ಟಾಲಿನ್ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಫಂಗಲ್ ಚಂಡಮಾರುತದಿಂದಾಗಿ ತತಮಿಳುನಾಡು, ಪುದುಚೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೇಶದ ಏಳು ರಾಜ್ಯಗಳಿಗೆ ಸವಾಲಾಗಿ ಪರಿಣಮಿಸಬಹುದು. ಈ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಚಂಡಮಾರುತವು ಪುದುಚೇರಿಯ ಕಾರೈಕಲ್ ಮತ್ತು ತಮಿಳುನಾಡಿನ ಮಹಾಬಲಿಪುರಂ ಕರಾವಳಿಗೆ ಅಪ್ಪಳಿಸಿದೆ. ಇದರ ಪರಿಣಾಮದಿಂದ ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್ ವರೆಗೆ ಇರುತ್ತದೆ.