ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2400 ಕೆ.ಎಸ್.ಆರ್.ಪಿ. ಪೋಲೀಸರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಹೌದು, ರಾಜ್ಯ ಸರ್ಕಾರವು ಸಶಸ್ತ್ರ ಮೀಸಲು ಪಡೆಯ ಎರಡು ಹೊಸ ಬೆಟಾಲಿಯನ್ ಆರಂಭಿಸಲು ಸೂಚನೆ ನೀಡಿದ್ದು, ದೇವನಹಳ್ಳಿ ಮತ್ತು ಕೆಜಿಎಫ್ ಬಳಿ 2,400 ಪೊಲೀಸರ ಬಲವುಳ್ಳ ಎರಡು ಬೆಟಾಲಿಯನ್ ಆರಂಭಕ್ಕೆ ಅಧಿಕೃತವಾಗಿ ಆದೇಶಿಸಿದ್ದು, ಪ್ರಸ್ತುತ 12 ಕೆ.ಎಸ್.ಆರ್.ಪಿ., ಎರಡು ಐ.ಆರ್.ಬಿ. ಬೆಟಾಲಿಯನ್ ಗಳು ಇದ್ದು, ಮತ್ತಷ್ಟು ಬೆಟಾಲಿಯನ್ ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರ ಒಪ್ಪಿಗೆ ನೀಡಿದೆ.
ದೇವನಹಳ್ಳಿ ಸಮೀಪ ನೂರು ಎಕರೆ, ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ 50 ಎಕರೆ ಜಾಗದಲ್ಲಿ ಹೊಸ ಬೆಟಾಲಿಯನ್ ಆರಂಭಿಸಲಿದ್ದು, ಇಲ್ಲಿ ತಲಾ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ 2400 ಪೊಲೀಸರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.