ಶಿವಮೊಗ್ಗ: ಜೋಗದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ತ್ವರಿತವಾಗಿ ನಡೆಸೋದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸಿಗರು ಜೋಗಕ್ಕೆ ಬಂದ್ರೆ ಇಲ್ಲಿಂದ ಬಿಟ್ಟು ಹೋಗಲೇ ಬಾರದು ಆ ರೀತಿ ಅಭಿವೃದ್ಧಿಗೊಳಿಸುವುದು. ಬಿಜೆಪಿ ಹೇಳುತ್ತಿರುವುದು ಸುಳ್ಳು. ಬಿಜೆಪಿ ಅವಧಿಯಲ್ಲಿ 20 ಕೋಟಿ ಮಾತ್ರವೇ ಜೋಗ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 75 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಇಂದು ಜೋಗ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಜೋಗದಲ್ಲಿನ ಕಚೇರಿಯಲ್ಲಿ ನಡೆಸಿದಂತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಜೋಗದಲ್ಲಿ ನಡೆಯುತ್ತಿರುವಂತ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ ಜೋಗದಲ್ಲಿ ನಡೆಯುತ್ತಿರುವಂತ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜೋಗಕ್ಕೆ ಪ್ರವಾಸಿಗರು ಬಂದ್ರೆ ಬಿಟ್ಟೋಗ ಬಾರದು ಹಾಗೆ ಅಭಿವೃದ್ಧಿ
ಜೋಗ ಅಭಿವೃದ್ಧಿಗೆ 185 ಕೋಟಿ ಅನುದಾನ ನೀಡಲಾಗಿದೆ. ಜೋಗದ ಎಲ್ಲಾ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಜನರಿಗೆ ಆಕರ್ಷಣೆ ಇರಬೇಕು. ಜನರು ನಿರಂತರವಾಗಿ ಈ ಜೋಗದ ಜಲಪಾತಕ್ಕೆ ಭೇಟಿ ನೀಡಬೇಕು. ಇಲ್ಲಿನ ಸೌಂದರ್ವಯನ್ನು ಸವಿಯುವಂತಾಗಬೇಕು. ಈಗಾಗಲೇ ಹೋಟೆಲ್, ರೂಮ್ಸ್, ಪಾರ್ಕ್, ಮ್ಯೂಸಿಕಲ್ ಪೌಂಟೇನ್, ಸಾರ್ವಜನಿಕರಿಗೆ ಏನೇನೋ ಬೇಕೋ ಅದೆಲ್ಲವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಅಲ್ಲದೇ ಗ್ಲಾಸ್ ಹೌಸ್ ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಜೋಗ ಸಮೀಪದ ಸಿರೂರು ಕೆರೆಯ ಬಳಿಯಲ್ಲಿ 20 ಎಕರೆ ಜಾಗವಿದೆ. ಅಲ್ಲಿಯೂ ಪ್ರವಾಸಿಗರನ್ನು ಸೆಳೋದಕ್ಕೆ ಏನೇನು ಬೇಕೋ ಅದೆಲ್ಲವನ್ನು ನಿರ್ಮಾಣ ಮಾಡೋ ಸಂಬಂಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ ಮಾತನಾಡಲಾಗಿದೆ. ಈಗಾಗಲೇ 95 ಕೋಟಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಏನೇನು ಮಾಡಬೇಕೋ ಅದರ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಜೋಗದ ಜಲಪಾತ ಎಂಟ್ರಿ ಕೊಟ್ಟ ತಕ್ಷಣ ಪ್ರವಾಸಿಗರನ್ನು ಸೆಳೆಯುವಂತೆ ಇರಬೇಕು. ಅದಕ್ಕಾಗಿ ದ್ವಿಪಥ ರಸ್ತೆಯನ್ನು ನಿರ್ಮಾಣ ಮಾಡುವ ತೀರ್ಮಾವನ್ನು ಕೈಗೊಳ್ಳಲಾಗಿದೆ. ಜಿಪ್ ಲೈನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಕೆಲವೊಂದು ಕಾಮಗಾರಿಯನ್ನು ಈ ಭಾಗದ ಜನರಿಗೆ ತೊಂದರೆ ಆಗದಂತೆ ಮಾಡೋದಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ. ಬೋಡಿಂಗ್ ಮತ್ತಷ್ಟು ಪ್ರವಾಸಿ ಸ್ನೇಹಿಯಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಕ್ಕೆ ಒತ್ತು
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ. ನೂರಾರು ಜನರಿಗೆ ಜೋಗ ಅಭಿವೃದ್ಧಿ ಕಾಮಗಾರಿ ಮುಕ್ತಾಯದ ನಂತ್ರ ಉದ್ಯೋಗಾವಕಾಶ ಸಿಗಲಿದೆ. ನಮ್ಮ ಮೊದಲ ಪ್ರಾಮುಖ್ಯತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದಾಗಿದೆ ಎಂದರು.
ಬಿಜೆಪಿ ಅವಧಿಯಲ್ಲಿ 20 ಕೋಟಿ ಮಾತ್ರ ಅನುದಾನ ಬಿಡುಗಡೆ
ಬಿಜೆಪಿ ಅವಧಿಯಲ್ಲಿ ಜೋಗ ಅಭಿವೃದ್ಧಿ ಘೋಷಣೆಯಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು ಅಂತ ಹೇಳುತ್ತಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆ, ಸ್ಥಳದಲ್ಲೇ ಇದ್ದಂತ ಗುತ್ತಿಗೆದಾರರನ್ನು ಕರೆದಂತ ಶಾಸಕ ಬೇಳೂರು ಗೋಪಾಲಕೃಷ್ಣ, ಹೇಳಿ ಬಿಜೆಪಿ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟು ಬಿಡುಗಡೆ ಮಾಡಲಾಗಿದೆ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದಂತ ಜೋಗ ಕಾಮಗಾರಿ ಗುತ್ತಿಗೆದಾರರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 20 ಕೋಟಿ ಅನುದಾನ ಮಾತ್ರವೇ ಬಿಡುಗಡೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಜೋಗ ಅಭಿವೃದ್ಧಿ ಕಾಮಗಾರಿಗಾಗಿ 75 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ವಾಸ್ತವಾಂಶವನ್ನು ತೆರೆದಿಟ್ಟರು.
ಶಾಲಾ ವಿದ್ಯಾರ್ಥಿಗಳಿಗೆ ರೂ.5 ಟಿಕೆಟ್
ಶಾಲಾ ವಿದ್ಯಾರ್ಥಿಗಳು ಜೋಗದ ಜಲಪಾತವನ್ನು ವೀಕ್ಷಣೆಗೆ ಬಂದ್ರೆ ರಿಯಾಯಿತಿ ದರದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಶಾಲಾ ದಾಖಲೆ ತೋರಿಸಲಿ ಅಥವಾ ತೋರಿಸದೇ ಇರಲೀ, ಶಾಲಾ ವಿದ್ಯಾರ್ಥಿಗಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಓರ್ವ ವಿದ್ಯಾರ್ಥಿಗಳಿಗೆ ರೂ.5 ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ರಾಜಕುಮಾರ್, ಜೋಗ ಕಾರ್ಗಲ್ ಪಟ್ಟಣಪಂಚಾಯ್ತಿ ಅಧ್ಯಕ್ಷ ರಾಜು, ಉಪಾಧ್ಯಕ್ಷರು, ಪಟ್ಟಣ ಪಂಚಾಯ್ತಿ ಸದಸ್ಯರು, ರಮೇಶ್ ಹಿರಿಗೆಗದ್ದೆ, ಕಾರ್ಗಲ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೊಳೆಬಸಪ್ಪ ಹೋಳಿ, ಪೊಲೀಸ್ ಸಿಬ್ಬಂದಿಗಳಾದಂತ ಸುಕೂರ್, ಮಲ್ಲಪ್ಪ, ಅಣ್ಣಪ್ಪ, ಜೋಗ ಅಭಿವೃದ್ಧಿ ಪ್ರಾಧಿಕಾರದ ಸೆಕ್ಯೂರಿಟಿ ಭಾಸ್ಕರ್, ಮ್ಯಾನೇಜರ್ ಧರ್ಮಪ್ಪ, ಎಸ್ ಎನ್ ಸಿ ಸೈಟ್ ಮ್ಯಾನೇಜರ್ ಸಂದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು