Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಕೊಲೆ ಆರೋಪಿಗೆ ಮೃತರ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ’ ಆರೋಪಕ್ಕೆ ಈ ತಿರುಗೇಟು ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’
KARNATAKA

‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ’ ಆರೋಪಕ್ಕೆ ಈ ತಿರುಗೇಟು ಕೊಟ್ಟ ‘ಸಚಿವ ದಿನೇಶ್ ಗುಂಡೂರಾವ್’

By ವಸಂತ್‌ ಬಿ ಈಶ್ವರಗೆರೆ

ಬೆಂಗಳೂರು: ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನಡೆದಿದೆ ಎಂದು ನೀವು ಕೊಟ್ಟಿರುವ ಸಾವಿನ ಲೆಕ್ಕಾಚಾರವೇ ಕಪೋಲ‌ ಕಲ್ಪಿತ ಮತ್ತು ಉತ್ಪ್ರೇಕ್ಷೆ ಎಂಬುದಾಗಿ ಬಿಜೆಪಿಗರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಾವಿನಲ್ಲಿ ರಾಜಕಾರಣ ನಡೆಸುವುದು ಹಾಗೂ ರಾಜಕೀಯ ಹುಡುಕುವುದೇ ಹೇಯ. ಇದು ನಾಗರಿಕ ಸಮಾಜ ಒಪ್ಪುವ ಸಂಗತಿಯಲ್ಲವೇ ಅಲ್ಲ ಎಂಬುದನ್ನು BJP ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಮೊದಲು ತಿಳಿಸಬಯಸುತ್ತೇನೆ. ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಇಲ್ಲಿ ಸವಾಲು ಹಾಗೂ ಸಂವೇದನೆಗೆ ನಮ್ಮನ್ನು ನಿತ್ಯ ಒಡ್ಡಿಕೊಳ್ಳಬೇಕಾಗುತ್ತದೆ. ಈ ದಿಶೆಯಲ್ಲಿ ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರತಿದಿನವೂ ಹೆಜ್ಜೆ ಇಡುತ್ತಿದ್ದೇನೆ ಎಂದಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನಡೆದಿದೆ ಎಂದು ನೀವು ಕೊಟ್ಟಿರುವ ಸಾವಿನ ಲೆಕ್ಕಾಚಾರವೇ ಕಪೋಲ‌ ಕಲ್ಪಿತ ಮತ್ತು ಉತ್ಪ್ರೇಕ್ಷೆ. 2019ರಿಂದ ಇಲ್ಲಿಯವರೆಗಿನ ಅಧಿಕೃತ ಅಂಕಿ ಸಂಖ್ಯೆಗಳನ್ನು ಅವಲೋಕಿಸಿದಾಗ ಈ ವರ್ಷ ಅತಿ ಕಡಿಮೆ ಬಾಣಂತಿ ಹಾಗೂ ನವಜಾತ ಶಿಶು ಸಾವು ಸಂಭವಿಸಿದೆ. ನನಗೆ ಗೊತ್ತು ಒಂದು ಸಾವು ಸಂಭವಿಸಿದರೂ ಅದು ಸಾವೇ. ಆ ಬಗ್ಗೆ ಯಾರೂ ಸ್ಪಷ್ಟನೆ ಮತ್ತು ಸಮಜಾಯಿಸಿ ಕೊಡುವ ಪ್ರಶ್ನೆ ಉದ್ಭವಿಸದು ಎಂದು ಹೇಳಿದ್ದಾರೆ.

ಅಷ್ಟಕ್ಕೂ ಕೋವಿಡ್ ಸಂದರ್ಭದಲ್ಲಿ ಆದಂತೆ ರಾಜ್ಯದಲ್ಲಿ ನಡೆದ ಸಾವಿನ ಪ್ರಮಾಣವನ್ನು ಮುಚ್ಚಿಟ್ಟಿದ್ದರೆ ಮಾತ್ರ ಅದನ್ನು ವೈಫಲ್ಯ , ಅಸಾಮರ್ಥ್ಯ ಅಥವಾ ಹಗರಣಗಳ ಸಾಲಿಗೆ ಸೇರಿಸಬಹುದಲ್ಲವೇ ವಿಜಯೇಂದ್ರ ಎಂದು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ನೀವು ಉಲ್ಲೇಖಿಸಿದ ಇತ್ತೀಚಿನ ಬಳ್ಳಾರಿಯ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನಾನೇ ಸ್ವಯಂ ಪ್ರೇರಣೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲು ಸೂಚಿಸಿದ್ದೆ. ನವೆಂವರ್ 14 ರಂದು ಘಟನಾ ನಡೆದ ಆಸ್ಪತ್ರೆಗೆ ಭೇಟಿ ನೀಡಿದ ಈ ತಂಡ ನ.9 ರಿಂದ ನ.11ರ ಅವಧಿಯಲ್ಲಿ ನಡೆದ 34 ಸಿಜರೀಯನ್ ಪ್ರಕರಣ ಅವಲೋಕಿಸಿದೆ. ಇದರಲ್ಲಿ ಏಳು ಪ್ರಕರಣ ಮಾತ್ರ ವೈದಕೀಯ ಸಂಕೀರ್ಣತೆಗೆ ಒಳಗಾಗಿದ್ದು ನಾಲ್ಕು ಬಾಣಂತಿ ಸಾವಿಗೆ ಕಾರಣವಾಗಿದ್ದನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದ್ದಾರೆ.

ಆದರೆ ತನಿಖಾ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಎಲ್ಲಿಯೂ ಕಂಡು ಬಂದಿಲ್ಲ. ಆದರೆ ಬಳಕೆಯಾದ ಕೆಲ ಉತ್ಪನ್ನಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆ ಬಗ್ಗೆ ವೈಜ್ಞಾನಿಕ ವರದಿ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.

ಇನ್ನು ನಾನು ಆರೋಗ್ಯ ಸಚಿವನಾದ ಬಳಿಕ ತಂದ ಸುಧಾರಣೆ ಹಾಗೂ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ವಿವರಣೆ ನೀಡಿದರೆ ಅದು ನಿಮ್ಮಲ್ಲಿ ಇನ್ನಷ್ಟು ಅಸಹನೆ ಸೃಷ್ಟಿಸಬಹುದು. ಸದ್ಯಕ್ಕೆ ಇಷ್ಟು ಸಾಕು. ನಿಮ್ಮ ಅಧಿಕಾರಾವಧಿಯಲ್ಲಿ ಆರೋಗ್ಯ ಇಲಾಖೆ ಎಂಥ ಸಮರ್ಥರ ಕೈಯಲ್ಲಿತ್ತು. ಆಗ ಮಾಡಿದ ಅನಾಹುತಗಳೇನು ಎಂಬುದು ನನಗಿಂತಲೂ ನೀವೆ ಚೆನ್ನಾಗಿ ಅರಿತಿದ್ದು ವಿಷಯ ತಜ್ಞರ ಸಾಲಿನಲ್ಲಿ ಇದ್ದೀರೆಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಸಾವಿನಲ್ಲಿ ರಾಜಕಾರಣ ನಡೆಸುವುದು ಹಾಗೂ ರಾಜಕೀಯ ಹುಡುಕುವುದೇ ಹೇಯ. ಇದು ನಾಗರಿಕ ಸಮಾಜ ಒಪ್ಪುವ ಸಂಗತಿಯಲ್ಲವೇ ಅಲ್ಲ ಎಂಬುದನ್ನು @BJP4Karnataka ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಮೊದಲು ತಿಳಿಸಬಯಸುತ್ತೇನೆ.

ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಇಲ್ಲಿ ಸವಾಲು ಹಾಗೂ ಸಂವೇದನೆಗೆ… https://t.co/HkyAMjwoAm

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 28, 2024

BREAKING NEWS: ಜಾರ್ಖಂಡ್ ಮುಖ್ಯಮಂತ್ರಿಯಾಗಿ ‘ಹೇಮಂತ್ ಸೊರೆನ್’ ಪ್ರಮಾಣ ವಚನ ಸ್ವೀಕಾರ | Hemant Soren takes oath

BREAKING NEWS: ನಾಳೆಗೆ ‘ನಟ ದರ್ಶನ್’ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ | Actor Darshan

Share. Facebook Twitter LinkedIn WhatsApp Email

Related Posts

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

2 Mins Read

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

2 Mins Read

ಡಿ ಸುಧಾಕರ್ ಅವರ ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

2 Mins Read
Recent News

BIG NEWS: ಕೊಲೆ ಆರೋಪಿಗೆ ಮೃತರ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

ಅಂದು ನಿರ್ಲಕ್ಷ್ಯಕ್ಕೊಳಗಾಗಿದ್ದರು, ಇಂದು ತಮಿಳುನಾಡು ವಿಧಾನಸಭೆಯ ಹಂಗಾಮಿ ಸ್ಪೀಕರ್! ಯಾರು ಈ ಕರುಪ್ಪಯ್ಯ?

State News
KARNATAKA

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡು ಭಾಗದ ಜನರಿಗೆ ಪದವಿ ಶಿಕ್ಷಣವು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಸಿಗಬೇಕು ಎಂಬ ಉದಾತ್ತ ಉದ್ದೇಶದಿಂದ ಸ್ಥಾಪನೆಯಾದ…

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

ಡಿ ಸುಧಾಕರ್ ಅವರ ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

SHOCKING: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಚಾಮರಾಜನಗರದಲ್ಲಿ ಪೋಷಕರ ಕಣ್ಣೆದುರೇ ಬಾಲಕಿ ಎಳೆದೊಯ್ದು ಕೊಂದ ಚಿರತೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.