ಶಿವಮೊಗ್ಗ: ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ ಎನ್ನುವಂತ ಮುಖ್ಯೋಪಾಧ್ಯಯರೊಬ್ಬರು ಸಾಗರ ನಗರದಲ್ಲಿದ್ದಾರೆ. ಇವರು ಶುಚಿತ್ವಕ್ಕಾಗಿ ಮಾಡಿದಂತ ಕಾರ್ಯ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾದ್ರೆ ಯಾರವರು? ಏನು ಮಾಡಿದ್ದು ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಬೆಳಲಮಕ್ಕಿಯಲ್ಲಿ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆಯ ಮುಖ್ಯೋಪಾಧ್ಯಯರಾಗಿ ದೇವೇಂದ್ರಪ್ಪ.ಕೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡ್ತಾರೆ. ಹೀಗಾಗೇ ಶಾಲೆಗೆ ಯಾರೇ ಎಂಟ್ರಿಕೊಟ್ರು, ಅದ್ಬುತವಾಗಿದೆ ಎಂದೇ ಹುಬ್ಬೇರುವಂತೆ ಮಾಡುತ್ತದೆ.
ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯೋಪಾಧ್ಯಯರು
ರಾಜ್ಯದ ಅನೇಕ ಕಡೆಯಲ್ಲಿ ಶಾಲಾ ಶೌಚಾಲಯವನ್ನು ವಿದ್ಯಾರ್ಥಿಗಳಿಂದಲೇ ಕ್ಲೀನ್ ಮಾಡಿಸಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವಂತ ಸುದ್ದಿ ಕೇಳಿದ್ದೀರಿ, ನೋಡಿದ್ದೀರಿ. ಆದರೇ ದೇವೇಂದ್ರಪ್ಪ.ಕೆ ಮಾತ್ರ ಇದಕ್ಕೆ ವ್ಯತಿರಿಕ್ತ. ಶೌಚಾಲಯ ಕ್ಲೀನ್ ಇಲ್ಲ ಅಂದ್ರೆ ವಿದ್ಯಾರ್ಥಿಗಳಿಂದ ಮಾಡಿಸೋ ಮಾತೇ ಇಲ್ಲ. ಖುದ್ದು ತಾವೇ ಪೊರಕೆ, ಶೌಚಾಲಯ ಕ್ಲೀನ್ ಮಾಡುವ ಬ್ರಷ್ ಹಿಡಿದು ಕ್ಲೀನ್ ಮಾಡಿ ಸ್ವಚ್ಛಗೊಳಿಸುತ್ತಾರೆ.
ಶುಚಿತ್ವಕ್ಕೆ ಮೊದಲ ಆದ್ಯತೆ, ವಿದ್ಯಾರ್ಥಿಗಳ ಆರೋಗ್ಯ ಮುಖ್ಯ
ವಿದ್ಯಾರ್ಥಿಗಳು ಬಳಸುವಂತ ಶೌಚಾಲಯಗಳು ಶುಚಿಯಾಗಿದ್ದರೇ ಅನಾರೋಗ್ಯದಂತ ಸಮಸ್ಯೆಗಳು ಕಾಡೋದಿಲ್ಲ. ನಮ್ಮ ಶಾಲಾ ವಿದ್ಯಾರ್ಥಿಗಳ ಆರೋಗ್ಯ ನಮಗೆ ಮುಖ್ಯ. ಶೌಚಾಲಯ ಕ್ಲೀನ್ ಮಾಡೋರು ಇದ್ದಾರೆ. ಕೆಲವೊಮ್ಮೆ ಬಾರದೇ ಇದ್ದಾಗ ನಾವೇ ಕ್ಲೀನ್ ಮಾಡಬೇಕು. ಯಾಕೆಂದ್ರೆ ಶೌಚಾಲಯ ಸ್ವಚ್ಛವಾಗಿದ್ದಾಗ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗುವಂತ ಸಮಸ್ಯೆ ಎದುರಾಗೋದಿಲ್ಲ ಎಂಬುದು ಮುಖ್ಯೋಪಾಧ್ಯಯ ದೇವೇಂದ್ರಪ್ಪ.ಕೆ ಮಾತು.
ದೇವೇಂದ್ರಪ್ಪ.ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ
ಕೆಲ ದಿನಗಳ ಹಿಂದೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆದಿತ್ತು. ಸಾಗರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದಂತ ಇವರು, ಆಯ್ಕೆ ಕೂಡ ಆಗಿದ್ದರು. ಆ ಬಳಿಕ ರಾಜ್ಯ ಪರಿಷತ್ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ದೇವೇಂದ್ರಪ್ಪ.ಕೆ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಶಾಲಾ ಮುಖ್ಯೋಪಾಧ್ಯಯರು, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿದ್ದರೂ ದೇವೇಂದ್ರಪ್ಪ.ಕೆ ಅವರಿಗೆ ಕೊಂಚವೂ ಅಹಂ ಇಲ್ಲ ಎಂಬುದು ಅವರನ್ನು ಕಂಡವರ ಮಾತು. ಇಂತಹ ಇವರು ಶಾಲಾ ಶೌಚಾಲಯವನ್ನು ತಾವೇ ಗುಡಿಸಿ, ಕ್ಲೀನ್ ಮಾಡಿದ ವೀಡಿಯೋವನ್ನು ಕಂಡಂತ ನೆಟ್ಟಿಗರು, ತಾಲ್ಲೂಕಿನ ಜನರು ಭಾರೀ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ದೇವೇಂದ್ರಪ್ಪ.ಕೆ ಅವರು ಶಾಲಾ ಶೌಚಾಲಯ ಶುಚಿಗೊಳಿಸುವಂತ ವೀಡಿಯೋ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳಿಂದ ಕ್ಲೀನ್ ಮಾಡಿಸೋ ಎಷ್ಟೋ ಶಿಕ್ಷಕರಿಗೆ ದೇವೇಂದ್ರಪ್ಪ.ಕೆ ಈಗ ಮಾದರಿಯಾಗಿದ್ದಾರೆ. ಇಂತಹ ದೇವೇಂದ್ರಪ್ಪ ಅವರಿಗೆ ಕನ್ನಡ ನ್ಯೂಸ್ ನೌ ಕೂಡ ಹ್ಯಾಟ್ಸ್ ಆಪ್ ಹೇಳುತ್ತಿದೆ. ಅವರ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸುತ್ತದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS : ಯಾರು ಕಣ್ಣೀರು ಹಾಕಬಾರದು, ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ : ನಿಖಿಲ್ ಕುಮಾರಸ್ವಾಮಿ ಹೇಳಿಕೆ
BREAKING: ಬಾಣಂತಿಯರ ಸಾವು ಕೇಸ್: ‘ಡ್ರಗ್ ಕಂಟ್ರೋಲರ್ ಉಮೇಶ್’ ಸಸ್ಪೆಂಡ್ – ಸಿ.ಎಂ.ಸಿದ್ದರಾಮಯ್ಯ
BREAKING: ಬಾಣಂತಿಯರ ಸರಣಿ ಸಾವು ಕೇಸ್: ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ: ಸಿಎಂ ಸಿದ್ಧರಾಮಯ್ಯ ಘೋಷಣೆ