ಶಿವಮೊಗ್ಗ: ಸಾಗರ ತಾಲ್ಲೂಕಿನ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದಾವೆ. ಈ ಕಾರಣದಿಂದ ಹಾಲಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಿದೆ. ಜೊತೆಗೆ ಆರೋಗ್ಯ ಇಲಾಖೆಯ ಕಾರ್ಯವೈಖರಿಯು ಕುಂಠಿತಗೊಳಿಸುವಂತೆ ಮಾಡುತ್ತಿದೆ. ಹೀಗಾಗಿ ಸಾಗರ ತಾಲ್ಲೂಕಿನ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲು ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಮನವಿ ಮಾಡಿದರು.
ಮಂಗಳವಾರದಂದು ಮಂಗನಕಾಯಿಲೆ ನಿಯಂತ್ರಣದ ಸಂಬಂಧ ಸಾಗರ ತಾಲ್ಲೂಕಿಗೆ ಭೇಟಿ ನೀಡಿದ್ದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿದರು.
ಸಾಗರ ತಾಲ್ಲೂಕಿನಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದಾವೆ. 1 ಸಮುದಾಯ ಆರೋಗ್ಯ ಕೇಂದ್ರವಿದೆ. 1 ನಗರ ಸಮುದಾಯ ಆರೋಗ್ಯ ಕೇಂದ್ರ, 1 ಉಪ ವಿಭಾಗಿಯ ಆಸ್ಪತ್ರೆಯಿದೆ. ಇಲ್ಲಿ ಹಲವು ಹುದ್ದೆಗಳು ಖಾಲಿ ಇದ್ದಾವೆ ಎಂಬುದಾಗಿ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಾಗರ ತಾಲ್ಲೂಕಿನಲ್ಲಿ 16 ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿವೆ. ಇವುಗಳಲ್ಲಿ 7 ಮಾತ್ರವೇ ಭರ್ತಿಯಾಗಿದ್ದು, 8 ಖಾಲಿ ಇದೆ. ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಯ 11 ಹುದ್ದೆ ಮಂಜೂರಾಗಿತ್ತು, 3 ಮಾತ್ರವೇ ಭರ್ತಿಯಾಗಿದೆ. 8 ಖಾಲಿ ಇದ್ದಾವೆ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ 9 ಹುದ್ದೆಗಳಲ್ಲಿ ಒಂದು ಮಾತ್ರವೇ ಭರ್ತಿಯಾಗಿದ್ದು 8 ಖಾಲಿ ಇದೆ. ಪ್ರಯೋಗ ಶಾಲಾ ತಂತ್ರಜ್ಞರು 8 ಹುದ್ದೆಗಳಲ್ಲಿ ಐವರು ಕಾರ್ಯ ನಿರ್ವಹಿಸುತ್ತಿದ್ದಾರೆ. 3 ಖಾಲಿ ಇದೆ. ಫಾರ್ಮಸಿ ಅಧಿಕಾರಿಗಳ 15 ಹುದ್ದೆಗಳಲ್ಲಿ 7 ಭರ್ತಿಯಾಗಿದ್ದರೇ 8 ಖಾಲಿ ಇದೆ. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಯ 63 ಹುದ್ದೆಗಳಲ್ಲಿ 34 ಭರ್ತಿಯಾಗಿದ್ದಾವೆ. 29 ಖಾಲಿ ಇವೆ. ಆರೋಗ್ಯ ನಿರೀಕ್ಷಣಾಧಿಕಾರಿಗಳ 30 ಹುದ್ದೆಯಲ್ಲಿ 4 ಮಾತ್ರವೇ ಭರ್ತಿಯಾಗಿದ್ದು, 26 ಖಾಲಿ ಇದ್ದಾವೆ ಎಂಬುದಾಗಿ ಆರೋಗ್ಯ ಸಚಿವರಲ್ಲಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಮಾಹಿತಿ ನೀಡಿದರು.
ಒಟ್ಟು 152 ಹುದ್ದೆಗಳು ಮಂಜೂರಾಗಿದ್ದರೇ 61 ಮಾತ್ರವೇ ಭರ್ತಿಯಾಗಿದ್ದು 91 ಖಾಲಿ ಇದ್ದಾವೆ. ಈ ಕಾರಣದಿಂದ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡೋದಕ್ಕೆ ತೊಂದರೆ ಆಗುತ್ತಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ಇಲ್ಲವೇ ಎನ್ ಹೆಚ್ ಎಂ ಅಡಿಯಲ್ಲಿ ನೇಮಕಾತಿ ಮಾಡಿಕೊಟ್ಟು, ಉತ್ತಮ ಸೇವೆಗೆ ಅವಕಾಶ ನೀಡುವಂತೆ ಮನವಿ ಪತ್ರವನ್ನು ನೀಡುವ ಮೂಲಕ ಕೋರಲಾಯಿತು. ಈ ಮನವಿಗೆ ಸಕಾರಾತ್ಮಕವಾಗೇ ಸ್ಪಂದಿಸಿದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಂದಿನ ದಿನಗಳಲ್ಲಿ ಎಲ್ಲಾ ಹುದ್ದೆಯನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಡಿ.ಕೆ, ಪಶು ಸಂಗೋಪನ ಇಲಾಖೆಯ ಬಸವರಾಜ ಪಟ್ಟಣ್ಕರ್, ಸಾರಿಗೆ ಇಲಾಖೆಯ ಗಿರೀಶ್, ಸಹಕಾರ ಇಲಾಖೆಯ ಮಂಜುನಾಥ್, ರಾಜ್ಯ ಪರಿಷತ್ ಸದಸ್ಯ ಹಾಗೂ ಉಪನ್ಯಾಸಕ ದೇವೇಂದ್ರಪ್ಪ.ಕೆ, ಆರೋಗ್ಯ ಇಲಾಖೆಯ ಲೋಹಿತ್, ಸೇರಿದಂತೆ ಇತರೆ ನೌಕರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಖಾಯಂ ನಿರೀಕ್ಷೆಯಲ್ಲಿದ್ದ ‘NHM ನೌಕರ’ರಿಗೆ ಬಿಗ್ ಶಾಕ್: ಸ್ಕೀಂ ಮುಗಿದ ಮೇಲೆ ನೋಡೋಣವೆಂದ ‘ಆರೋಗ್ಯ ಸಚಿವ’ರು
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut