ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ದಿನಾಂಕ: 28.11.2024ರ ಸಚಿವ ಸಂಪುಟದ ಮಹತ್ವದ ನಿರ್ಣಯಗಳ ಬಗ್ಗೆ ಮುಂದೆ ಓದಿ.
ಲೋಕಾಯುಕ್ತ ಸಂಸ್ಥೆಯಲ್ಲಿ ಎಸ್.ನಿರಂಜನ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗೂ ಬಿ.ಪ್ರಸನ್ನಕುಮಾರ್, ನಿವೃತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಸೇವೆಯನ್ನು ಮತ್ತೊಂದು ವರ್ಷದ ಅವಧಿಗೆ ಮುಂದುವರೆಸಲು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಆಡಳಿತ ಹಿತದೃಷ್ಟಿಯಿಂದ ಹಾಗೂ ತಾಂತ್ರಿಕ ವಿಭಾಗಕ್ಕೆ ವಹಿಸುವ ದೂರು ಪ್ರಕರಣಗಳಲ್ಲಿ ತನಿಖಾ ವರದಿಗಳನ್ನು ನಿಗದಿತ ಕಾಲಾವದಿಯೊಳಗೆ ಪಡೆಯುವುದು ಅವಶ್ಯಕವಾಗಿದೆ ಎಂದು ಲೋಕಾಯುಕ್ತ ನಿಬಂಧಕರು ಕೋರಿರುತ್ತಾರೆ.
• ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 05 ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳು ಹಾಗೂ 08 ಸಹಾಯಕ ಇಂಜಿನಿಯರ್‌ಗಳ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಇಬ್ಬರು ಕಾರ್ಯಪಾಲಕ ಇಂಜಿನಿಯರ್ ಹಾಗೂ ಒಬ್ಬರು ಸಹಾಯಕ ಇಂಜಿನಿಯರ್ ಹುದ್ದೆಗಳು ಖಾಲಿಯಿವೆ.
ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ಅನುಸೂಚಿ-1ರ ಐಟಂ-19ರನ್ವಯ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಹುದ್ದೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಸ್. ನಿರಂಜನ್, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗೂ ಬಿ. ಪ್ರಸನ್ನಕುಮಾರ್, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರುಗಳ ಸೇವೆಗಳನ್ನು ಮತ್ತೊಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸದರಿಯವರುಗಳ ಹೆಸರಿನ ಮುಂದೆ ನಮೂದಿಸಿರುವ ದಿನಾಂಕದಿಂದ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಡಾ. ನವೀನ್ ಕುಮಾರ್ ಜಿ., ನಿವೃತ್ತ ವೈದ್ಯಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಮಾನ್ಯ ರಾಜ್ಯಪಾಲರ ಸಚಿವಾಲಯದಲ್ಲಿನ ಶಸ್ತçಚಿಕಿತ್ಸಕರ ಹುದ್ದೆಯಲ್ಲಿ ದಿನಾಂಕ: 01.08.2017 ರಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇವರ ಗುತ್ತಿಗೆ ಸೇವೆಯನ್ನು ಮಾನ್ಯ ರಾಜ್ಯಪಾಲರ ಸಚಿವಾಲಯದಲ್ಲಿ ದಿನಾಂಕ: 01.08.2024 ರಿಂದ ಇನ್ನೂ ಒಂದು ವರ್ಷದ ಅವಧಿಗೆ ಮುಂದುವರೆಸಲು ಪ್ರಸ್ತಾಪಿಸಲಾಗಿದೆ.
ಸದರಿಯವರು 7 ವರ್ಷಗಳಿಂದ ರಾಜ್ಯಪಾಲರ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಡಾ. ನವೀನ್ ಕುಮಾರ್ ಜಿ., ವೈದ್ಯಾಧಿಕಾರಿ (ನಿವೃತ್ತ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಇವರನ್ನು ಮಾನ್ಯ ರಾಜ್ಯಪಾಲರ ಸಚಿವಾಲಯದಲ್ಲಿನ ಶಸ್ತçಚಿಕಿತ್ಸಕರ ಹುದ್ದೆಯಲ್ಲಿ ದಿನಾಂಕ: 01.08.2024 ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಲು” ಸಚಿವ ಸಂಪುಟ ಅನುಮೋದನೆ ನೀಡಿದೆ.
(4) NFDS ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಆರೋಗ್ಯ ಸಂಸ್ಥೆಗಳಲ್ಲಿ ಕನಿಷ್ಠ ರೋಗ ಪತ್ತೆ ಸೇವೆ ಒದಗಿಸಲು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವುದು.
NFDS ಕಾರ್ಯಕ್ರಮದಡಿ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಹಾಗೂ ತಳಮಟ್ಟದಲ್ಲಿ ಆರೋಗ್ಯ ಸೇವೆಯನ್ನು ಹೆಚ್ಚಿಸಲು ಮತ್ತು ನಮ್ಮ ಕ್ಲಿನಿಕ್‌ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗ, ಕೊಳಗೇರಿ ನಿವಾಸಿಗಳಿಗೆ ಮತ್ತು ವಲಸಿಗರಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧಿಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ.
15ನೇ ಹಣಕಾಸು ಆಯೋಗದ ಅನುದಾನದಲ್ಲಿ ರೂ.145.99 ಕೋಟಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ 15ನೇ ಹಣಕಾಸು ಆಯೋಗದ ರೂ.84.48 ಕೋಟಿ ಮತ್ತು ನಮ್ಮ ಕ್ಲಿನಿಕ್‌ಗೆ ರೂ.72.96 ಕೋಟಿಗಳ ವೆಚ್ಚದಲ್ಲಿ ಈ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಅನುಸೂಚಿ-1 ರ ಕ್ರಮ ಸಂಖ್ಯೆ: 15(1) ರಂತೆ ವಿವಿಧ ಕಾರ್ಯಕ್ರಮದಡಿ 15ನೇ ಹಣಕಾಸು ಆಯೋಗ ಮತ್ತು PM- ABHIM ರಡಿ ಅನುಮೋದನೆಯಾಗಿರುವ ಅನುದಾನದಲ್ಲಿ ಔಷಧ, ಪ್ರಯೋಗಾಲಯ ಉಪಕರಣ, ರೋಗ ಪತ್ತೆ ಕಿಟ್‌ಗಳು, ರಾಸಾಯನಿಕ, ಉಪಭೋಗ್ಯ ಮತ್ತು ಪರಿಕರಗಲ ಖರೀದಿಗೆ ಹಾಗೂ ಇತರ ಚಟುವಟಿಕೆಗಳಿಗೆ ಈ ಕೆಳಕಂಡ ಅಂಶಗಳಿಗೆ ಸಚಿವ ಸಂಪುಟದ ಅನುಮೋದನೆ ನೀಡಿದೆ.
(5) ಚಿಕ್ಕಬಳ್ಳಾಪುರದಲ್ಲಿ 50 ಹಾಸಿಗೆಯ ತೀವ್ರ ನಿಗಾ ಆರೋಗ್ಯ ಘಟಕವನ್ನು ನಿರ್ಮಿಸುವುದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಸ್ಥಳಾಂತರಿಸಿ, ನಿರ್ಮಿಸಲು ಘಟನೋತ್ತರ ಅನುಮೋದನೆ ಕೋರಲಾಗಿತ್ತು.
ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಬೋಧನಾ ಆಸ್ಪತ್ರೆಯಾಗಿದ್ದು, 300 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.
• ಒಟ್ಟು ಯೋಜನಾ ವೆಚ್ಚ ರೂ.16.63 ಕೋಟಿಗಳು.
• 50 ಹಾಸಿಗೆಯ ತೀವ್ರ ನಿಗಾ ಆರೋಗ್ಯ ಘಟಕ ಸ್ಥಾಪನೆ.
2023-24ನೇ ಸಾಲಿನಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದ PM-ABHIM (PM-Ayushman Bharat Health Infrastructure Mission) ) ಯೋಜನೆಯಡಿ ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (CIMS) ಚಿಕ್ಕಬಳ್ಳಾಪುರ ಇಲ್ಲಿ ಅನುಮೋದನೆಯಾಗಿರುವ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿಗೆ ಸ್ಥಳಾಂತರಿಸಿ ರೂ.16.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಅನುಮೋದಿಸಲಾಗಿರುವ ಆದೇಶ ಸಂಖ್ಯೆ; ಆಕುಕ 363 ಸಿಜಿಎಂ 2024, ದಿನಾಂಕ: 15.10.2024 ಕ್ಕೆ ಘಟನೋತ್ತರ ಅನುಮೋದನೆ; ದಿನಾಂಕ: 15.10.2024ರ ಆದೇಶದಲ್ಲಿ ರೂ.16.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಿರುವುದನ್ನು ರೂ.16.63 ಕೋಟಿಗಳು ಎಂದು ತಿದ್ದುಪಡಿ ಹೊರಡಿಸಲು; ಸಚಿವ ಸಂಪುಟ ಅನುಮೋದಿಸಿದೆ.
(6) ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ಯಮ ಸಮಿತಿಯ ಶಿಫಾರಸ್ಸಿನಂತೆ ದೊಡ್ಡ ದೊಡ್ಡ ಬಸ್ ನಿಲ್ದಾಣಗಳಲ್ಲಿ ಮತ್ತು ಟಿಟಿಎಂಸಿ (Traffic Transit management Centre) ಗಳಲ್ಲಿ ಒಟ್ಟು 254 ನಮ್ಮ ಕ್ಲಿನಿಕ್‌ಗಳಲ್ಲಿ 39 ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಪ್ರಸ್ತಾಪಿಸಲಾಗಿತ್ತು.
• ಒಟ್ಟು ಯೋಜನಾ ವೆಚ್ಚ ರೂ.108.36 ಕೋಟಿ.
• 254 ನಗರ ಆರೋಗ್ಯ ಕ್ಷೇಮ ಕೇಂದ್ರ, ನಮ್ಮ ಕ್ಲಿನಿಕ್
• 39 ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುವುದು.
PM-ABHIM ಯೋಜನೆಯಡಿ 2024-25 ಮತ್ತು 2025-26ನೇ ಸಾಲಿಗೆ ಅನುಮೋದಿತವಾಗಿರುವ ಒಟ್ಟು ರೂ.108.36 ಕೋಟಿ ವೆಚ್ಚದಲ್ಲಿ (ಆವರ್ತಕ ವೆಚ್ಚ ವರ್ಷಕ್ಕೆ ರೂ.98.59 ಕೋಟಿ ಮತ್ತು ಅನಾವರ್ತಕ ವೆಚ್ಚ ರೂ.9.761 ಕೋಟಿ) 254 ನಗರ ಆರೋಗ್ಯ ಕ್ಷೇಮಕೇಂದ್ರ (ನಮ್ಮ ಕ್ಲಿನಿಕ್) ಗಳನ್ನು ಕಂಡಿಕೆ 4ರಲ್ಲಿ ಆರ್ಥಿಕ ಇಲಾಖೆಯು ನೀಡಿರುವ ಷರತ್ತುಗಳಿಗೆ ಒಳಪಟ್ಟು ಸ್ಥಾಪಿಸಲು; ಸಚಿವ ಸಂಪುಟ ಅನುಮೋದಿಸಿದೆ.
(7) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿತ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನ ವಿಧಾನಮಂಡಲದಲ್ಲಿ ಮಂಡಿಸಲು ನಿಯಮ 8ಕ್ಕೆ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕರ್ನಾಟಕ ನಿಯಮಗಳು 2009 ರಲ್ಲಿ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ಪ್ರಸ್ತಾಪವಿಲ್ಲ.
ಈ ತಿದ್ದುಪಡಿಯ ಮೂಲಕ ವಿಧಾನಮಂಡದಲ್ಲಿ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ.
“ಅಸಂಘಟಿಕ ಕಾರ್ಮಿಕ ಸಾಮಾಜಿಕ ಭದ್ರತೆ (ಕರ್ನಾಟಕ) (ತಿದ್ದುಪಡಿ) ನಿಯಮಗಳು, 2024”ಕ್ಕೆ ಅನುಮೋದನೆ; ನೀಡಲು ಸಚಿವ ಸಂಪುಟ ಒಪ್ಪಿದೆ.
(8) ಕಾರ್ಮಿಕರ ಕಲ್ಯಾಣ ನಿಧಿ ಕಾಯ್ದೆ 1965ರ ಸೆಕ್ಷನ್ 7(ಎ)(2)ಕ್ಕೆ ತಿದ್ದುಪಡಿ ಮಾಡುವ ಮೂಲಕ ಈ ಮೊದಲು ಪ್ರತಿ ಕಾರ್ಮಿಕರಿಂದ ರೂ.20/-, ಮಾಲಿಕರಿಂದ ಕಾರ್ಮಿಕರ ಪಾಲು ರೂ.40/-, ಸರ್ಕಾರದಿಂದ ಕಾರ್ಮಿಕರ ಪಾಲು ರೂ.20/- ಗಳನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸುವುದನ್ನು ಹೆಚ್ಚಿಸಿ ಕಾರ್ಮಿಕರಿಂದ ರೂ.50/-, ಮಾಲಿಕರಿಂದ ಪ್ರತಿ ಕಾರ್ಮಿಕರಿಗೆ ರೂ.100/- ಹಾಗೂ ಸರ್ಕಾರದಿಂದ ಪ್ರತಿ ಕಾರ್ಮಿಕರಿಗೆ ರೂ.50/- ಗಳ ವಂತಿಕೆಯನ್ನು ಹೆಚ್ಚಿಸಲು ಕಾಯ್ದೆ ತಿದ್ದುಪಡಿ ಮಾಡಲಾಗುತ್ತದೆ.
ಇದರಿಂದಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ವಂತಿಕೆ ಹೆಚ್ಚುವುದರಿಂದ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಭಿತರಿಗಾಗಿ ಹಮ್ಮಿಕೊಂಡಿರುವ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಹಾಗೂ ಇನ್ನೂ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ.
• ಸರ್ಕಾರವು ರೂ.15.81 ಕೋಟಿಗಳ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.
• ಪ್ರಸ್ತುತ ರೂ.42.18 ಕೋಟಿ ವಂತಿಕೆ ಸಂಗ್ರಹವಾಗುತ್ತಿದೆ.
• 7 ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
“ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2024”ನ್ನು ಅನುಮೋದಿಸಲು ಹಾಗೂ ಸದರಿ ವಿಧೇಯಕವನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
(9) ಕರ್ನಾಟಕ ನ್ಯಾಯಾಲಯಗಳು – ಸರ್ವೀಸ್ ಆಫ್ ಸಮನ್ಸ್ / ನೋಟಿಸ್‌ಗಳು / ಪ್ರೊಸೆಸ್ / ಡಾಕ್ಯುಮೆಂಟ್ಸ್ (ಸಿವಿಲ್ ಪ್ರೊಸೀಡಿಂಗ್ಸ್) ಬೈ ಎಲೆಕ್ಟಾçನಿಕ್ ಮೆಯಿಲ್ ನಿಯಮಗಳು, 2023 ಮತ್ತು ಕರ್ನಾಟಕ ನ್ಯಾಯಾಲಯಗಳು – ಸರ್ವೀಸ್ ಆಫ್ ಸಮನ್ಸ್ ನೋಟಿಸ್‌ಗಳು / ಪ್ರೊಸೆಸ್ / ಡಾಕ್ಯುಮೆಂಟ್ಸ್ (ಸಿವಿಲ್ ಪ್ರೊಸೀಡಿಂಗ್ಸ್) ಬೈ ಕೊರಿಯರ್ ನಿಯಮಗಳು, 2023ರ ನಿಯಮಗಳನ್ನು ಅಧಿಸೂಚಿಸಲು ಪ್ರಸ್ತಾಪಿಸಲಾಗಿದೆ.
ದಿ:15.03.2024 ರಂದು ಹೊರಡಿಸಿರುವ ಈ ನಿಯಮಗಳಿಗೆ ಘಟನೋತ್ತರ ಮಂಜೂರಾತಿ ನೀಡಿದೆ.
(10) ಪ್ರಸ್ತಾಪಿತ ನಿಯಮಗಳಲ್ಲಿ ರಾಜ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಅಧಿಕಾರಿಯೇತರ ಸದಸ್ಯರಿಗೆ ಗೌರವಧನ, ಪ್ರಯಾಣಭತ್ಯೆ, ದಿನಭತ್ಯೆ, Seeting Fee ಭರಿಸಲು ಪ್ರಸ್ತಾಪಿಸಲಾಗಿದೆ ಮತ್ತು Karnataka State Allied and Healthcare Professions Council ನ್ನು ರಚಿಸಲು ತಯಾರಿಸಿರುವ ಕರಡು ನಿಯಮವನ್ನು ಮಂಜೂರಾತಿಗೆ ಪ್ರಸ್ತಾಪಿಸಲಾಗಿತ್ತು.
“Karnataka State Allied and Healthcare Professions Council ನಿಯಮಗಳು, 2024”ಕ್ಕೆ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ.
(11) ಎಂ. ರಾಧಾಕೃಷ್ಣನ್, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಸಣ್ಣ ನೀರಾವರಿ ಉಪವಿಭಾಗ, ನೆಲಮಂಗಲ ಕಚೇರಿಗೆ ಕಾರ್ಯವರದಿ ಮಾಡಿಕೊಳ್ಳುವ ಪೂರ್ವದಲ್ಲಿ ಈ ಘಟನೆ ನಡೆದಿರುವುದರಿಂದ ಆಪಾದಿತರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಮುಖ್ಯ ಇಂಜಿನಿಯರ್ ರವರು ವರದಿ ಮಾಡಿರುತ್ತಾರೆ. ಈ ಪ್ರಕರಣವನ್ನು ಕೈಬಿಡಲು ಪ್ರಸ್ತಾಪಿಸಲಾಗಿದೆ.
“ ಎಂ. ರಾಧಕೃಷ್ಣನ್ (ನಿವೃತ್ತ) ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರ ವಿರುದ್ದದ ಆರೋಪಗಳಿಗೆ ಸಂಬಂಧಿಸಿದಂತೆ ಇವರಿಗೆ ದಂಡನೆ ವಿಧಿಸಲು ಮಾನ್ಯ ಉಪ ಲೋಕಾಯುಕ್ತರವರು ಮಾಡಿರುವ ಶಿಫಾರಸ್ಸನ್ನು ಅಂಗೀಕರಿಸದೇ ಪ್ರಕರಣದಲ್ಲಿನ ಆರೋಪಿತರನ್ನು ದೋಷಮುಕ್ತಗೊಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು; ಸಚಿವ ಸಂಪುಟ ಅನುಮೋದಿಸಿದೆ.
(12) ಉಪ ಲೋಕಾಯುಕ್ತರ ವರದಿಯಲ್ಲಿ ಸದರಿ ಕಾಮಗಾರಿಯಿಂದ ಯಾವುದೇ ಆರ್ಥಿಕ ನಷ್ಟವಾಗಲಿ ಅಥವಾ ಕಾಮಗಾರಿಯ ಗುಣಮಟ್ಟ ಕಳಪೆ ಎಂದು ತೀರ್ಮಾನಕ್ಕೆ ಬಾರದೆ ಇರುವುದರಿಂದ ದಂಡನಾ ಕ್ರಮವನ್ನು ಕೈಬಿಡಲು ಪ್ರಸ್ತಾಪಿಸಲಾಗಿತ್ತು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸದಾಶಿವಪುರ (ಉಜ್ಜಿನಿಪು) ಮತ್ತು ಕೂಲಂಬಿ ಕೆರೆ ಕಾಮಗಾರಿಗೆ ಸಂಬಂಧಿಸಿದಂತೆ ಕೆ.ಜಗದೀಶ್, ಕಿರಿಯ ಅಭಿಯಂತರರು, 2) ಹೆಚ್.ಕೆ ಕಲ್ಲಪ್ಪ, ಸ.ಕಾ.ಅ ಮತ್ತು 3) ಡಿ.ಕೆ ತಿಮ್ಮಪ್ಪ, ಕಾ.ಇಂ ಸಣ್ಣ ನೀರಾವರಿ ಇಲಾಖೆ, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14-ಎ ರಡಿ ಲೋಕಾಯುಕ್ತ ಸಂಸ್ಥೆಗೆ ವಹಿಸುವಂತೆ ಮಾನ್ಯ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ, ಕಲಂ 12(3) ರಡಿ ಪತ್ರ ಸಂಖ್ಯೆ: uplok-/BD-2316/2018/DRE-1, ದಿನಾಂಕ: 13.08.2020 ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸು ಸಹಿತದ ವರದಿಯನ್ನು ಸಚಿವ ಸಂಪುಟ ಅನುಮೋದಿಸಿದೆ.
(13) ಕಾರ್ಯನಿರತವಲ್ಲದ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಅಪಘಾತಕ್ಕಿ ಡಾಗುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮ ವಹಿಸಲು
1) ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು.
2) ಕಲಂ 11(ಎ) ರನ್ವಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ ಮತ್ತು ಅಧಿಸೂಚಿತವಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಲು ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5 ಸಾವಿರ ದಂಡ ಮತ್ತು 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುತ್ತದೆ.
3) ಕಲಂ 21(ಎ) ಅನ್ವಯ ಕೊಳವೆ ಬಾವಿ ಕೊರೆಯುವ ಸಂಸ್ಥೆಗಳು ಅನುಷ್ಠಾನ ಏಜೆನ್ಸಿಗಳು, ಭೂ ಮಾಲಿಕರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಲ್ಲಿ ಒಂದು ವರ್ಷದ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸುತ್ತದೆ.
The Karnataka Groundwater (Regulation and Control of Development and Management) (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದಿಸಿದೆ ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಅನುಮೋದಿಸಿದೆ.
(14) ರಾಯಚೂರು ಜಿಲ್ಲೆ, ರಾಯಚೂರು ತಾಲ್ಲೂಕಿನ ಯರಮರಸ್ ಗ್ರಾಮದ ಸ.ನಂ. 55/*/1ಅ ರಲ್ಲಿ 14 ಗುಂಟೆ “ಗೋಮಾಳ” ಜಮೀನನ್ನು ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವನ್ನು ನಿರ್ಮಿಸಲು ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು.
• 14 ಗುಂಟೆ ಗೋಮಾಳ ಜಮೀನು. ಯರಮರಸ್ ಗ್ರಾಮದ ಸ.ನಂ.55/*/1ಅ.
“ಗೋಮಾಳ” ಜಮೀನುಗಳನ್ನು ಯಾವುದೇ ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ, ಕರ್ನಾಟಕ ಭೂ ಕಂದಾಯ ನಿಯಮಗಳು ಮತ್ತು ಕರ್ನಾಟಕ ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಮತ್ತು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(ಎ)(2)ರನ್ವಯ ನಗರ ಪೌರ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ/ಸಂಸ್ಥೆಗಳಿಗೆ ಮಂಜೂರು ಮಾಡಲು ಸಹ ಅವಕಾಶವಿರುವುದಿಲ್ಲವಾದ್ದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸಲು ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ವಸತಿ ಉದ್ದೇಶವನ್ನು ಒದಗಿಸುವ ಹಿತದೃಷ್ಟಿಯಿಂದ, ರಾಯಚೂರು ಜಿಲ್ಲೆ, ರಾಯಚೂರು ತಾಲ್ಲೂಕು, ಯರಮರಸ್ ಗ್ರಾಮದ ಸರ್ವೇ ನಂ.55/*/1ಅ ರಲ್ಲಿ 14 ಗುಂಟೆ “ಗೋಮಾಳ” ಜಮೀನನ್ನು ವಿದ್ಯಾರ್ಥಿ ನಿಲಯ ನಿರ್ಮಾಣದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರನ್ವಯ “ಗೋಮಾಳ” ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ, 22(ಎ)(2)ನ್ನು ಸಡಿಲಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(ಎ)(1)(1)(3) ರನ್ವಯ ಪ್ರಸ್ತಾಪಿತ ಜಮೀನಿನ ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇ.25 ರಷ್ಟು ಹಾಗೂ ಇನ್ನಿತರ ಶಾಸನಬದ್ದ ಶುಲ್ಕಗಳನ್ನು ವಿಧಿಸಿ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕನಕದಾಸ ವೃತ್ತ ಗಾಂಧಿನಗರ, ಬೆಂಗಳೂರು ಇವರಿಗೆ ಮಂಜೂರು ಮಾಡುವುದು.
ಸಚಿವ ಸಂಪುಟವು ತೆಗೆದುಕೊಳ್ಳುವ ಯಾವುದೇ ಇನ್ನಿತರ ನಿರ್ಣಯಕ್ಕೆ ಸಚಿವ ಸಂಪುಟ ಅನುಮೋದಿಸಿದೆ.
(15) ಬಸವನಬಾಗೇವಾಡಿಯ ಬಸವಣ್ಣನವರ ಜನ್ಮಸ್ಥಳದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಪ್ರಸ್ತಾಪಿಸಲಾಗಿತ್ತು.
ಪ್ರಾಧಿಕಾರದ ರಚನೆಯ ವಿಧೇಯಕವನ್ನು ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಪ್ರಸ್ತಾಪಿಸಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ “ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ” ರಚಿಸಲು ಅನುಬಂಧದಲ್ಲಿರುವ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024ಕ್ಕೆ ಹಾಗೂ ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಸದರಿ ವಿಧೇಯಕವನ್ನು ಮಂಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
(16) ವಾಹನ ನೋಂದಣಿ ಪ್ರಮಾಣ ಪತ್ರ (Registration Certificate) ಮತ್ತು ಚಾಲನಾ ಅನುಜ್ಞಾ ಪತ್ರ (Driving License) ನೀಡುವ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿ – ಅವಕಾಶವನ್ನು ಕೈಬಿಟ್ಟು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಮಂಜೂರಾತಿ ಕೋರಲಾಗಿತ್ತು.
ಸ್ಮಾರ್ಟ್ ಕಾರ್ಡ್ ಸೇವಾ ವೆಚ್ಚವನ್ನು ನೀಡಲು ಸರ್ಕಾರದ ವತಿಯಿಂದ ವಾರ್ಷಿಕ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಯಶಸ್ವಿ ಬಿಡ್ಡುದಾರರೊಂದಿಗೆ ಸೇವಾ ಒಪ್ಪಂದ ಮಾಡಿಕೊಂಡು ಸೇವಾ ವೆಚ್ಚವನ್ನು ಪಾವತಿಸಲಾಗುತ್ತದೆ.
“ನೋಂದಣಿ ಪ್ರಮಾಣ ಪತ್ರ (Registration Certificate) ಮತ್ತು ಚಾಲನಾ ಅನುಜ್ಞಾ ಪತ್ರ (Driving License) ನೀಡುವ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಂಬAಧಿಸಿದAತೆ ಸರ್ಕಾರದ ಆದೇಶ ಸಂಖ್ಯೆ: ಟಿಡಿ 100 ಟಿಡಿಒ 2023 (ಭಾಗ-2) ದಿನಾಂಕ: 15.03.2024ರ ಆದೇಶ ಭಾಗದಲ್ಲಿನ ಪಿಪಿಪಿ (BOOT) ಮಾದರಿಯಲ್ಲಿ ಎಂಬ ಪದಗಳನ್ನು ಕೈಬಿಟ್ಟು ಸರ್ಕಾರದ ಆದೇಶ ಸಂಖ್ಯೆ: ಟಿಡಿ 100 ಟಿಡಿಒ 2023 (ಭಾಗ-2), ದಿನಾಂಕ: 18.07.2024 ರಲ್ಲಿ (ಅನುಬಂಧ-ಬಿ) ತಿದ್ದುಪಡಿ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಿದೆ.
(17) 27 ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಪ್ರಬಂಧಕ ಮಂಡಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಾತಿನಿದ್ಯಕ್ಕೆ ಅವಕಾಶ ಕಲ್ಪಿಸಿದೆ.
ಇದೆ ಅವಕಾಶವನ್ನು ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೂ ಸಹ ಕಲ್ಪಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.
ಚಾಣಕ್ಯ ವಿಶ್ವವಿದ್ಯಾಲಯ ಅಧಿನಿಯಮ, 2021ರ (2021ರ ಕರ್ನಾಟಕ ಅಧಿನಿಯಮ ಸಂಖ್ಯೆ: 37) ಪ್ರಕರಣ 26ರ (1)ನೇ ಹಾಗೂ (3)ನೇ ಉಪ ಪ್ರಕರಣಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿರುವ ಹಾಗೂ ಈ ಸಚಿವ ಸಂಪುಟ ಟಿಪ್ಪಣಿಯೊಂದಿಗೆ ಲಗತ್ತಿಸಿ “ಅನುಬಂಧ-1” ಎಂದು ಗುರುತಿಸಲಾಗಿರುವ ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024”ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
(18) ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಲಾಗಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ಸೇವೆ ಸಲ್ಲಿಸಬೇಕಾಗಿರುತ್ತದೆ.
ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೆಲವೊಂದು ಪ್ರಕರಣಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.
1. ಅನುಬಂಧದಲ್ಲಿರುವ “ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024” ಹಾಗೂ ಇದನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು; ಸಚಿವ ಸಂಪುಟ ಅನುಮೋದಿಸಿದೆ.
(19) ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ Digital Weighbridge ಗಳನ್ನು ಸ್ಥಾಪಿಸಲು – ಮೊದಲ ಹಂತದಲ್ಲಿ ರಾಜ್ಯದ 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಗುರುತಿಸಲಾದ 15 ಸ್ಥಳಗಳಲ್ಲಿ ರೂ.11.01 ಕೋಟಿಗಳ ಅಂದಾಜು ಮೊತ್ತದಲ್ಲಿ Digital Weighbridge ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಒಟ್ಟು ಯೋಜನಾ ವೆಚ್ಚ ರೂ.11.01 ಕೋಟಿಗಳು – 13 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಗುರುತಿಸಿರುವ 15 ಸ್ಥಳಗಳಲ್ಲಿ ಡಿಜಿಟಲ್ ಮತ್ತು ಟ್ಯಾಂಪರಿAಗ್ ಪ್ರೂಫ್ ವೇಬ್ರಿಡ್ಜ್ಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ.
(20) ಈ ಕಾರಿಡಾರ್ 2 ಮತ್ತು 4 ರಲ್ಲಿ ಡಿಸೆಂಬರ್ 2026 ಮತ್ತು ಇತರೆ 2 ಕಾರಿಡಾರ್‌ಗಳಲ್ಲಿ ಡಿಸೆಂಬರ್ 2027 ರೊಳಗೆ ಕಾರ್ಯಾಚರಣೆ ಪ್ರಾರಂಭಿಸಲು ಯೋಜಿಸಲಾಗಿದೆ.
ಆದರೆ, Rolling Stock ಸಂಗ್ರಹಣೆಗಾಗಿ ಆಹ್ವಾನಿಸಿರುವ ಟೆಂಡರ್‌ಗಳಲ್ಲಿ ಯಾರು ಭಾಗವಹಿಸದೇ ಇರುವುದರಿಂದ ಇಕ್ವೀಟಿ ಮಾದರಿಯಲ್ಲಿ Rolling Stock ಸಂಗ್ರಹಣೆ ಅನುಮೋದಿಸಲು ಕೋರಲಾಗಿತ್ತು.
• ಒಟ್ಟು ಅಂದಾಜು ಮೊತ್ತ ರೂ.4300.00 ಕೋಟಿ.
• ಮುಂದಿನ 5 ವರ್ಷಗಳಲ್ಲಿ ಕೆ.ಆರ್.ಐ.ಡಿ.ಇ ಗೆ ರೂ.2135 ಕೋಟಿ ಒದಗಿಸಲು.
• ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯದ ನಡುವೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಇಕ್ವೀಟಿ.
• ಇಕ್ವೀಟಿ ಆಧಾರದ ಮೇಲೆ ಖoಟಟiಟಿg Sಣoಛಿಞ ನ ನೇರ ಸಂಗ್ರಹಣೆಯನ್ನು ಕ-ರೈಡ್ ಮೂಲಕ ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು.
ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯದ ನಡುವೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಈಕ್ವಿಟಿ ಆಧಾರದ ಮೇಲೆ ರೋಲಿಂಗ್ ಸ್ಟಾಕ್‌ನ ನೇರ ಸಂಗ್ರಹಣೆಯನ್ನು ಕ-ರೈಡ್ ಮೂಲಕ ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ನೀಡುವುದು;
ಈ ಸಂಗ್ರಹಣೆಗೆ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ಅಂದರೆ ರೂ.2135 ಕೋಟಿ (ಒಟ್ಟು 306 ಕೋಚ್‌ಗಳಿಗೆ ಜಿಎಸ್‌ಟಿ 18% ಮತ್ತು ಎಸ್ಕಲೇಶನ್ 5% ಸೇರಿದಂತೆ) ಮುಂದಿನ 5 ವರ್ಷಗಳಲ್ಲಿ ಕೆಆರ್‌ಐಡಿಇ ಗೆ ರೂ.2135 ಕೋಟಿ ಒದಗಿಸಲು ಅನುಮೋದನೆಯನ್ನು ನೀಡಲು; ಸಚಿವ ಸಂಪುಟ ಅನುಮೋದಿಸಿದೆ.
(21) ಸರಕು ಮತ್ತು ಸೇವೆಗಳ ತೆರಿಗೆಯು ಏಕರೂಪದ ತೆರಿಗೆ ಪದ್ಧತಿಗಳಾಗಿರುವುದರಿಂದ ಕೇಂದ್ರ ಸರ್ಕಾರದ ಸರಕು ಮತ್ತು ಸೇವೆಗಳ ಅಧಿನಿಯಮ ಈಗಾಗಲೇ ತಿದ್ದುಪಡಿಯಾಗಿರುವದರಿಂದ ಅದೇ ರೀತಿಯ ತಿದ್ದುಪಡಿಯನ್ನು ರಾಜ್ಯದಲ್ಲಿ ಕೂಡ ಅಳವಡಿಸಿಕೊಳ್ಳಲು ಪ್ರಸ್ತಾಪಿಸಲಾಗಿತ್ತು.
ವಿವಾದಿತ ತೆರಿಗೆ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವಾಗ ರೂ.50.00 ಕೋಟಿ ಬದಲಿಗೆ ರೂ.20.00 ಕೋಟಿಗೆ ಅವಕಾಶ ಕಲ್ಪಿಸುತ್ತದೆ.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿದೇಯಕ 2024 ಕ್ಕೆ ಅನುಮೋದನೆ ಹಾಗೂ 54ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆಯ ಶಿಫಾರಸ್ಸಿನಂತೆ ಪ್ರಸ್ತಾಪಿತ ವಿದೇಯಕದಲ್ಲಿನ ಪ್ರಕರಣ 112 (8) (ಬಿ) ರಲ್ಲಿ ಈ ಕೆಳಕಂಡ ಅಂಶವನ್ನು ಸೇರ್ಪಡೆಗೊಳಿಸಲು ಮತ್ತು “ಐವತ್ತು ಕೋಟಿ ರೂಪಾಯಿಗಳ” ಎಂಬ ಪದದ ಬದಲಾಗಿ “ಇಪ್ಪತ್ತು ಕೋಟಿ ರೂಪಾಯಿಗಳ” ಎಂಬ ಪದವಬನ್ನು ಪ್ರತಿಯೋಜಿಸತಕ್ಕದ್ದು,” ಹಾಗೂ ಸದರಿ ವಿದೇಯಕವನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.
(22) ಸ್ವಯಂ ಘೋಷಣೆ ಆಸ್ತಿ ತೆರಿಗೆಯನ್ನು ಘೋಷಿಸಿಕೊಂಡಿರುವ ಸ್ವತ್ತಿನ ಮಾಲಿಕರು ಮೇಲ್ಮುಖವಾಗಿ ಸ್ವಯಂ ಪರಿಷ್ಕರಣೆ ಬಯಸಿದ್ದಲ್ಲಿ ನಿಯಮಗಳಲ್ಲಿ ಅವಕಾಶವಿರದ ಕಾರಣ ಅನಗತ್ಯ ವಿಳಂಬ ತಪ್ಪಿಸಲು ಬಿಬಿಎಂಪಿ (ತಿದ್ದುಪಡಿ) ಅಧ್ಯಾಧೇಶ, 2024 ವ್ಯಪಗತವಾಗುವ ಮುನ್ನ ಅದಕ್ಕೆ ಬದಲಿಯಾಗಿ ವಿಧಾನಮಂಡಲದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಪ್ರಸ್ತಾಪಿಸಿದೆ.
ಮೇಲೆ ತಿಳಿಸಿರುವ ಕಾರಣಗಳ ಹಿನ್ನಲೆಯಲ್ಲಿ ಕರ್ನಾಟಕ ಸಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977 ರ ಮೊದಲನೇ ಅನುಸೂಚಿಯ ಕ್ರಮ ಸಂಖ್ಯೆ: 1 ರನ್ವಯ ದಿನಾಂಕ: 24.09.2024 ರ ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲ 2024 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 01 ಎಂದು ಪ್ರಕಟಿಸಲಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಅಧ್ಯಾದೇಶ 2024 ಕ್ಕೆ ಬದಲಿಯಾಗಿ ಸಿದ್ದಪಡಿಸಿ ಅನುಬಂಧ-3 ರಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಒದಗಿಸಲಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಎರಡನೇ ತಿದ್ದುಪಡಿ) ವಿದೇಯಕ 2024 ಕ್ಕೆ ಸಚಿವ ಸಂಪುಟ ಅನುಮೋದಿಸಿದೆ.
(23) ಮೈಸೂರು ಜಿಲ್ಲೆ, ಕೆ.ಆರ್ ನಗರ ತಾಲ್ಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ.
ಒಟ್ಟು ಯೋಜನಾ ವೆಚ್ಚ ರೂ.25.00 ಕೋಟಿಗಳು – ಹೆಬ್ಬಾಳು ಗ್ರಾಮದಿಂದ 5 ಕಿ.ಮೀ ಮತ್ತು ಕೆ.ಆರ್ ನಗರ ಪಟ್ಟಣದಿಂದ 10 ಕಿ.ಮೀ ಅಂತರ ದೂರದಲ್ಲಿದೆ ಮತ್ತು ಕಾವೇರಿ ಉತ್ತರಭಾಗದ ಗಂಧನ ಹಳ್ಳಿ – ಮಿರ್ಲೆ – ಬೀಚನಹಳ್ಳಿ – ಕೊಪ್ಪಲು – ಕುಪ್ಪೇಬೊರೆ ಗ್ರಾಮಗಳು ಹಾಗೂ ದಕ್ಷಿಣ ಭಾಗದ ಹೆಬ್ಬಾಳು – ಸಿದ್ದನಕೊಪ್ಪಲು – ಅಡಗನಹಳ್ಳಿ – ಕೆಸ್ತುರು ಗ್ರಾಮಗಳ ನಡುವೆ ಸಂಪರ್ಕ ಒದಗಿಸುತ್ತದೆ.
ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು 1977 ರ ಮೊದಲನೇ ಷೆಡ್ಯೂಲ್ ಐಟಂ-15 ರನ್ವಯ ಕೆಳಕಂಡ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದಿಸಿದೆ.
“ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕು ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ. 25.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೈಗೆತ್ತಿಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ”
(24) ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಾಲೆಗಳನ್ನು ಗುರುತಿಸಿ ಅವುಗಳನ್ನು ಕೆ.ಪಿ.ಎಸ್ ಶಾಲೆಗಳನ್ನಾಗಿ ಪರಿವರ್ತಿಸಲು ಪ್ರಸ್ತಾಪಿಸಲಾಗಿದೆ.
ಏಷಿಯನ್ ಅಭಿವೃದ್ಧಿ ಬ್ಯಾಂಕಿನ್ ಭಾಹ್ಯ ನಿಧಿ ಸಹಯೋಗದೊಂದಿಗೆ ರೂ.2500.00 ಕೋಟಿಗಳ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ರಾಜ್ಯದ 204 ತಾಲ್ಲೂಕುಗಳಲ್ಲಿ ಒಟ್ಟು 308 ಕೆ.ಪಿ.ಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
500 ಸರ್ಕಾರಿ ಶಾಲೆಗಳನ್ನು ವಿಶೇಷ ಸೌಕರ್ಯಗಳನ್ನು ಆಧುನಿಕರಿಸಲು ಸಮಗ್ರ ಶಾಲಾ ಸಂಕೀರ್ಣಗಳಾಗಿ ಮಾರ್ಪಡಿಸಲು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು-1977 ರ ಮೊದಲನೇ ಅನುಸೂಚಿಯ ಕ್ರಮ ಸಂಖ್ಯೆ 15 (i)ರ ಪ್ರಕಾರ ಈ ಕೆಳಗಿನ ಅಂಶಗಳಿಗೆ ಸಚಿವ ಸಂಪುಟ ಅನುಮೋದನೆ ಕೋರಿದೆ.
Asian Development Bank (ADB) ಯ ರೂ. 2500 ಕೋಟಿಗಳ (ರೂ. 2000 ಕೋಟಿಗಳು ADB ಯಿಂದ ಮತ್ತು ರೂ. 500 ಕೋಟಿಗಳು ರಾಜ್ಯ ಸರ್ಕಾರದಿಂದ) ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025 ರಿಂದ ಜೂನ್ 2029 ರವರೆಗೆ 4 ವರ್ಷಗಳ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉಪಕ್ರಮವನ್ನು ಜಾರಿಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.”
(25) ರಾಜ್ಯದ ಹಲವು ಪ್ರವಾಸಿ ಸ್ಥಳಗಳಲ್ಲಿ ರೋಪ್‌ವೇ ಗಳನ್ನು ಅಭಿವೃದ್ಧಿಪಡಿಸಲು ಆಕರ್ಷಣಿಯವಾಗಿಸಲು ಮತ್ತು ಪ್ರವಾಸಿಗರ ಭೇಟಿಯ ಸಂಖ್ಯೆಯನ್ನು ಉತ್ತೇಜಿಸಲು “ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇ ಬಿಲ್, 2024”ನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
The Karnataka Tourism Ropeways Bill 2024 2024 ಕ್ಕೆ ಮತ್ತು ಸದರಿ ವಿದೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.
(26) “ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಮೈಸೂರಿನಲ್ಲಿ Ecological Experience Zone ಅಭಿವೃದ್ಧಿಪಡಿಸಲು (ಶೇ.100 ರಷ್ಟು ಕೇಂದ್ರ ಸಹಾಯಧನ) ಯೋಜನೆಯ ಅನುಷ್ಟಾನಕ್ಕಾಗಿ ರೂ.18.47 ಕೋಟಿಗಳ ಮೊತ್ತದ ಟೆಂಡರ್ ಅನ್ನು ರಾಜ್ಯ ಅನುಷ್ಟಾನ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ ಮೂಲಕ (ಕೆ.ಟಿ.ಐ.ಎಲ್) ಕರೆಯಲು ಪ್ರಸ್ತಾಪಿಸಿದೆ.
“ಕೇಂದ್ರ ಪುರಸ್ಕೃತ ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಮೈಸೂರಿನ ಇಛಿoಟogiಛಿಚಿಟ ಇxಠಿeಡಿiಟಿಛಿe Zoಟಿe (ಶೇ 100% ರಷ್ಟು ಕೇಂದ್ರ ಸಹಾಯಧನ) ಯೋಜನೆಯ ಅನುಷ್ಠಾನಕ್ಕಾಗಿ ರೂ. 18,47,85,531-00 (ಹದೆನೆಂಟು ಕೋಟಿ ನಲವತ್ತೇಳು ಲಕ್ಷದ ಎಂಬತ್ತೈದು ಸಾವಿರದ ಐದು ನೂರ ಮೂವತ್ತೊಂದು ಮಾತ್ರ) ಗಳ ಮೊತ್ತದಲ್ಲಿ ಟೆಂಡರ್ ಪ್ರೀಮಿಯಂ ಮೊತ್ತವನ್ನು ಮೀರತಕ್ಕದಲ್ಲವೆಂದು ಷರತ್ತಿನೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮ (ಕೆ.ಟಿ.ಐ.ಎಲ್) ಸಂಸ್ಥೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ನಿರ್ಣಯಿಸಿದೆ.
(27) ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿAದ “ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಹಂಪಿಯಲ್ಲಿ Travellers Nook ಅಭಿವೃದಧಿಪಡಿಸಲು (ಶೇಕಡಾ 100% ರಷ್ಟು ಕೇಂದ್ರ ಸಹಾಯಧನ) ಯೋಜನೆಯ ಅನುಷ್ಟಾನಕ್ಕಾಗಿ ರೂ.25.63 ಕೋಟಿಗಳ ಮೊತ್ತದ ಟೆಂಡರ್ ಅನ್ನು ರಾಜ್ಯ ಅನುಷ್ಟಾನ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮದ (ಕೆ.ಟಿ.ಐ.ಎಲ್) ಮೂಲಕ ಅನುಷ್ಟಾನಗೊಳಿಸಲು ಪ್ರಸ್ತಾಪಿಸಲಾಗಿದೆ.
“ಕೇಂದ್ರ ಪುರಸ್ಕೃತ ಸ್ವದೇಶ್ ದರ್ಶನ್ 2.0” ಯೋಜನೆಯಡಿಯಲ್ಲಿ ಅನುಮೋದನೆಗೊಂಡಿರುವ ಹಂಪಿಯಲ್ಲಿ Travellers Nook (ಶೇ 100% ರಷ್ಟು ಕೇಂದ್ರ ಸಹಾಯಧನ) ಯೋಜನೆಯನ್ನು ರೂ. 25,63,54,356-00 (ಇಪ್ಪತ್ತೈದು ಕೋಟಿ ಆರವತ್ತೂö್ಮರು ಲಕ್ಷದ ಐವತ್ತಾö್ನಲ್ಕು ಸಾವಿರದ ಮೂರು ನೂರ ಐವತ್ತಾರು ಮಾತ್ರ) ಗಳ ಮೊತ್ತದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಕರ್ಯ ನಿಗಮ (ಕೆ.ಟಿ.ಐ.ಎಲ್) ಸಂಸ್ಥೆಯ ಮೂಲಕ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ನಿರ್ಣಯಿಸಿದೆ.
(28) ಸರ್ಕಾರದ ಆದೇಶ ಸಂಖ್ಯೆ: ಟಿಒಆರ್ 157 ಟಿಡಿಬಿ 2024, ದಿನಾಂಕ: 02.10.2024 ರನ್ವಯ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು ಇವರು 2024ರ ದಸರಾ ವಸ್ತು ಪ್ರದರ್ಶನ ಆಯೋಜಿಸುವ ಸಂಬAಧ ಟೆಂಡರ್‌ನಲ್ಲಿ ಆಯ್ಕೆಯಾಗಿರುವ ಬಿಡ್ಡುದಾರರಿಗೆ (ರೂ.10.03 ಕೋಟಿಗಳು) ಟೆಂಡರ್ ವಹಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲು ಪ್ರಸ್ತಾಪಿಸಲಾಗಿತ್ತು.
“ಸರ್ಕಾರದ ಅದೇಶ ಸಂಖ್ಯೆ: ಟಿಒಆರ್ 157 ಟಿಡಿಬಿ 2024 ದಿನಾಂಕ: 02.10.2024 ರನ್ವಯ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು ಇವರು 2024 ರ ದಸರಾ ವಸ್ತು ಪ್ರದರ್ಶನ ಆಯೋಜಿಸುವ ಸಂಬAಧ ಟೆಂರ‍್ನಲ್ಲಿ ಆಯ್ಕೆಯಾಗಿರುವ ಬಿಡ್ಡುದಾರರಿಗೆ ಟೆಂಡರ್ ವಹಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ನಿರ್ಣಯಿಸಿದೆ.
(29) ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡವು 100 ವರ್ಷ ಹಳೆಯದಾಗಿದ್ದು, ದುಸ್ಥಿತಿಯಲ್ಲಿದ್ದು, ಕಟ್ಟಡಕ್ಕೆ ನವೀಕರಣ ಮತ್ತು ದುರಸ್ಥಿ ಅಗತ್ಯವಿರುವುದರಿಂದ ಲಲಿತ್ ಮಹಲ್ ಪಾರಂಪರಿತ ಕಟ್ಟಡವನ್ನು ಸಂರಕ್ಷಿಸಿ, ಹೆರಿಟೇಜ್ ಮಾದರಿಯಲ್ಲಿ ಉಳಿಸಿಕೊಳ್ಳಲು ಐಷಾರಾಮಿ ಹೋಟೆಲ್‌ನ ಮಾನದಂಡಗಳ ಪ್ರಕಾರ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಹೋಟೆಲ್ ಆಪರೇಟರ್‌ನ್ನು ಆಯ್ಕೆ ಮಾಡಲು ಪ್ರಸ್ತಾಪಿಸಿದೆ.
ಪರವಾನಿಗೆ ಆಧಾರದ ಮೇಲೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಲಿಮಿಟೆಡ್, ಇವರನ್ನು ಅನುಮೋದಿತ ಷರತ್ತು ಮತ್ತು ನಿಬಂಧನೆಗಳನ್ವಯ ಅರ್ಹ ಮತ್ತು ಪ್ರತಿಷ್ಟಿಯ ಹೋಟೆಲ್ ನಿರ್ವಾಹಕರ ಆಯ್ಕೆಗಾಗಿ ಟೆಂಡರ್ ಕರೆಯಲು ಅಧಿಕೃತಗಳೊಸುವುದು ಹಾಗೂ ಪರವಾನಿಗೆ ಆಯ್ಕೆಯನ್ನು ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕತೆ ಕಾಯಿದೆ 1999 ಮತ್ತು ನಿಯಮಗಳನ್ವಯ ಕೈಗೊಳ್ಳುವುದು.
ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಆಯ್ಕೆಯಾದ ಯಶಸ್ವಿ ಅಪರೇಟರ್‌ನೊಂದಿಗೆ ಪರವಾನಿಗೆ ಒಪ್ಪಂದಕ್ಕೆ ಪ್ರವೇಶಿಸಲು ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯನ್ನು ಅಧಿಕೃತಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಕೆಪಿಎಸ್‌ಸಿ ವರದಿ ಅನುಮೋದನೆ
ಭಾರತ ಸಂವಿಧಾನದ ಅನುಚ್ಛೇದ 323(2)ರಂತೆ ರಾಜ್ಯ ಲೋಕಸೇವಾ ಆಯೋಗವು (KPSC) ತನ್ನ ಕಾರ್ಯನಿರ್ವಹಣೆಗೆ ಸಂಬAಧಿಸಿದAತೆ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವರದಿಯನ್ನು ವಿಧಾನಮಂಡಲದ ಮುಂದೆ ಮಂಡಿಸಲು ಸಚಿವ ಸಂಪುಟದ ಅನುಮೋದಿಸಿದೆ.
(3) 2025ನೇ ಸಾಲಿನ ಸಾರ್ವತ್ರಿಕ ರಜೆ
2025ನೇ ಸಾಲಿನ 19 ಸಾರ್ವತ್ರಿಕ ರಜಾ ದಿನಗಳನ್ನು ಮತ್ತು 20 ಪರಿಮಿತ ರಜಾ ದಿನಗಳ ಪಟ್ಟಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿತ್ತು.
2025ನೇ ಸಾಲಿನ ಭಾನುವಾರ ಹಾಗೂ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳಲ್ಲದೇ, ಇರುವ ಸಾರ್ವತ್ರಿಕ ರಜೆಗಳ ಪಟ್ಟಿ ಮತ್ತು ಪರಿಮಿತಿ ರಜೆಗಳ ಪಟ್ಟಿಯ ಕರಡು ಅಧಿಸೂಚನೆ-1 ಹಾಗೂ ಅದರ ಅನುಬಂಧ ಮತ್ತು ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಆಕ್ಟ್, 1881ರ ಅನುಸಾರ ಇರುವ ಸಾರ್ವತ್ರಿಕ ರಜೆ ಪಟ್ಟಿಯ ಕರಡು ಅಧಿಸೂಚನೆ-2ಗಳನ್ನು ಲಗತ್ತಿಸಿದೆ. (ರಜಾ ದಿನಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ ಕಳುಹಿಸಲಾಗಿದೆ)
ಈ ಹಿನ್ನೆಲೆಯಲ್ಲಿ ಅದಿಸೂಚನೆ-1 ಹಾಗೂ ಅದರ ಅನುಬಂಧ ಮತ್ತು ಅಧಿಸೂಚನೆ-2 ಗಳನ್ನು ಹೊರಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
(4) ವಿಧಾನ ಪರಿಷತ್ತಿಗೆ ನಾಮನಿರ್ದೇಶನ
ಭಾರತ ಸಂವಿಧಾನದ ಅನುಚ್ಛೇದ 171(3)(ಇ) ಅನುಸಾರ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಇಬ್ಬರು ಸದಸ್ಯರನ್ನು ಮಾನ್ಯ ರಾಜ್ಯಪಾಲರಿಂದ ನಾಮನಿರ್ದೇಶನ ಮಾಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಅಧಿಕಾರ ಸಚಿವ ಸಂಪುಟ ಅಧಿಕಾರ ನೀಡಿದೆ.
(5) ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಗೆ ಅನುಮೋದನೆ
2024-25 ಮತ್ತು 2025-26ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 80:110 (Cup and Cap) ಮಾದರಿ ಅಳವಡಿಸಿ ಅನುಷ್ಠಾನಗೊಳಿಸಲು ಹಾಗೂ ಕ್ಲಸ್ಟರ್‌ವಾರು ಅತಿ ಕಡಿಮೆ Weighted premium rates ಅನ್ನು ನಮೂದಿಸಿರುವ ಬೆಳೆವಿಮಾ ಸಂಸ್ಥೆಗಳ ಪ್ರೀಮಿಯಂ ದರಗಳನ್ನು ಒಪ್ಪಿಕೊಂಡು, ಕ್ಲಸ್ಟರ್‌ಗಳನ್ನು ಹಂಚಿಕೆ ಮಾಡಿ ಕೃಷಿ ಆಯುಕ್ತರಿಂದ ಹೊರಡಿಸಲಾಗಿರುವ ಕಾರ್ಯಾದೇಶಗಳ ಕ್ರಮಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ನೀಡಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಮಗ್ರ ವಿಮಾ ಭದ್ರತೆ ಒದಗಿಸಲು ಪ್ರಕೃತಿ ವಿಕೋಪ ಅಂದರೆ ಆಲೀಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ನಷ್ಟ ಸಂಭವಿಸಿದ್ದಲ್ಲಿ ಕ್ಷೇತ್ರಾಧಾರಿತವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.
ಇಳುವರಿಯ ಕೊರತೆಗೆ ಅನುಗುಣವಾಗಿ ಹೋಬಳಿ / ಗ್ರಾಮ ಪಂಚಾಯತಿ ವಿಮಾ ಘಟಕಗಳಲ್ಲಿ ಬೆಳೆ ವಿಮೆ ಮಾಡಿದ ಎಲ್ಲಾ ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.
ವಿಮಾ ಸಂಸ್ಥೆಗಳು, ವೈಟೆಡ್ ಪ್ರೀಮಿಯಂ ದರ ನಮೂದಿಸಿರುವ 10 ಕ್ಲಸ್ಟರ್‌ಗಳು ಮತ್ತು ಕಂಪನಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದ ಪಾಲಿನ ಅನುದಾನವನ್ನು ಭರಿಸಲು ಕೃಷಿ ಆಯುಕ್ತರು ಹೊರಡಿಸಿರುವ ಕಾರ್ಯಾದೇಶಗಳನ್ನು ಘಟನೋತ್ತರ ಮಂಜೂರಾತಿ ಮಾಡಲು ಕೋರಲಾಗಿತ್ತು ಎಂದು ಮಾನ್ಯ ಸಚಿವರು ತಿಳಿಸಿದರು.
(6) “ಸಾವಯವ ಮತ್ತು ಸಿರಿಧಾನ್ಯ ಹಬ್” ನಿರ್ಮಾಣ
ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರಿಗೆ, ಮಾರುಕಟ್ಟೆದಾರರಿಗೆ ಹಾಗೂ ಗ್ರಾಕರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು “ಸಾವಯವ ಮತ್ತು ಸಿರಿಧಾನ್ಯ ಹಬ್” ಅನ್ನು ಹೆಬ್ಬಾಳ, ಬೆಂಗಳೂರು ಇಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (RKVY) ಒದಗಿಸಿರುವ ರೂ.200.00 ಕೋಟಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ PRAMC ಮೂಲಕ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಸಾವಯವ ಮತ್ತು ಸಿರಿಧಾನ್ಯಗಳ ಪೌಷ್ಠಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿದ್ದು, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿರುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಾಗೂ ಚಿಲ್ಲರೆ ಮಾರಾಟಗಾರರು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣದಿಂದ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಹೆಬ್ಬಾಳದಲ್ಲಿ “ಸಾವಯವ ಮತ್ತು ಸಿರಿಧಾನ್ಯ ಹಬ್”ನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿರುತ್ತದೆ. ರೂ.20.00 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಉತ್ತಮ ಮಾನ್ಯತೆ ಮಾರುಕಟ್ಟೆ ಸಂಪರ್ಕ ವಿಸ್ತರಣೆ ಹಾಗೂ ಆರೋಗ್ಯವನ್ನು ಉತ್ತೇಜಿಸುವ ಮೂಲಕ ಸಾವಯವ ಮತ್ತು ಸಿರಿಧಾನ್ಯಗಳ ಸ್ಥಾನದಲ್ಲಿ ಉನ್ನತ ಬದಲಾವಣೆ ತರುವ ನಿರೀಕ್ಷೆಯಿದೆ ಎಂದು ಸಚಿವರು ವಿವರಿಸಿದರು.
(7) ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ
2024-25ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ PM-ABHIM ಯೋಜನೆಯಡಿ ಅನುಮೋದನೆಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಉಡುಪಿ, ದಾವಣಗೆರೆ ಮತ್ತು ವಿಜಯಪುರ ತೀವ್ರ ನಿಗಾ ಆರೈಕೆ ಘಟಕಗಳಿಗೆ ಅಗತ್ಯವಿರುವ ಉಪಕರಣಗಳ ಖರೀದಿಸಲು ಒಟ್ಟು ಅಂದಾಜು ಮೊತ್ತ ರೂ.39.37 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಜಯಪುರ, ಉಡುಪಿ, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಅನುಮೋದಿಸಿಲ್ಲ. ವಿಜಯಪುರ, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆ ಆವರಣಗಳಲ್ಲಿ 03 ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಒಟ್ಟು ರೂ.39.37 ಕೋಟಿಗಳ ವೆಚ್ಚದಲ್ಲಿ ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ವಿಜಯಪುರ ತೀವ್ರ ನಿಗಾ ಆರೈಕೆ ಘಟಕಕ್ಕೆ ಅಗತ್ಯವಿರುವ ಉಪಕರಣ ಖರೀದಿಸಲಾಗುವುದು.
ವರದಿ: ವಸಂತ ಬಿ ಈಶ್ವರಗೆರೆ