ನವದೆಹಲಿ: ಸೈಬರ್ ವಂಚನೆ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿರುವಾಗ ಜಾರಿ ನಿರ್ದೇಶನಾಲಯದ ತಂಡದ ಮೇಲೆ ಗುರುವಾರ ದೆಹಲಿಯಲ್ಲಿ ದಾಳಿ ನಡೆಸಲಾಗಿದೆ. ವಿವರಗಳ ಪ್ರಕಾರ, ಪೀಠೋಪಕರಣಗಳನ್ನ ಕೆಲವು ಅಧಿಕಾರಿಗಳ ಮೇಲೆ ಎಸೆಯಲಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯ ಬಿಜ್ವಾಸನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಗಾಯಗೊಂಡವರನ್ನು ತನಿಖಾ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಎಂದು ಗುರುತಿಸಲಾಗಿದೆ. ಇನ್ನು ಸ್ಥಳದಿಂದ ಬಂದ ದೃಶ್ಯದಲ್ಲಿ ಮುರಿದ ಕುರ್ಚಿಯನ್ನ ಕಾಣಬಹುದು.
BREAKING : ಲಷ್ಕರ್-ಎ-ತೊಯ್ಬಾ ಉಗ್ರ ‘ಸಲ್ಮಾನ್ ಖಾನ್’ ರುವಾಂಡಾದಿಂದ ಭಾರತಕ್ಕೆ ಹಸ್ತಾಂತರ