ಶಿವಮೊಗ್ಗ: ಜಿಲ್ಲೆಯ ಸಾಗರದ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವಂತ ಬಸವನಹೊಳೆ ಹೊಸ ಸೇತುವೆಯು ಕಾಮಗಾರಿ ನಡೆಸುತ್ತಿದ್ದಂತ ಸಂದರ್ಭದಲ್ಲಿಯೇ ಸಾರ್ವೆ ಕುಸಿತಗೊಂಡಿದೆ. ಸೇತುವೆಯ ಸಾರ್ವೆ ಸ್ವಲ್ಪ ವಾಲಿ ಕುಸಿತಗೊಂಡ ಪರಿಣಾಮ, ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಶಿವಮೊಗ್ಗ ರಸ್ತೆಯಲ್ಲಿ ಹೊಸದಾಗಿ ಬಸವನ ಹೊಳೆಗೆ ಸೇತುವೆಯನ್ನು ನಿರ್ಮಿಸುವಂತ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ಈ ಕಾಮಗಾರಿಯು ಕೆಲ ದಿನಗಳಿಂದ ನಡೆಯುತ್ತಿದೆ.
ಇಂದು ಸ್ಲ್ಯಾಬ್ ಹಾಕುವಂತ ಸಂದರ್ಭದಲ್ಲಿ ಸೇತುವೆಯ ಸಾರ್ವೆ ಕುಸಿತಗೊಂಡ ಪರಿಣಾಮ, ಕಬ್ಬಿಣದ ಸರಳುಗಳೆಲ್ಲ ಬಗ್ಗಿ ಹೋಗಿದ್ದಾವೆ. ಒಂದು ವೇಳೆ ಸೇತುವೆ ಕೆಳಗಿನ ಸಾರ್ವೆ ಸಂಪೂರ್ಣ ಕುಸಿತಗೊಂಡಿದ್ದರೇ ಕಾಮಗಾರಿ ನಡೆಸುತ್ತಿದ್ದಂತ ಕಾರ್ಮಿಕರ ಜೀವ ಹಾನಿಯೇ ಸಂಭವಿಸುತ್ತಿತ್ತು ಎಂಬುದಾಗಿ ಪ್ರತ್ಯಕ್ಷ ದರ್ಶಿಗಳ ಮಾತು.
ಇನ್ನೂ ಸ್ಲ್ಯಾಬ್ ಸಪೋರ್ಟಿಂಗ್ ಹಾಕೋದಲ್ಲಿ ನಿಲ್ಲಿಸಿದ್ದಂತ ಸಾರ್ವೆ ಕುಸಿತಗೊಂಡರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಬೇಕು. ಆದರೇ ಇಂಜಿನಿಯರ್ ಬಾಗಿದ, ಬೆಂಡಾಗಿರುವಂತ ಕಂಬಿಗಳ ನಡುವೆಯೂ ಸೇತುವೆ ಕಾಮಗಾರಿ ಮುಂದುವರೆಸಿದ್ದಾರೆ. ಇದರಿಂದ ಮುಂದೊಂದು ದಿನ ಬಹುದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಲಿದೆ ಎಂಬುದಾಗಿ ಸ್ಥಳೀಯರ ಅಭಿಪ್ರಾಯ.
ಸದ್ಯ ಕುಸಿತಗೊಂಡಿರುವಂತ ಕಬ್ಬಿಣದ ಸರಳುಗಳನ್ನು ಸರಿಪಡಿಸುವ ಕಾರ್ಯ ಮುಂದುವರೆದಿದೆ. ಆದರೇ ಸೇತುವೆ ನಿರ್ಮಾಣ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಆ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆ ನಿಟ್ಟಿನಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವಂತ ಇಂಜಿನಿಯರ್, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ‘30,000 ಬೆಲೆ’ಯ ಈ ಚುಚ್ಚುಮದ್ದು ಉಚಿತವಾಗಿ ನೀಡಿಕೆ
‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ’ ಆರೋಪಕ್ಕೆ ಈ ತಿರುಗೇಟು ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’