ನವದೆಹಲಿ : ಯಂಗ್ ಇಂಡಿಯಾ ಸ್ಕಿಲ್ ಯೂನಿವರ್ಸಿಟಿ ಸ್ಥಾಪನೆಗಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನೀಡಿದ 100 ಕೋಟಿ ರೂ.ಗಳ ದೇಣಿಗೆಯನ್ನ ತೆಲಂಗಾಣ ರಾಜ್ಯ ಸರ್ಕಾರ ಸ್ವೀಕರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸೋಮವಾರ ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ದೇಣಿಗೆಯು ರಾಜ್ಯ ಸರ್ಕಾರ ಅಥವಾ ಅದರ ನಾಯಕತ್ವಕ್ಕೆ ಅನುಕೂಲಕರವಾಗಿದೆ ಎಂಬ ಅನಗತ್ಯ ಚರ್ಚೆಗಳು ಅಥವಾ ಗ್ರಹಿಕೆಗಳನ್ನ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಅದಾನಿ ಗ್ರೂಪ್ ಸೇರಿದಂತೆ ಯಾವುದೇ ಸಂಸ್ಥೆಯಿಂದ ತೆಲಂಗಾಣ ಸರ್ಕಾರ ಒಂದು ರೂಪಾಯಿಯನ್ನೂ ಸ್ವೀಕರಿಸಿಲ್ಲ. ರಾಜ್ಯ ಸರ್ಕಾರದ ಅಥವಾ ನನ್ನ ಪ್ರತಿಷ್ಠೆಗೆ ಧಕ್ಕೆ ತರುವಂತಹ ವಿವಾದಗಳಲ್ಲಿ ಭಾಗಿಯಾಗಲು ನಾನು ಅಥವಾ ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳು ಬಯಸುವುದಿಲ್ಲ” ಎಂದು ರೆಡ್ಡಿ ಹೇಳಿದರು.
Good News : ದಾಖಲೆಯ 5 ಲಕ್ಷ ನೇಮಕಾತಿ ಘೋಷಿಸಿದ ರೈಲ್ವೆ ಸಚಿವ ‘ವೈಷ್ಣವ್’