ಕಲಬುರಗಿ : ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಸೋಗಿನಲ್ಲಿ ಬಂದು ಮಗುವನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣವಾಗಿದ್ದ ಮಗುವನ್ನು ಮರಳಿ ತಾಯಿ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದ ಕಸ್ತೂರಿ ಎಂಬ ಮಹಿಳೆ ಜಿಮ್ಸ್ ಆಸ್ಪತ್ರೆಯಲ್ಲಿ ನ.25ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಮಗುವಿಗೆ ರಕ್ತ ತಪಾಸಣೆ ಮಾಡಿಸಬೇಕು ಎಂಬ ನೆಪದಲ್ಲಿ ಮಗುವನ್ನು ಅಪಹರಣ ಮಾಡಿದ್ದರು. ಘಟನೆ ಸಂಬಂಧ ಬ್ರಹ್ಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಇದೀಗ ಪೊಲೀಸರು ಅಪಹರಣಕ್ಕೊಳಗಾದ ಮಗುವನ್ನು ಪತ್ತೆ ಹಚ್ಚಿ. ಆರೋಪಿ ಮಹಿಳೆಯಯರಿಬ್ಬರನ್ನು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಕಮಿಷನರ್ ಹಾಗೂ ಪೊಲೀಸ್ ಸಿಬ್ಬಂದಿ ಜಿಮ್ಸ್ ಆಸ್ಪತ್ರೆಗೆ ತೆರಳಿ ನವಜಾತ ಶಿಶುವನ್ನು ತಾಯಿ ಕಸ್ತೂರಿ ಮಡಿಲಿಗೆ ಸೇರಿಸಿದ್ದಾರೆ.