ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಸೋಪಿನ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಹಲವು ಸಾಬೂನುಗಳ ಕಂಪನಿಗಳು ಸೋಪಿನ ಬೆಲೆಯನ್ನು ಶೇ. 7-8 ರಷ್ಟು ಏರಿಕೆ ಮಾಡಿವೆ.
ಹೌದು, ಇತ್ತೀಚಿಗೆ ಸಾಬೂನುಗಳ ಬೆಲೆಗಳು ಗಗನಕ್ಕೇರುತ್ತಿವೆ, ಪ್ರಮುಖ ಎಫ್‌ಎಂಸಿಜಿ ಕಂಪನಿಗಳಾದ ವೆಪ್ರೋ ಮತ್ತು ಎಚ್‌ಯುಎಲ್ (ಹಿಂದೂಸ್ತಾನ್ ಯೂನಿಲಿವರ್) ಸಾಬೂನುಗಳ ಬೆಲೆಯನ್ನು ಶೇಕಡಾ 7-8 ರಷ್ಟು ಹೆಚ್ಚಿಸಿವೆ. ಇದಕ್ಕೆ ಪ್ರಮುಖ ಕಾರಣ ತಾಳೆ ಎಣ್ಣೆ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.
HUL ಮತ್ತು Wipro ನಂತಹ FMCG ಕಂಪನಿಗಳು ಸಂತೂರ್, ಡವ್, ಲಕ್ಸ್, ಲೈಫ್ ಬಾಯ್, ಲಿರಿಲ್, ಪಿಯರ್ಸ್, ರೆಕ್ಸೋನಾ ಮುಂತಾದ ಸಾಬೂನುಗಳ ಬೆಲೆಯನ್ನು ಹೆಚ್ಚಿಸಿವೆ. ಕಚ್ಚಾ ಪಾಮ್ ಆಯಿಲ್ ಬೆಲೆ ಶೇ.35-40ರಷ್ಟು ಏರಿಕೆಯಾಗಿರುವುದರಿಂದ ಕಂಪನಿಗಳು ಸಾಬೂನು ದರದಲ್ಲಿ ಶೇ.7-8ರಷ್ಟು ಏರಿಕೆ ಘೋಷಿಸಿವೆ.
ಇವುಗಳ ಹೊರತಾಗಿ, ಚರ್ಮವನ್ನು ಸ್ವಚ್ಛಗೊಳಿಸುವ ಉತ್ಪನ್ನಗಳ ದರಗಳು ಸಹ ಸಾಬೂನುಗಳ ತಯಾರಿಕೆಯಲ್ಲಿ ಪ್ರಮುಖ ಅಂಶವಾಗಿದೆ. ಇದು ಉತ್ಪಾದನಾ ವೆಚ್ಚವನ್ನು ನೇರವಾಗಿ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವುದರಿಂದ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಅಗತ್ಯವನ್ನು ವ್ಯಕ್ತಪಡಿಸುತ್ತಿವೆ. ಇತ್ತೀಚಿಗೆ ಕಾಫಿ, ಟೀ ಪುಡಿಯ ಬೆಲೆಯೂ ಏರಿಕೆಯಾಗಿರುವುದು ಗೊತ್ತೇ ಇದೆ.