ಬೆಂಗಳೂರು: ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಪರೀಕ್ಷಾ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-1ಕ್ಕೆ ನೋಂದಾಯಿಸಲು ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ.
ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಪರೀಕ್ಷೆಗಳ ನಿರ್ದೇಶಕರಾದಂತ ಹೆಚ್.ಎನ್.ಗೋಪಾಲಕೃಷ್ಣ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ 2025ನೇ ಮಾರ್ಚ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲೆಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮುಖಾಂತರ ನೋಂದಾಯಿಸಲು ಅವದಿಯನ್ನು ದಿನಾಂಕ:30.11.2024ರವರೆಗೆ ವಿಸ್ತರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಆದರೆ, ರಾಜ್ಯದ ಕೆಲವು ಶಾಲೆಗಳಿಂದ ಹಾಗೂ ಪೋಷಕರಿಂದ ಮಂಡಳಿಗೆ ದೂರವಾಣಿಯ ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಮಾಡಲು ದಿನಾಂಕವನ್ನು ಪುನ: ವಿಸ್ತರಿಸಲು ಕೋರಿಕೆಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಇನ್ನು ಕೆಲವು ಶಾಲೆಗಳು ಶಾಲಾ ಸಂಕೇತ ಪಡೆಯುತ್ತಿರುವ ಕಾರ್ಯವು ಚಾಲ್ತಿಯಲ್ಲಿರುವ ಸಂಬಂಧ ವಿದ್ಯಾರ್ಥಿಗಳ ನೋಂದಣಿಗಾಗಿ ದಿನಾಂಕಗಳನ್ನು ಈ ಕೆಳಕಂಡಂತೆ ವಿಸ್ತರಿಸಲಾಗಿದೆ ಎಂದಿದ್ದಾರೆ.
ಪುನ: ದಿನಾಂಕ ವಿಸ್ತರಣೆಯನ್ನು ಮಾಡಲಾಗುವುದಿಲ್ಲ. ಈ ಸಂಬಂಧ ವಿಸ್ತರಿಸಿರುವ ದಿನಾಂಕದವರೆಗೆ ವಿದ್ಯಾರ್ಥಿಗಳ ನೋಂದಣಿ ಮಾಡತಕ್ಕದ್ದು. ಈ ಕುರಿತು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಮುಖ್ಯೋಪಾಧ್ಯಾಯರ ಮುಖಾಂತರ ವಿದ್ಯಾರ್ಥಿಗಳ/ಪೋಷಕರ ಗಮನಕ್ಕೆ ತಂದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು / ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಂದು ಹೇಳಿದ್ದಾರೆ.
ಹೀಗಿದೆ ಪರೀಕ್ಷೆ-1ಕ್ಕೆ ವಿಸ್ತರಿಸಿದಂತ ದಿನಾಂಕದ ಮಾಹಿತಿ
- ಮಂಡಳಿ ಜಾಲತಾಣದ ಶಾಲಾಲಾಗಿನ್ ಮೂಲಕ CCERF, CCEPF, CCERR ಮತ್ತು CCEPR ವಿದ್ಯಾರ್ಥಿಗಳ 01 ಮಾಹಿತಿಯನ್ನು ಅಪ್‌ಲೋಡ್ ಮಾಡಲು ನಿಗದಿಪಡಿಸಿದ ಅಂತಿಮ ದಿನಾಂಕ: 30-11-2024 ಆಗಿದ್ದನ್ನು, ದಿನಾಂಕ 07-12-2024ಕ್ಕೆ ವಿಸ್ತರಿಸಲಾಗಿದೆ.
- ಮಂಡಳಿ ಜಾಲತಾಣದ ಶಾಲಾಲಾಗಿನ್ ಮೂಲಕ CCERF, CCEPF, CCERR ಮತ್ತು CCEPR ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ನಿಗದಿಪಡಿಸಿದ ದಿನಾಂಕ: 02-12-2024 ರಿಂದ 07-12-2024 ಆಗಿತ್ತು, ಅದನ್ನು ದಿನಾಂಕ 09-12-2024 ರಿಂದ 16-12-2024ರವರೆಗೆ ವಿಸ್ತರಿಸಲಾಗಿದೆ.
- ಕ್ರಮ ಸಂಖ್ಯೆ-3ರಂತೆ ಚಲನ್ ಮುದ್ರಿಸಿಕೊಂಡು ಬ್ಯಾಂಕ್‌ಗೆ ಜಮೆ ಮಾಡಲು ನಿಗದಿಪಡಿಸಿದ ದಿನಾಂಕ 02-12-2024 ರಿಂದ 07-12-2024 ಆಗಿತ್ತು, ಅದನ್ನು ದಿನಾಂಕ 09-12-2024 ರಿಂದ 21-12-2024ರವರೆಗೆ ವಿಸ್ತರಿಸಲಾಗಿದೆ.
BIG Exclusive: ರಾಜ್ಯದಲ್ಲೊಬ್ಬ ಅಪರೂಪದ ‘ಮುಖ್ಯೋಪಾಧ್ಯಾಯ’: ಇವರ ‘ಶುಚಿತ್ವ ಕಾರ್ಯ’ಕ್ಕೆ ಭಾರೀ ಮೆಚ್ಚುಗೆ